ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ > ಸತ್ಯಂ ರಾಜು: ನೆಲದ ಕಾನೂನು v/s ನೆಲದ ಪ್ರೀತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂ ರಾಜು: ನೆಲದ ಕಾನೂನು v/s ನೆಲದ ಪ್ರೀತಿ
PTI
ಸತ್ಯಂ ಕುಸಿತಕ್ಕೆ ನೈಜ ಕಾರಣವೇನು? ಇದೀಗ ಈ ರಾಷ್ಟ್ರದ ಜನಸಾಮಾನ್ಯನ ಮನದಲ್ಲಿ ಮೂಡಿರುವ ಪ್ರಶ್ನೆ ಇದು. ಇಷ್ಟು ಸಮಯದವರೆಗೆ ಆಂಧ್ರದ ಐಟಿ ಐಕಾನ್, ಯುವಕರ ಆದರ್ಶ, ಬಡವರ ಬಂಧು, ಆಂಧ್ರದ ಕಾರ್ಪೋರೆಟ್ ಪ್ರತಿನಿಧಿ ಎಂಬೆಲ್ಲ ಬೋಪರಾಕ್ ಹಾಕಿಸಿಕೊಂಡಿದ್ದ ರೆಡ್ಡಿ ದಿನಬೆಳಗಾಗುವಲ್ಲಿ ಒಂದೇ ಏಟಿಗೆ ವಂಚಕ, ದ್ರೋಹಿ, ದುಷ್ಟ, ಎಂದೆಲ್ಲ ಬಣ್ಣಿಸಿಕೊಂಡು ವಿಲನ್ ಆಗಿ ಹೋದರು.

ತಾನು ಮಾಡಿರುವ ಅನಾಚಾರವನ್ನು ಒಪ್ಪಿಕೊಳ್ಳುತ್ತೇನೆ ಮತ್ತು ಈ ನೆಲದ ಕಾನೂನಿಗೆ ಬದ್ಧವಾಗಿ ಕ್ರಮಗಳನ್ನು ಎದುರಿಸಲು ಸಿದ್ಧವಾಗಿದ್ದೇನೆ ಎಂದು ಹೇಳಿರುವ ರಾಜು, ಏಳು ಸಾವಿರ ಕೋಟಿಗಳಷ್ಟು ದೊಡ್ಡಮೊತ್ತದ ಉಂಡೆನಾಮ ತಿಕ್ಕಲು ಕಾಣವಾದರೂ ಏನು? ನೆಲದ ಮೇಲಿನ ಅವರ ಪ್ರೀತಿಯೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಅವರ ಕುಟುಂಬದ ವಶದಲ್ಲಿ ಸರಿಸುಮಾರು 6,500 ಎಕರೆ ಭೂಮಿ ಇತ್ತು. ಅಂದರೆ ಅವರ ಕುಟುಂಬದ ಸಂಸ್ಥೆ ಮೇತಾಸ್ ಪ್ರಾಪರ್ಟಿ ಮೂಲಕ ಇಷ್ಟೊಂದು ಅಗಾಧ ಪ್ರಮಾಣದ ಆಸ್ತಿ ಕಲೆಹಾಕಲಾಗಿದೆ. ಮೇತಾಸ್ ರಾಷ್ಟ್ರದ 10 ಉನ್ನತ ಜಮೀನ್ದಾರರಲ್ಲಿ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಅವರ ಈ ರಿಯಲ್ ಎಸ್ಟೇಟ್ ಸಾಮ್ರಾಜ್ಯಕ್ಕೆ ಅಗಾಧ ಪ್ರಮಾಣದ ಹಣಬೇಕಾಗಿದ್ದು, ಸತ್ಯಂ ಕಂಪ್ಯೂಟರ್ಸ್ ಇದಕ್ಕೆ ಹಾಲು ಕರೆಯುವ ಹಸುವಾಗಿತ್ತು ಎಂಬುದಾಗಿ ಬಲ್ಲವರು ಹೇಳುತ್ತಾರೆ. ರಾಜು ಅವರು ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ಅತ್ಯಂತ ನಿಕಟ ಸಂಬಂಧ ಹೊಂದಿದ್ದರು. ಹೈದರಾಬಾದಿಗೆ ಜಾಗತಿಕ ಗುಡ್‌ವಿಲ್ ಗಳಿಸಲು ನಾಯ್ಡು, ರಾಜು ಅವರನ್ನು ಬಳಸಿಕೊಂಡು ಪ್ರದರ್ಶಿನ ಮಾಡುತ್ತಿದ್ದರು.

ರೆಡ್ಡಿ ಬಳಿಕ ಅಧಿಕಾರಕ್ಕೆ ಬಂದ ವೈ.ಎಸ್. ವಿ. ರಾಜಶೇಖರ್ ರೆಡ್ಡಿ ಅವರೊಂದಿಗೂ ರಾಜು ಉತ್ತಮ ಸಂಬಂಧವನ್ನು ಹೊಂದಿದ್ದರು.

ಆದರೆ ಇದೀಗ ತಾನೇ ಹೆಣೆದ ಬಲೆಯಲ್ಲಿ ಸಿಲುಕಿ ರಾಜು ವಿಲವಿಲ ಒದ್ದಾಡುತ್ತಿರುವ ವೇಳೆ ಈ ಹಾಲಿ ಹಾಗೂ ಮಾಜಿಗಳಿಬ್ಬರೂ ರಾಜುವಿನಿಂದ ಅಂತರ ಕಾಯ್ದುಕೊಂಡಿದ್ದು, ಪರಸ್ಪರರ ವಿರುದ್ಧ ಬೆರಳು ತೋರಿಸಿಕೊಳ್ಳುತ್ತಿದ್ದಾರೆ.

