ನ್ಯಾಯಾಲಯಗಳಲ್ಲೂ ಕೇಸುಗಳು ಫಿಕ್ಸ್ ಆಗುತ್ತವೆಯೇ? ಇಂತಹ ಒಂದು ಆಘಾತಕಾರಿ ಅಂಶವು ಪಂಜಾಬ್ ವಿಚಕ್ಷಣ ದಳವು ಬಿಡುಗಡೆ ಮಾಡಿರುವ ದೂರವಾಣಿ ಸಂಭಾಷಣೆಯ ಟೇಪಿನಿಂದ ಬೆಳಕಿಗೆ ಬಂದಿದೆ. ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟಿನಲ್ಲಿ ಕೇಸುಗಳನ್ನು ಫಿಕ್ಸ್ ಮಾಡುವ ಕುರಿತು ಬ್ರೋಕರ್‌ಗಳು ನಡೆಸಿರುವ ಮಾತುಕತೆ ಇದಾಗಿದೆ.
ವಿಚಕ್ಷಣ ದಳ ನೀಡಿರುವ ದೃಕ್-ಶ್ರಾವ್ಯ ಪುರಾವೆಯು ನ್ಯಾಯಾಧೀಶರು ಮತ್ತು ಮಧ್ಯವರ್ತಿಗಳ ನಡುವಿನ ಸಂಪಕರ್ವನ್ನು ಬಹಿರಂಗಪಡಿಸಿದೆ.
ಕಳೆದ ವರ್ಷ ಅಡ್ವೊಕೇಟ್ ಜನರಲ್ ಕಚೇರಿಗೆ ವರದಿ ಸಲ್ಲಿಸಲಾಗಿದ್ದು, ಇದನ್ನು ನ್ಯಾಯಾಂಗದಲ್ಲಿ ದುರ್ವವ್ಯಹಾರ ಹಾಗೂ ನ್ಯಾಯಾಂಗದ ಆದೇಶಗಳನ್ನು ಮಧ್ಯವರ್ತಿಗಳ ಮೂಲಕ ಖರೀದಿಸಲಾಗುತ್ತದೆ ಎಂಬ ಅಂಶವನ್ನು ಬಹಿರಂಗ ಪಡಿಸಲು ಆಗಿನ ಮುಖ್ಯನ್ಯಾಯಾಧೀಶ ವಿಜೇಂದರ್ ಜೈಲ್ ಹಾಗೂ ಮುಖ್ಯ ನ್ಯಾಯಾಧೀಶರ ಗಮನಕ್ಕೆ ತರಲಾಗಿತ್ತು.
ನ್ಯಾಯಾಲಯದಲ್ಲಿ ಸಂಘಟಿತ ಅಪರಾಧಗಳನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಸಹಜ ತನಿಖೆ ಆರಂಭಿಸಿದ್ದು, ದಿನನಿತ್ಯದ ಸುಮಾರು 300ರಿಂದ 400 ಕರೆಗಳನ್ನು ಆಲಿಸಿದ ವೇಳೆ ಈ ಅಂಶಗಳು ಪತ್ತೆಯಾಗಿವೆ ಎಂಬುದಾಗಿ ವಿಚಕ್ಷಣ ದಳದ ಅಧಿಕಾರಿ ಸುಮೇಧ್ ಸಿಂಗ್ ಸೈನಿ ಹೇಳಿದ್ದಾರೆ.
ವಿಚಕ್ಷಣ ದಳದವು ಈ ಮಾಹಿತಿ ಬಹಿರಂಗಪಡಿಸಿದ್ದರೂ ನ್ಯಾಯಾಂಗದ ಉನ್ನತ ಸ್ತರದ ಅಧಿಕಾರಿಗಳು ಈ ಕುರಿತು ಮೌನವಹಿಸಿರುವುದು ಮತ್ತಷ್ಟು ಕುತೂಹಲಕಾರಿಯಾಗಿದೆ.
