|
ನವಾಜ್ ಷರೀಫ್ ನಾಮಪತ್ರ ತಿರಸ್ಕ್ರತ
|
|
|
ಇಸ್ಲಾಮಾಬಾದ್, ಸೋಮವಾರ, 3 ಡಿಸೆಂಬರ್ 2007( 18:39 IST )
|
|
|
|
|
|
|
|
ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ನಾಮಪತ್ರವನ್ನು ಪಾಕಿಸ್ತಾನದ ಚುನಾವಣಾ ಆಯೋಗ ತಿರಸ್ಕರಿಸಿದೆ.
ಈಗಾಗಲೇ ಷರೀಫ್ ಸಹೋದರ ಶಾಹಬಾಜ್ ಷರೀಫ್ ಅವರ ನಾಮಪತ್ರ ತಿರಸ್ಕ್ರತಗೊಂಡಿರುವುದರಿಂದ ಮುಂಬರುವ ಜನೆವರಿ 8ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗಿದ್ದಾರೆ.
ಪಾಕ್ ಸಂವಿಧಾನದಲ್ಲಿ ಯಾವುದೇ ವ್ಯಕ್ತಿ ನ್ಯಾಯಾಲಯದ ವಿಚಾರಣೆಯಲ್ಲಿರುವಾಗ ಚುನಾವಣೆಗೆ ಸ್ಪರ್ಧಿಸಲು ಅನರ್ಹನು ಎನ್ನುವ ಕಾನೂನಿಂದಾಗಿ ಸಿಂಧ್ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದಿಂದಾಗಿ ನವಾಜ್ ಷರೀಫ್ ಅವರ ನಾಮಪತ್ರ ತಿರಸ್ಕ್ರತವಾಗಿರಬಹುದು ಎಂದು ಮೂಲಗಳು ತಿಳಿಸಿವೆ.
ಚುನಾವಣೆ ಬಹಿಷ್ಕರಿಸುವಂತೆ ವಿರೋಧ ಪಕ್ಷಗಳನ್ನು ಒಂದುಗೂಡಿಸಲು ಶ್ರಮಿಸುತ್ತಿರುವ ಸಂದರ್ಭದಲ್ಲಿ ಚುನಾವಣಾ ಆಯೋಗದ ನಿರ್ಧಾರದಿಂದಾಗಿ ಪಿಎಮ್‌ಎಲ್ ಪಕ್ಷ ಒಡೆದು ಹೋಳಾಗುವ ಸಾಧ್ಯತೆಗಳಿವೆ ಎಂದು ಪಕ್ಷದ ಧುರೀಣರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
|
|
|
|
|
|
|
|