ಅಲ್ ಖೈದಾ ಸಂಘಟನೆ ಮತ್ತು ಒಸಾಮ ಬಿನ್ ಲಾದೆನ್ ಜೊತೆ ನಂಟು ಹೊಂದಿರುವ ಶಂಕಿತ 90 ಮಂದಿ ಮುಸ್ಲೀಂ ಧರ್ಮಾನುಯಾಯಿಗಳನ್ನು ಲಿಬಿಯಾ ಬಿಡುಗಡೆ ಮಾಡಿದೆ. ಲಿಬಿಯಾ ಸರಕಾರಕ್ಕೆ ಬೆಂಬಲ ನೀಡುತ್ತಿದ್ದಾರೆ ಎನ್ನುವ ಏಕೈಕ ಕಾರಣಕ್ಕೆ ಇವರನ್ನು ಬಿಡುಗಡೆ ಮಾಡಲಾಗಿದೆ.
ಪ್ರತ್ಯೇಕವಾದಿಗಳೊಂದಿಗೆ ಸಮಾಜಕಲ್ಯಾಣ ಮತ್ತು ಅಭಿವೃದ್ದಿಗಿರುವ ಗದ್ದಾಫಿ ಫೌಂಡೇಶನ್‌ನ ಅಧಿಕೃತರು ಮಾತುಕತೆಯ ನಡೆಸಿ ಮಧ್ಯಸ್ಥಿಕೆ ವಹಿಸಿದುದರ ಫಲವಾಗಿ ಈ ಜನರನ್ನು ಇದೀಗ ಬಿಡುಗಡೆಗೊಳಿಸಲಾಗಿದೆ.
ಪ್ರಸ್ತುತ ಫೌಂಡೇಶನ್ ಲಿಬಿಯಾದ ಅಧ್ಯಕ್ಷ ಮೋಮರ್ ಗದ್ದಾಫಿಯವರ ಪುತ್ರನಾದ ಸೈಫ್ ಅಲ್ ಇಸ್ಲಾಂನ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿದೆ. ಪ್ರತ್ಯೇಕವಾದಿಗಳೊಂದಿಗೆ ನಡೆದ ಮಾತುಕತೆಯಲ್ಲಿ ನೂತನ ಲಿಬಿಯಾದ ರಚನೆಯಲ್ಲಿ ಭಾಗಿಗಳಾಗುವಂತೆ ಫೌಂಡೇಶನ್ ಮನವಿ ಮಾಡಿದೆ. ಏತನ್ಮಧ್ಯೆ ಇದೀಗ ಬಂಧನ ಮುಕ್ತಗೊಂಡ ಜನರಲ್ಲಿ ಮೂರನೇ ಒಂದು ಪಾಲು ಜನರು "ಫೈಟಿಂಗ್ ಯೂನಿಯನ್ ಫಾರ್ ಲಿಬಿಯಾ" ಗುಂಪಿನ ಸದಸ್ಯರಾಗಿದ್ದಾರೆ.
|