ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಾಜಾ: ಈರ್ವರು ಇಸ್ರೇಲಿಗಳ ಹತ್ಯೆ
ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಇರವ ಗಾಝಾ ಪ್ರದೇಶದಲ್ಲಿ ಹಮಾಸ್ ಬಂಡುಕೊರರ ದಾಳಿಯಲ್ಲಿ ಇಬ್ಬರು ಇಸ್ರೇಲ್ ನಾಗರಿಕರು ಮೃತ ಪಟ್ಟಿದ್ದಾರೆ ಎಂದು ಇಸ್ರೇಲ್ ಪ್ರಕಟಣೆಯಲ್ಲಿ ಹೇಳಿದೆ.

ಈ ದಾಳಿ ನಡೆದ ಕೆಲವೇ ಕ್ಷಣದಲ್ಲಿ, ಇಸ್ರೇಲ್ ಗಾಜಾದಲ್ಲಿರುವ ಮನೆಯೊಂದರ ಮೇಲೆ ಫಿರಂಗಿ ದಾಳಿ ನಡೆಸಿದ್ದು, ಒರ್ವ ಹದಿಯರೆಯದ ವ್ಯಕ್ತಿ ಸೇರಿದಂತೆ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಇಸ್ರೇಲ್ ನಾಗರಿಕರ ಹತ್ಯೆಗೆ ಕಾರಣನಾಗಿದ್ದ ಬಂಡುಕೋರನೋರ್ವ ಮರಣವನ್ನಪ್ಪಿದ್ದಾನೆ ಎಂದು ಪೊಲೀಸ್ ವಕ್ತಾರರು ಹೇಳಿದ್ದಾರೆ. ಕಳೆದ ಮಂಗಳವಾರ ರಾತ್ರಿ ಇಸ್ರೇಲ್ ಸೈನಿಕರು ಮತ್ತು ಹಮಾಸ್‌ನ ಬಂಡುಕೋರರ ನಡುವೆ ಘರ್ಷಣೆ ನಡೆದಿದ್ದು, ಗುಂಡಿನ ಚಕಮಕಿಯಲ್ಲಿ ಓರ್ವ ಸೈನಿಕ ಮತ್ತು ಹಮಾಸ್ ಬಂಡುಕೋರನೊಬ್ಬ ಸಾವನ್ನಪ್ಪಿದ್ದರು.

ಫಿರಂಗಿ ದಾಳಿಗೆ ಸಂಬಂಧಿಸಿದಂತೆ ಇಸ್ರೇಲ್ ಸರಕಾರವು ಗಾಜಾದ ಹಮಾಸ್ ಬಂಡುಕೋರರು ಈ ದಾಳಿಗೆ ಕಾರಣರು ಎಂದು ಆರೋಪಿಸಿದ್ದು, ಈ ಬಂಡುಕೋರರು ಪ್ಯಾಲೆಸ್ತೀನ್ ಗಡಿಪ್ರದೇಶಕ್ಕೆ ಸೈನ್ಯ ಮತ್ತು ವಿಮಾನಗಳನ್ನು ರವಾನಿಸಿದ್ದರು ಎನ್ನಲಾಗಿದೆ.ಏತನ್ಮಧ್ಯೆ ದಾಳಿ ನಡೆದ ಸ್ಥಳಕ್ಕೆ ಕೆಲವೇ ಕ್ಷಣದಲ್ಲಿ ಆಗಮಿಸಿದ ಮಿಲಿಟರಿ ಪಡೆಯು, ಇಬ್ಬರು ಆಕ್ರಮಣಕಾರರನ್ನು ಹತ್ಯೆಗೈದಿದ್ದು, ಇನ್ನಿಬ್ಬರು ಅಲ್ಲಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ ಇಸ್ರೇಲ್‌ನ ಮಿಲಿಟರಿ ವಕ್ತಾರ ಮಜ್ ಟಲಸ್ ಲೆವ್ರಾಮ್ ಹೇಳಿದ್ದಾರೆ.
ಮತ್ತಷ್ಟು
ನೇಪಾಳನಲ್ಲಿ ಐತಿಹಾಸಿಕ ಚುನಾವಣೆ ಪ್ರಾರಂಭ
ಇದು ನಿಜ: ಶ್ವಾಸಕೋಶವಿಲ್ಲದ ಕಪ್ಪೆ ಇಲ್ಲಿದೆ
ಮೇ 20ರಂದು ಇಂಡೊ-ಪಾಕ್ ಮಾತುಕತೆ
ನೇಪಾಳ: 7 ಮಾವೋವಾದಿಗಳ ಹತ್ಯೆ
ಉಗ್ರರ ನಂಟಿರುವ ಮುಸ್ಲೀಂರ ಬಿಡುಗಡೆ
ಸೇನಾಪಡೆ ವಾಪಸಾತಿಗೆ ಹಿಲರಿ ಒತ್ತಾಯ