ಬಂದ್ ವಿರೋಧಿ ಹೇಳಿಕೆ: ಬುದ್ದ ಕ್ಷಮೆಯಾಚನೆ
|
|
|
|
ಕೋಲ್ಕತಾ, ಶುಕ್ರವಾರ, 29 ಆಗಸ್ಟ್ 2008( 15:40 IST )
|
|
|
|
|
|
|
|
ಬಂದ್ ಕುರಿತಾದ ತನ್ನ ಹೇಳಿಕೆಗೆ ಪಶ್ಚಿಮಬಂಗಾಳ ಮುಖ್ಯಮಂತ್ರಿ ಬುದ್ದದೇವ್ ಭಟ್ಟಾಚಾರ್ಜಿ ಅವರು ಶುಕ್ರವಾರ ಕ್ಷಮೆ ಯಾಚಿಸಿದ್ದಾರೆ.
ಸಿಪಿಎಂ ರಾಜ್ಯ ಸಭೆಯಲ್ಲಿ, ಹೇಳಿಕೆ ನೀಡಿದ ತನ್ನ ತಪ್ಪಿನ ಕುರಿತು ಅವರು ಕ್ಷಮೆ ಯಾಚಿಸಿದರೆಂದು ಸಿಐಟಿಯು ರಾಜ್ಯ ಅಧ್ಯಕ್ಷರು ಹೇಳಿದ್ದಾರೆ.
ಸಿಪಿಐ(ಎಂ) ಪಕ್ಷದ ಕೆಲ ಸದಸ್ಯರು ಪಕ್ಷದ ಕಾರ್ಯದರ್ಶಿಗಳಿಗೆ ಪತ್ರ ಬರೆದು ಮುಖ್ಯಮಂತ್ರಿಯ ಬಂದ್ ವಿರೋಧಿ ಹೇಳಿಕೆ ಕುರಿತಂತೆ ರಾಜ್ಯಮಟ್ಟದ ಸಭೆಯಲ್ಲಿ ಚರ್ಚಿಸಲು ಒತ್ತಾಯಿಸಿದ್ದರು.
ಸಿಪಿಎಂ ಪಾಲಿಟ್‌ಬ್ಯೂರೊ ಕೂಡಾ ಮಖ್ಯಮಂತ್ರಿಗಳ ಬಂದ್ ವಿರೋಧಿ ಹೇಳಿಕೆ ಕುರಿತಂತೆ ವಿವರಣೆ ಕೇಳಲು ಬಯಸಿದ್ದ, ಮುಖ್ಯಮಂತ್ರಿಗಳ ಹೇಳಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು
ಕಾರ್ಮಿಕರು ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆಸುವುದು ಮೂಲಭೂತ ಹಕ್ಕಾಗಿದೆ ಎಂದಿರುವ ಸಿಪಿಎಂ ಪಾಲಿಟ್‌ಬ್ಯೂರೊ ಮುಖ್ಯಮಂತ್ರಿ ಬುದ್ದದೇವ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.
ಕೋಲ್ಕತಾದಲ್ಲಿ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಮುಖ್ಯಮಂತ್ರಿ ಬುದ್ದದೇವ್ ಭಟ್ಟಾಚಾರ್ಜಿ, ಬಂದ್- ಪ್ರತಿಭಟನೆಗಳನ್ನು ತಾವು ಬೆಂಬಲಿಸುವುದಿಲ್ಲ, ಇದರಿಂದ ದೇಶಕ್ಕೆ ಯಾವುದೇ ಉಪಯೋಗವಾಗುವುದಿಲ್ಲ, ಬಂದ್ ಕರೆ ಕಾನೂನುಬಾಹಿರ ಎಂದು ಟೀಕಿಸಿದ್ದರು.
ಆಕಸ್ಮಿಕವಾಗಿ ನಾನು ಸಿಪಿಐ (ಎಂ) ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗಿದ್ದಾನೆ. ಆ ಪಕ್ಷ ಬಂದ್‌ಗೆ ಕರೆ ನೀಡುತ್ತದೆ. ನಾನು ಮೂಕ ಪ್ರೇಕ್ಷಕನಾಗಿದ್ದೇನೆ ಎಂಬ ವಿವಾದಾಸ್ಪದ ಹೇಳಿಕೆಯನ್ನು ಮುಖ್ಯಮಂತ್ರಿ ಬುದ್ದದೇವ್ ಭಟ್ಟಾಚಾರ್ಜಿ ನೀಡಿದ್ದರು.
|
|
|
|