| ಜನಾರ್ದನ ರೆಡ್ಡಿಗೆ ಹೈಕಮಾಂಡ್ ಬುಲಾವ್ | | | ಬೆಂಗಳೂರು, ಗುರುವಾರ, 4 ಜೂನ್ 2009( 12:41 IST ) | | | |
| | |
| ಪಕ್ಷದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಬಳಿಕ ವರಿಷ್ಠರ ಒತ್ತಡಕ್ಕೆ ಮಣಿದಿದ್ದ ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಹೇಳಿಕೆಯನ್ನೇ ತಿರುಚಲಾಗಿದೆ ಎಂದು ಸ್ಪಷ್ಟನೆ ನೀಡುವ ಮೂಲಕ ಬಂಡಾಯವನ್ನು ಶಮನ ಮಾಡಿದ್ದರೆ, ಮತ್ತೊಂದೆಡೆ ಗಣಿಧಣಿಗಳ ಮುನಿಸು ಮುಂದುವರಿದಿರುವ ಹಿನ್ನೆಲೆಯಲ್ಲಿ ಸಚಿವ ಜನಾರ್ದನ ರೆಡ್ಡಿಗೆ ಪಕ್ಷದ ಹೈಕಮಾಂಡ್‌ನಿಂದ ಬುಲಾವ್ ಬಂದಿದೆ.ಈಗಾಗಲೇ ರಾಜಧಾನಿಯಲ್ಲಿ ಸಚಿವರಾದ ಶ್ರೀರಾಮುಲು, ಕರುಣಾಕರ ರೆಡ್ಡಿ ಠಿಕಾಣಿ ಹೂಡಿದ್ದಾರೆ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಅಸಮಾಧಾನಗೊಂಡಿರು ರೆಡ್ಡಿ ಬ್ರದರ್ಸ್ ಬೇಡಿಕೆ, ಮುನಿಸು ಶಮನಕ್ಕಾಗಿ ಹೈಕಮಾಂಡ್ ಬುಧವಾರ ಮಾತುಕತೆ ನಡೆಸುವ ನಿಟ್ಟಿನಲ್ಲಿ ಜನಾರ್ದನ ರೆಡ್ಡಿಯನ್ನು ದೆಹಲಿಗೆ ಕರೆಸಿಕೊಂಡಿದೆ. ಇಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ರಾಜನಾಥ್ ಸಿಂಗ್ ಮತ್ತು ಅರುಣ್ ಜೇಟ್ಲಿ ಅವರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಶಾಸಕರ ಭಾವನೆಗಳಿಗೆ ಬೆಲೆಯೇ ಕೊಡುತ್ತಿಲ್ಲ, ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಪಕ್ಷದ ವಿಕಾಸ ಸಂಕಲ್ಪ ಉತ್ಸವ ಕಾರ್ಯಕ್ರಮಕ್ಕೂ ನಮ್ಮನ್ನು ಆಹ್ವಾನಿಸಿಲ್ಲ ಎಂದು ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಅಲ್ಲದೇ ರೆಡ್ಡಿ ಸಹೋದರರ ವರ್ತನೆ ಕೂಡ ಪಕ್ಷದೊಳಗೆ ಬಿಕ್ಕಟ್ಟು ತಲೆದೋರಿದೆ ಎಂಬುದಕ್ಕೆ ಸಾಕ್ಷಿಯಾಗಿತ್ತು.ಅಲ್ಲದೇ ಶ್ರೀರಾಮುಲು ಅವರು ರಹಸ್ಯವಾಗಿ ಸಭೆ ನಡೆಸಿ, ಶಾಸಕರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಹೈಕಮಾಂಡ್‌ಗೆ ತಲುಪಿರುವ ಬೆನ್ನಲ್ಲೇ ಮಸುಕಿನ ಗುದ್ದಾಟಕ್ಕೆ ತೆರೆ ಎಳೆಯುವಲ್ಲಿ ರಾಷ್ಟ್ರೀಯ ನಾಯಕರು ಮುಂದಾಗಿದ್ದಾರೆ.ಆದರೆ ಗಣಿಧಣಿಗಳ ಬೇಡಿಕೆ ಏನು? ಅಕ್ರಮ ಗಣಿಗಾರಿಕೆ ಕುರಿತು ರಾಜ್ಯ ಸರ್ಕಾರ ಜಂಟಿ ಸಮೀಕ್ಷೆಗೆ ಹಸಿರು ನಿಶಾನೆ ತೋರಿಸಿರುವುದನ್ನು ವಾಪಸ್ ಪಡೆಯಬೇಕೆಂಬುದೇ ಅಥವಾ ಕರುಣಾಕರ ರೆಡ್ಡಿಯನ್ನು ಡಿಸಿಎಂ ಮಾಡಬೇಕೆಂಬುದೇ ? ಯಾವುದು ಸ್ಪಷ್ಟವಾಗಿಲ್ಲ ಅಂತೂ ಇದೀಗ ರೆಡ್ಡಿ ಬ್ರದರ್ಸ್ ಮುನಿಸು ಶಮನಗೊಳಿಸಲುವ ಕೆಲದಲ್ಲಿ ತೊಡಗಿದ್ದಾರೆ. |
| |
| | |
| | | |
|
| | |
|
|
| | |
|
|
| |
|  | |