ಭಯೋತ್ಪಾದನೆ ನಿಗ್ರಹಕ್ಕೆ ಪಾಕ್ ಬದ್ಧ: ಜರ್ದಾರಿ |
| | ಇಸ್ಲಾಮಾಬಾದ್, ಮಂಗಳವಾರ, 7 ಅಕ್ಟೋಬರ್ 2008( 11:56 IST ) | | | |
| | |
| ಪಾಕಿಸ್ತಾನದಲ್ಲಿ ಶಾಂತಿ ಮರುನಿರ್ಮಾಣಗೊಳ್ಳುವವರೆಗೆ ಭಯೋತ್ಪಾದನೆಯ ವಿರುದ್ಧ ಹೋರಾಡಲು ಪಾಕಿಸ್ತಾನ ಸರಕಾರವು ಬದ್ಧವಾಗಿದೆ ಎಂದು ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಸ್ಪಷ್ಟಪಡಿಸಿದ್ದಾರೆ.ಪಾಕಿಸ್ತಾನ ಪ್ರಧಾನಿ ಯೂಸುಫ್ ರಾಜಾ ಗಿಲಾನಿ, ವಾಯುವ್ಯ ಗಡಿ ಪ್ರಾಂತ್ಯ ಮುಖ್ಯಮಂತ್ರಿ ಅಮೀರ್ ಹೈದರ್ ಖಾನ್ ಹೋತಿ ಮತ್ತು ಅವಾಮಿ ನ್ಯಾಶನಲ್ ಪಾರ್ಟಿ ಮುಖ್ಯಸ್ಥ ಅಸ್ಫಂದ್ಯಾರ್ ವಲಿ ಖಾನ್ ಅವರೊಂದಿಗೆ ಇಸ್ಲಾಮಾಬಾದಿನ ರಾಷ್ಟ್ರಪತಿ ಭವನದಲ್ಲಿ ಮಾತುಕತೆ ನಡೆಸಿದ ಜರ್ದಾರಿ, ದೇಶದ ಸಾರ್ವಭೌಮತೆಯಲ್ಲಿ ಅಸ್ಥಿರತೆಯನ್ನು ಉಂಟುಮಾಡುವಂತಹ ಋಣಾತ್ಮಕತೆಯನ್ನು ಹರಡಿಸಲು ಯಾರಿಗೂ ಅನುವು ಮಾಡಿಕೊಡುವುದಿಲ್ಲ ಎಂದು ಹೇಳಿದ್ದಾರೆ.ಬುಡಕಟ್ಟು ಪ್ರದೇಶದಲ್ಲಿನ ಕಾನೂನು ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಸಿದ ಜರ್ದಾರಿ, ಭಯೋತ್ಪಾದನೆಯ ವಿರುದ್ಧ ಹೋರಾಡಲು ಕಾರ್ಯತಂತ್ರದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಬಾಂಬ್ ದಾಳಿ ಈ ನಡುವೆ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಉಂಟಾದ ಆತ್ಮಹತ್ಯಾ ಬಾಂಬ್ ದಾಳಿಯಿಂದಾಗಿ ಸೇರಿದಂತೆ 23 ಮಂದಿ ಸಾವನ್ನಪ್ಪಿದ್ದು, ಸುಮಾರು 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ಬಕ್ಕಾರ್ ಜಿಲ್ಲೆಯ ಪ್ರಭಾವಿ ರಾಜಕಾರಣಿ ಮತ್ತು ನ್ಯಾಶನಲ್ ಅಸೆಂಬ್ಲಿಯ ಸದಸ್ಯರಾಗಿರುವ ಪಿಎಂಎಲ್-ಎನ್ ನಾಯಕ ರಶೀದ್ ಅಕ್ಬರ್ ನವಾನಿ ಅವರ ಮನೆಯ ಸಮೀಪ ಈ ದಾಳಿ ನಡೆದಿದ್ದು, ನವಾನಿ ಅವರ ಮನೆ ಭಾಗಶಃ ಧ್ವಂಸಗೊಂಡಿರುವುದರ ಜೊತೆಗೆ, ನವಾನಿ ಅವರೂ ಗಂಭೀರ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ತಿಳಿಸಿವೆ. | ಸಂಬಂಧಿತ ಮಾಹಿತಿ ಹುಡುಕಿ | |
| |
|