ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಪ್ರದಾಯ ಮುರಿದ ಪಾಕ್ ಅಧ್ಯಕ್ಷ
WD
ಪಾಕಿಸ್ತಾನದಲ್ಲಿ ತನ್ನ ವಿರೋಧಿ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿದಿರುವುದರಿಂದ ಇರಿಸುಮುರಿಸುಗೊಂಡಿರುವ ಅಧ್ಯಕ್ಷ ಪರ್ವೇಜ್ ಮುಶರಫ್, ರಾಷ್ಟ್ರೀಯ ಅಸ್ಸೆಂಬ್ಲಿಯ ಜಂಟಿ ಸದನವನ್ನುದ್ದೇಶಿಸಿ ಅಧ್ಯಕ್ಷರು ಮಾತನಾಡಬೇಕಿರುವ ಸಂಪ್ರದಾಯವನ್ನು ಮುರಿದಿದ್ದಾರೆ.

ಪಿಪಿಪಿ ನೇತೃತ್ವದ ಸಮ್ಮಿಶ್ರ ಸರಕಾರದ ಸಲಹೆಯ ಮೇರೆಗೆ ಮುಶರಫ್ ಗುರುವಾರದಂದು ಸಂಸತ್ತಿನ ಕೆಳಮನೆಯ ಅಧಿವೇಶನವನ್ನು ಕರೆದಿದ್ದಾರೆ. ಅಲ್ಲಿನ ಸಂವಿಧಾನ ಹೇಳುವ ಪ್ರಕಾರ, ಚುನಾವಣೆಯ ಬಳಿಕ ಕೆಳಮನೆಯ ಪ್ರಥಮ ಅಧಿವೇಶನಕ್ಕಿಂತ ಮೊದಲಿಗೆ ಅಧ್ಯಕ್ಷರು ರಾಷ್ಟ್ರಿಯ ಅಸ್ಸೆಂಬ್ಲಿಯ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಬೇಕು.

ಮುಶರಫ್ ಅವರ ವಿರೋಧಿಗಳ ಪಿಪಿಪಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಅವರ ಪಿಎಂಎಲ್(ಕ್ಯೂ) ತೀವ್ರ ಮುಖಭಂಗ ಅನುಭವಿಸಿದೆ. ಈ ಎಲ್ಲ ವಿದ್ಯಮಾನಗಳಿಂದ ಬದಿಗೆ ತಳ್ಳಲ್ಪಟ್ಟಿರುವ ಮುಶರಫ್, ನೂತನ ಸಂಸತ್ತಿನಿಂದ ದೂರವೇ ಉಳಿಯಲು ಬಯಸಿದ್ದು ಸಂಪ್ರದಾಯ ಮುರಿದಿದ್ದಾರೆ.

ಹಿಂದಿನ ಸರಕಾರದಲ್ಲಿ ಐದು ವರ್ಷದ ವೇಳೆಗೆ ಮುಶರಫ್ ಕೇವಲ ಒಂದು ಬಾರಿ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಮತ್ತಷ್ಟು
ಪಂಚಾಯತ್‌ರಾಜ್ 'ಮಹಾನ್ ಪ್ರಯೋಗ: ಅನ್ಸಾರಿ
ಕಾಶ್ಮೀರ: ನೂತನ ವಿಧಾನಕ್ಕೆ ಪಾಕ್ ಹಿಂಜರಿಯದು
ಭಾರತೀಯ ಉದ್ಯೋಗಿಗಳ ಪರ ಐತಿಹಾಸಿಕ ತೀರ್ಪು
ಆರು ಪುಲಿಟ್ಜರ್ ಪ್ರಶಸ್ತಿ ಬಾಚಿದ ವಾಷಿಂಗ್‌ಟನ್ ಪೋಸ್ಟ್‌
ಭಯೋತ್ಪಾದಕರೊಂದಿಗೆ ಪಾಕ್ ಮಾತುಕತೆ ಇಲ್ಲ
ನ್ಯೂಯಾರ್ಕ್: 'ಗಾಂಧಿ ಪರಂಪರಾ ಮಾಸ' ಆರಂಭ