ಟೋಕಿಯೊ ಮೂರನೇ ತ್ರೈಮಾಸಿಕ ಅವಧಿಯಲ್ಲಿ ನಿವ್ವಳ ಲಾಭದಲ್ಲಿ ಕುಸಿತವಾಗಿದ್ದರಿಂದ ಸುಮಾರು 20 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ಜಾಗತಿಕ ವಾಹನೋದ್ಯಮ ವಹಿವಾಟು ಕುಸಿದಿರುವ ಹಿನ್ನೆಲೆಯಲ್ಲಿ ನಿಸಾನ್ ವಾಹನ ತಯಾರಿಕೆ ಸಂಸ್ಥೆ ಕೂಡಾ ಭಾರಿ ನಷ್ಟವನ್ನು ಎದುರಿಸಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ. |