ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರು ಪುಲಿಟ್ಜರ್ ಪ್ರಶಸ್ತಿ ಬಾಚಿದ ವಾಷಿಂಗ್‌ಟನ್ ಪೋಸ್ಟ್‌
ಪತ್ರಿಕೋದ್ಯಮದಲ್ಲಿ ವಿಶೇಷ ಸಾಧನೆಗಾಗಿ ಕೊಡಮಾಡುವ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಯ ಸಿಂಹ ಪಾಲನ್ನು ವಾಷಿಂಗ್‌ಟನ್ ಪೋಸ್ಟ್ ಗೆದ್ದುಕೊಂಡಿದೆ. ಪುಲಿಟ್ಜರ್‌ ಪ್ರಶಸ್ತಿಯ 14 ವಿಭಾಗಗಳಲ್ಲಿ, ವಾಷಿಂಗ್‌ಟನ್ ಪೋಸ್ಟ್ ಆರು ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ಈ ಪ್ರಶಸ್ತಿಯಲ್ಲಿ ವಾಷಿಂಗ್ಟನ್ ಪೋಸ್ಟ್ ಪ್ರಕಟಿಸಿದ ವರ್ಜೀನಿಯಾ ಶೂಟಿಂಗ್‌ ಸುದ್ದಿಗೆ ಅಗ್ರ ಸುದ್ದಿಯ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗಿದೆ.

ವಿರ್ಜಿನಿಯಾದಲ್ಲಿ ನಡೆದ ಭೀಕರ ಗುಂಡು ದಾಳಿಯ ಸುದ್ದಿಯನ್ನು ಪ್ರಕಟಿಸಿದ ವಾಷಿಂಗ್ಟನ್ ಪೋಸ್ಟ್ ಪತ್ರಿಕಾ ಸಿಬ್ಬಂದಿಗೆ ಬ್ರೇಕಿಂಗ್ ನ್ಯೂಸ್ (ತತ್‌ಕ್ಷಣದ ಸುದ್ದಿ) ವಿಭಾಗದ ಪ್ರಶಸ್ತಿಯನ್ನು ನೀಡಲಾಗಿದೆ. ಅಂತಾರಾಷ್ಟ್ರೀಯ ಸುದ್ಧಿ ವಿಭಾಗದಲ್ಲಿ ಇರಾಕ್‌‌‌‌‌‌‌‌‌‌‌‌‌‌‌‌‌‌‌‌ನಲ್ಲಿನ ಖಾಸಗಿ ಭದ್ರತಾ ಗುತ್ತಿದಾರರ ಕುರಿತ ವರದಿಗಾಗಿ ಇದೇ ಪತ್ರಿಕೆಯ ಸ್ಟೀವ್ ಫೈನೆ ಪಡೆದುಕೊಂಡಿದ್ದಾರೆ.

ನ್ಯೂಯಾರ್ಕ್ ಟೈಮ್ಸ್ ವಿವರಣಾತ್ಮಕ ವರದಿಗಾಗಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಚಿಕಾಗೋ ಟ್ರಿಬ್ಯೂನ್‌ ಜೊತೆ ತನಿಖಾ ವರದಿ ಪ್ರಶಸ್ತಿಯನ್ನು ಹಂಚಿಕೊಂಡಿದೆ. ಪಾಕಿಸ್ತಾನಿ ಸಂಜಾತ ಮತ್ತು ಬ್ಯಾಂಕಾಕ್‌ನಲ್ಲಿ ನೆಲೆಸಿರುವ ಅಡ್ರೀಸ್ ಲತೀಫ್ ರಾಯ್ಟರ್‌ ಸುದ್ದಿಸಂಸ್ಥೆಗೆ ಪ್ರಶಸ್ತಿಯನ್ನು ಗಳಿಸಿಕೊಟ್ಟಿದ್ದಾರೆ. ಇವರು ಮ್ಯಾನ್ಮಾರ್‌ನಲ್ಲಿ ಮಾರಣಾಂತಿಕ ಗಾಯಗೊಂಡ ಜಪಾನಿಯರ ಫೋಟೋಗಾಗಿ ಪ್ರಶಸ್ತಿ ಪಡೆದಿದ್ದಾರೆ.

ಸಂಪಾದಕೀಯ ಬರವಣಿಗೆಗಾಗಿ ಯಾರಿಗೂ ಪ್ರಶಸ್ತಿ ನೀಡಲಾಗಿಲ್ಲ. ಆದರೆ ಇನ್ವೆಸ್ಟರ್ಸ್ ಬಿಸಿನೆಸ್ ಡೈಲಿಯ ಸಂಪಾದಕೀಯ ವ್ಯಂಗ್ಯಚಿತ್ರಕ್ಕಾಗಿ ಮೈಕೆಲ್ ರಮಿರೆಸ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಬೋಸ್ಟನ್ ಗ್ಲೋಬ್‌ನ ಫಿನೇ ಮತ್ತು ಕಾನ್‌ಕರ್ಡ್ ಮಾನೀಟರ್‌ನ ಪ್ರಿಸ್ಟನ್ ಗೇನ್ನವೇ ಪೀಚರ್ ಫೋಟೋಗ್ರಫಿಗಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಮತ್ತಷ್ಟು
ಭಯೋತ್ಪಾದಕರೊಂದಿಗೆ ಪಾಕ್ ಮಾತುಕತೆ ಇಲ್ಲ
ನ್ಯೂಯಾರ್ಕ್: 'ಗಾಂಧಿ ಪರಂಪರಾ ಮಾಸ' ಆರಂಭ
ಭುಟ್ಟೋ ಕರಾಚಿ ರಾಲಿ ತನಿಖೆಗೆ ಹೊಸ ನ್ಯಾಯಾಧಿಕರಣ
ಮೋಂಟೆನ್‌‌‌‌ಗ್ರೊ: ಫಿಲಿಪ್‌ಗೆ ಪ್ರಬಲ ಸ್ಪರ್ಧೆ
ಹಾಲಿವುಡ್ ನಟ ಹೆಸ್ಟನ್ ವಿಧಿವಶ
ಉಗ್ರರ ಬಾಂಬ್‌‌ ದಾಳಿಗೆ ಸಚಿವ ಬಲಿ