ತನ್ನ ಹುಟ್ಟು ಹಬ್ಬಾಚರಣೆ ಕುರಿತು ವ್ಯಕ್ತವಾಗಿರುವ ಟೀಕೆಗಳಿಗೆ ಖಾರವಾಗಿ ಪ್ರತಿಕ್ರಿಯಿಸಿರುವ ಮಯಾ, ಸೋನಿಯಾ ಗಾಂಧಿ ಹುಟ್ಟುಹಬ್ಬವನ್ನು 'ಗುಲಾಮರ ದಿವಸ' ಹಾಗೂ ಮಲಾಯಾಂ ಸಿಂಗ್ ಯಾದವ್ ಹುಟ್ಟುಹಬ್ಬವನ್ನು 'ದಲ್ಲಾಲಿ ದಿವಸ'ವಾಗಿ ಆಚರಿಸುವಂತೆ ತನ್ನ ಅನುಯಾಯಿಗಳಿಗೆ ಕರೆ ನೀಡಿದ್ದಾರೆ.
ವಿರೋಧಿ ಪಕ್ಷಗಳೊಂದಿಗೆ ಹೋಲಿಸಿಕೊಳ್ಳಲು ತನಗೆ ಆಸಕ್ತಿ ಇಲ್ಲ ಎಂದು ಅವರು ಹೇಳಿದರಾದರೂ, ವ್ಯವಸ್ಥಿತವಾಗಿ ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಭಾರತೀಯ ಜನತಾಪಕ್ಷಗಳನ್ನು ಟೀಕಿಸಿದರು.
"ತನಗೆ ಮಾಡಿರುವ ಟೀಕೆಗಳಿಗೆ ವಿರೋಧಿ ಪಕ್ಷಗಳಿಗೆ ಅವುಗಳದ್ದೇ ಆದ ಭಾಷೆಯಲ್ಲಿ ಉತ್ತರ ನೀಡಬಹುದು ಎಂದು ಮಾಯಾವತಿ ತನ್ನ ಅಧಿಕೃತ ನಿವಾಸದಲ್ಲಿ ಸೇರಿದ್ದ ಆಯ್ದ ಮಂದಿಯ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ನುಡಿದರು.
"ಇತರ ರಾಜಕೀಯ ಪಕ್ಷಗಳು ದೂರುತ್ತಿರುವಂತೆ ಸೋನಿಯಾಗಾಂಧಿ ವಿದೇಶಿ ಮೂಲದ ವ್ಯಕ್ತಿಯಾಗಿದ್ದರೂ, ರಾಷ್ಟ್ರವನ್ನು ಆಳುತ್ತಿರುವ ಕಾರಣ ಅವರ ಹುಟ್ಟುಹಬ್ಬವನ್ನು ಗುಲಾಮಿ ದಿವಸವಾಗಿ ಆಚರಿಸಬೇಕು. ದೊಡ್ಡದೊಡ್ಡ ಉದ್ಯಮಿಗಳೊಂದಿಗೆ ಎಡತಾಕುವ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರ ಹುಟ್ಟುಹಬ್ಬವನ್ನು ದಲ್ಲಾಳಿ ದಿವಸವನ್ನಾಗಿ ಮತ್ತು ಪದೇಪದೇ ಮೋಸಮಾಡುವ ಬಿಜೆಪಿ ನಾಯಕರ ಹುಟ್ಟು ಹಬ್ಬವನ್ನು ವಂಚಕ ದಿನವಾಗಿ ಆಚರಿಸಬೇಕು" ಎಂದು ಮಾಯಾವತಿ ನುಡಿದರು. |