ರಾಜು ಕುಟುಂಬ ಒಡೆತನದ ಮೇತಾಸ್ ಪ್ರಾಪರ್ಟೀಸ್ ಮತ್ತು ಮೇತಾಸ್ ಇನ್‌ಫ್ರಾಸ್ಟ್ರಕ್ಚರ್ ಹಲವಾರು ಪ್ರತಿಷ್ಠಿತ ಯೋಜನೆಗಳನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಇದರಲ್ಲಿ ಹೈದರಾಬಾದ್ ಮೆಟ್ರೊ ರೈಲು, ಮಚಲಿಪಟ್ಟಣಂ ಬಂದರು ಯೋಜನೆ ಮತ್ತು ಆಂಧ್ರ ಮತ್ತು ಬೆಂಗಳೂರಿನ ವಿಮಾನ ನಿಲ್ದಾಣ ಯೋಜನೆಗಳು ಸೇರಿವೆ.

ಈ ಎಲ್ಲಾ ಯೋಜನೆಗಳೂ ಪರಿಶುದ್ಧವಾಗಿಲ್ಲ ಹಾಗೂ ಪಾರದರ್ಶಕವಾಗಿಲ್ಲ ಎಂಬ ಆರೋಪಗಳು ಈಗ ಕೇಳಿಬರುತ್ತಿದೆ. ಮಾಜಿ ಆರ್ಥಿಕ ವ್ಯವಹಾರ ಕಾರ್ಯದರ್ಶಿ ಇಎಎಸ್ ಶರ್ಮಾ ಅವರ ಆರೋಪ ಪ್ರಕಾರ ಸ್ಫರ್ಧಾತ್ಮಕ ಪ್ರಕ್ರಿಯೆಗಳನ್ನು ಅನುಸರಿಸಿಲ್ಲ.

ರಾಜ್ಯ ಸರ್ಕಾರವು ಎಲ್ಲಾ ಬಂದರು ಮತ್ತು ನೀರಾವರಿ ಯೋಜನೆಗಳನ್ನು ಮರುಪರಿಶೀಲಿಸಿ ಹಣಕಾಸು ವಿವರಣೆಗಳು ಸರಿ ಇದೆಯೇ ಎಂದು ನೋಡಬೇಕಿದೆ. ಇಲ್ಲವಾದರೆ ಯೋಜನೆಗಳನ್ನು ಹಿಂತೆಗೆದುಕೊಳ್ಳಬೇಕಿದೆ ಎಂದು ಶರ್ಮಾ ಹೇಳುತ್ತಾರೆ.

ಹೈದರಾಬಾದ್ ಮೆಟ್ರೋ ರೈಲು ಯೋಜನೆಯನ್ನು ಮೇತಾಸ್ ಪಡೆದಿರುವುದನ್ನು ದೆಹಲಿ ಮೆಟ್ರೋ ಮುಖ್ಯಸ್ಥ ಇ.ಶ್ರೀಧರನ್ ಅವರು ಭವಿಷ್ಯದ ರಾಜಕೀಯ ಹಗರಣ ಎಂದು ಕರೆದಿದ್ದಾರೆ. ಅಲ್ಲದೆ ಖಾಸಗಿ ಸಂಸ್ಥೆಯೊಂದಕ್ಕೆ ಜಮೀನು ಮಂಜೂರು ಮಾಡಿರುವುದನ್ನೂ ಅವರು ಪ್ರಶ್ನಿಸಿದ್ದಾರೆ.

ತನಿಖೆಗಳು ಮುಂದುವರಿದಂತೆ ಕರ್ಮಕಾಂಡಗಳ ಇನ್ನಷ್ಟು ಅಸ್ಥಿಪಂಜರಗಳು ಹೊರಬೀಳಲಿದೆ. ಇದೀಗ ರಾಜು ಅವರ ನೆಲದ ಪ್ರೀತಿಗಾಗಿ ಅವರೀಗ ಈ ನೆಲದ ಕಾನೂನನ್ನು ಎದರಿಸಬೇಕಾಗಿದೆ. ಮುಂದೇನಾಗುತ್ತದೋ?
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅ'ಸತ್ಯಂ': ಚಿನ್ನದ ನವಿಲು ಈಗ ಕಾಗದದ ಹುಲಿ!
ದಾಳಿಗೊಂದು ತಿಂಗಳು: ಎಚ್ಚರಿಕೆ ನೀಡುತ್ತಲೇ ಇದೆ ಭಾರತ
ಸರಣಿ ತಿಪ್ಪರಲಾಗ: ಪಾಕಿಸ್ತಾನಕ್ಕೇನಾಗಿದೆ?
ಅಪಾಯ! ಇಂಟರ್ನೆಟ್ ಎಕ್ಸ್‌ಪ್ಲೋರರ್ ಅಪ್‌ಡೇಟ್ ಮಾಡಿಕೊಳ್ಳಿ
ಉಗ್ರ ನಿಗ್ರಹ: ಹೊಸ ಕಾನೂನಿನಲ್ಲಿ ಏನೇನಿದೆ?
ಇದೋ ಬಂದಿದೆ 3-ಜಿ ಸೌಲಭ್ಯ: ಏನಿದು?