ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೇಪಾಳ: 7 ಮಾವೋವಾದಿಗಳ ಹತ್ಯೆ
ನೇಪಾಳದಲ್ಲುಂಟಾದ ಚುನಾವಣಾ ಸಂಬಂಧಿ ಗಲಭೆಯಲ್ಲಿ ಏಳು ಮಾವೋವಾದಿಗಳನ್ನು ಪೊಲೀಸರು ಹತ್ಯೆ ಮಾಡಿದ್ದಾರೆ ಎಂದು ಮಾವೋ ಪಕ್ಷದ ಮುಖಂಡರು ಹೇಳಿಕೆ ನೀಡಿದ್ದಾರೆ. ಏತನ್ಮಧ್ಯೆ ಪಕ್ಷದ ಇನ್ನೋರ್ವ ಅಭ್ಯರ್ಥಿ ಪ್ರತ್ಯೇಕ ಘಟನೆಯೊಂದರಲ್ಲಿ ಸಾವನ್ನಪ್ಪಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.

ನೇಪಾಳದಲ್ಲಿ ಗುರುವಾರ ಚುನಾವಣೆ ನಡೆಯಲಿದ್ದು, 240 ವರ್ಷಗಳ ಕಾಲದ ಚಕ್ರಾಧಿಪತ್ಯದ ಆಡಳಿತಕ್ಕೆ ಅಂತ್ಯ ಹಾಡುವ ಮೂಲಕ ಪ್ರಜಾಪ್ರಭುತ್ವ ಜಾರಿಗೆ ಬರಲಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಉಂಟಾದ ಘರ್ಷಣೆಯಲ್ಲಿ ಮಾವೋವಾದಿಗಳ ಪ್ರತಿಸ್ಪರ್ಧಿಗಳಾದ ನೇಪಾಳಿ ಕ್ರಾಂಗ್ರೆಸ್ ಪಕ್ಷದ ಜನರು ಮಾವೋವಾದಿಗಳ ಮೇಲೆ ಗುಂಡು ಹಾರಿಸುವಂತೆ ಆದೇಶ ನೀಡಿದ್ದರು ಎಂದು ಮಾವೋವಾದಿ ಸಂಘಟನೆಗಳು ಆರೋಪ ಮಾಡಿವೆ.

"ಈ ಘಟನೆಯು ಗಂಭೀರವಾಗಿದ್ದು, ತಪ್ಪಿತಸ್ಥರಿಗೆ ಖಂಡಿತ ಶಿಕ್ಷೆ ವಿಧಿಸಬೇಕು" ಎಂದು ಹಿರಿಯ ಮಾವೋವಾದಿ ನಾಯಕರಾದ ಬಾಬುರಾಮ್ ಭಟ್ಟಾರಿ ಆಗ್ರಹಿಸಿದ್ದಾರೆ. ಈ ಘಟನೆಯಲ್ಲಿ ಹತ್ಯೆಗೊಳಗಾದ ವ್ಯಕ್ತಿಗಳ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಗಳು ತಿಳಿದು ಬಂದಿಲ್ಲವಂದು ಗೃಹ ಖಾತೆ ಸಚಿವಾಲಯದ ವಕ್ತಾರ ಮೋಡ್ರಾಜ್ ಡೋಟೆಲ್ ಹೇಳಿಕೆ ನೀಡಿದ್ದಾರೆ. ನೇಪಾಳದಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಸಲು ಉಸ್ತುವಾರಿ ವಹಿಸಿಕೊಂಡಿರುವ ವಿಶ್ವ ಸಂಸ್ಥೆಯು ಈ ಘಟನೆ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ.

ಇನ್ನೊಂದು ಘಟನೆಯಲ್ಲಿ ಕಮ್ಯೂನಿಸ್ಟ್ ಯುಎಂಎಲ್ ಪಕ್ಷದ ಅಭ್ಯರ್ಥಿಯೊಬ್ಬರು ಸುರ್ಕೇತ್ ಜಿಲ್ಲೆಯಲ್ಲಿ ಹತ್ಯೆಗೊಳಗಾಗಿದ್ದಾರೆಂದು ಡೋಟೆಲ್ ತಿಳಿಸಿದ್ದಾರೆ. ಚುನಾವಣೆ ಪ್ರಯುಕ್ತ ಈವರೆಗೆ ಕನಿಷ್ಠ 11 ಮಂದಿ ಸಾವಿಗೀಡಾಗಿದ್ದಾರೆ.

ನಾಳೆ ನಡೆಯಲಿರುವ ಚುನಾವಣೆಯು ಶಾಂತಿಯುತವಾಗಿ ನೆರವೇರಲು ನೇಪಾಳ ಸರಕಾರವು 135,000 ಪೊಲೀಸರನ್ನು ನಿಯೋಜಿಸಿದ್ದು, ವಿಶ್ವಸಂಸ್ಥೆ, ಯುರೋಪಿಯನ್ ಒಕ್ಕೂಟ ಮತ್ತು ಅಟ್ಲಾಂಟ ಮೂಲದ ಕಾರ್ಟರ್ ಸೆಂಟರ್ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಸಂಘಟನೆಗಳು ನೇಪಾಳ ಚುನಾವಣೆಯ ಮೇಲ್ವಿಚಾರಣೆಯನ್ನು ವಹಿಸಲಿವೆ.
ಮತ್ತಷ್ಟು
ಉಗ್ರರ ನಂಟಿರುವ ಮುಸ್ಲೀಂರ ಬಿಡುಗಡೆ
ಸೇನಾಪಡೆ ವಾಪಸಾತಿಗೆ ಹಿಲರಿ ಒತ್ತಾಯ
ಸಂಪ್ರದಾಯ ಮುರಿದ ಪಾಕ್ ಅಧ್ಯಕ್ಷ
ಪಂಚಾಯತ್‌ರಾಜ್ 'ಮಹಾನ್ ಪ್ರಯೋಗ: ಅನ್ಸಾರಿ
ಕಾಶ್ಮೀರ: ನೂತನ ವಿಧಾನಕ್ಕೆ ಪಾಕ್ ಹಿಂಜರಿಯದು
ಭಾರತೀಯ ಉದ್ಯೋಗಿಗಳ ಪರ ಐತಿಹಾಸಿಕ ತೀರ್ಪು