ಇರಾಕನಲ್ಲಿ ಇರುವ ಅಮೆರಿಕ ರಾಯಭಾರಿ ಮತ್ತು ಅಮೆರಿಕ ಜನರಲ್ ಅವರು ಇರಾಕ್‌ನಲ್ಲಿ ಸೈನ್ಯ ಪಡೆಯನ್ನು ಸಧ್ಯಕ್ಕೆ ಹಿಂತೆಗೆಯುವ ಸಾಧ್ಯತೆ ಇಲ್ಲ ಎಂಬ ಹೇಳಿಕೆಯನ್ನು ಹಿಲರಿ ಕ್ಲಿಂಟನ್ ಅವರು ಕಟುವಾಗಿ ಟೀಕಿಸಿದ್ದು, ಇರಾಕ್‌ನಿಂದ ಕೂಡಲೇ ಸೈನ್ಯವನ್ನು ಹಿಂತೆಗೆಯಬೇಕೆಂದು ಅಗ್ರಹಿಸಿದ್ದಾರೆ.
ಕಳೆದ ಐದು ವರ್ಷಗಳಿಂದ ಇರಾಕ್‌ನಿಂದ ಸೇನೆಯನ್ನು ಹಿಂದಕ್ಕೆ ಕರೆಸಲಾಗುವುದು ಎಂಬ ಮಾತನ್ನು ಕೇಳುತ್ತಿದ್ದೇವೆ, ಇದರ ಬದಲಾವಣೆ ಅಗತ್ಯ ಎಂದು ನ್ಯೂಯಾರ್ಕ್ ಸೆನೆಟರ್ ಹಿಲರಿ ಅವರು ಜನರಲ್ ಡೇವಿಡ್ ಪೆಟ್ರಿಯಸ್ ಮತ್ತು ಬಾಗ್ದಾದ್‌ನಲ್ಲಿ ಇರುವ ಅಮೆರಿಕದ ರಾಯಭಾರಿ ರೈನ್ ಕ್ರೋಕರ್ ಅವರಿಗೆ ಹೇಳಿದರು.
ಇದೀಗ ಅಮೆರಿಕದ ನೀತಿಯು ಇರಾಕ್‌ನಲ್ಲಿ ಸರಿಯಾಗಿ ಕಾರ್ಯಚರಣೆ ನಡೆಸುತ್ತಿಲ್ಲವಾದರೆ ಅಂತಹ ನೀತಿಯನ್ನು ಮುಂದುವರಿಸುವುದರಲ್ಲಿ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದ ಹಿಲರಿ, ಇರಾಕ್‌ನ ಇಂದಿನ ಪರಿಸ್ಥಿತಿಯು ಸೂಕ್ಷ್ಮವಾಗಿದೆ ಎಂಬುದಾಗಿ ಅಭಿಪ್ರಾಯ ಪಟ್ಟರು. ಪ್ರಸಕ್ತ ಪರಿಸ್ಥಿತಿಯಲ್ಲಿ ಇರಾಕ್‌ನಲ್ಲಿರುವ ಅಮೆರಿಕದ ಸೇನೆಯನ್ನು ಹಿಂತೆಗೆಯುವುದು ಸೂಕ್ತ ಎಂಬುದಾಗಿ ಅವರು ಹೇಳಿಕೆ ನೀಡಿದರು.
|