ಈ ಹಗರಣದಲ್ಲಿ ಪಾಲ್ಗೊಂಡಿರುವ ನ್ಯಾಯಾಧೀಶರ ಹೆಸರು ಪತ್ತೆಮಾಡಲು ಅಧಿಕಾರಿಗಳು ತನಿಖೆ ಮುಂದುವರಿಸುವ ನಿರಿಕ್ಷೆಯಲ್ಲಿದ್ದಾರೆ. ನ್ಯಾಯಮೂರ್ತಿಗಳಾದ ಮೆತಾಬ್ ಸಿಂಗ್ ಗಿಲ್, ಎಚ್. ಎಲ್. ಭಲ್ಲಾ ಅವರ ಹೆಸರು ದೂರವಾಣಿ ಸಂಭಾಷಣೆಗಳಲ್ಲಿ ಕೇಳಿ ಬಂದಿದೆ. ಕೆಲವು ಸಮಯದ ಹಿಂದೆ ಗಿಲ್ ಅವರು ಹೆಸಲು ಪಿಪಿಎಸ್‌ಸಿ ಹಗರಣದಲ್ಲಿ ಕೇಳಿಬಂದಿತ್ತು. ಇದಾದ ಬಳಿಕ ಮುಖ್ಯನ್ಯಾಯಾಧೀಶ ಎ.ಬಿ. ಸಹರ್ಯ ಅವರು ಗಿಲ್ ವಿರದ್ಧ ಖಾರವಾದ ಶಿಫಾರಸ್ಸುಗಳನ್ನು ಮಾಡಿದ್ದರು.
ಇಂದ್ರಜಿತ್ ಸಿಂಗ್ ಗಿಲ್ (ನ್ಯಾಯಾಧೀಶ) ಗಿಲ್ ಸಂಬಂಧಿ ಹಾಗೂ ಮಂಜಿತ್ ಸಿಂಗ್ ಮಾನ್ (ಯುವಕಾಂಗ್ರೆಸ್ ನಾಯಕ) ಅವರು ನಿಮರ್‌ದೀಪ್ ಸಿಂಗ್ (ವಿಚಕ್ಷಣದಳಕ್ಕೆ ದೂರು ನೀಡಿದವರು) ಅವರೊಂದಿಗೆ ಮಾತುಕತೆ ನಡೆಸಿದ್ದು ಲಂಚದ ಮೂಲಕ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಧೀಶರ ಹುದ್ದೆಗೆ ಅಭ್ಯರ್ಥಿಯನ್ನು ನೇಮಿಸುವ ಕುರಿತು ಮಾತುಕತೆ ನಡೆಸಿದ್ದರು.
ಮಾತುಕತೆಯ ವಿವರ ಹೀಗಿದೆ 2008 ಮೇ 31: ಮಾನ್ ಮತ್ತು ನಿಮರ್‌ದೀಪ್ ನಡುವಿನ ಸಂಭಾಷಣೆಯು ಅಭ್ಯರ್ಥಿಯೊಬ್ಬ 40 ಲಕ್ಷ ಕೊಡುಲು ಇಚ್ಚಿಸಿದ್ದು, ಮೊತ್ತವನ್ನು 50 ಲಕ್ಷಕ್ಕೇರಿಸಲು ಒಪ್ಪಿರುವ ಪತ್ರದ ಕುರಿತು ಮಾತುಕತೆ ನಡೆಸಲಾಗಿತ್ತು.
2008 ಜೂನ್ 2: ನಿಮರ್‌ದೀಪ್‌ಗೆ ಕರೆ ನೀಡಿದ ಮಾನ್ ಜಿಲ್ಲಾ ನ್ಯಾಯಾಧೀಶನಾಗ ಬಯಸಿರುವ ಅಭ್ಯರ್ಥಿಯು ಕಿರಿಯ ನ್ಯಾಯಾಧೀಶನೇ ಇಲ್ಲ ವಕೀಲನೇ ಎಂದು ತಿಳಿಯಬಯಸಿದ್ದರು.
2008 ಜೂನ್ 2: ಜಿಲ್ಲಾ ನ್ಯಾಯಾಧೀಶನಾಗಲು ಬಯಸಿದ ವ್ಯಕ್ತಿಯು ನೀಡಲು ಒಪ್ಪಿರುವ ಮೊತ್ತವು ನ್ಯಾಯಾಧೀಶ ಮೆತಾಬ್ ಸಿಂಗ್ ಗಿಲ್ ಅವರಿಗೆ ತುಂಬ ಕಡಿಮೆಯಾಯಿತು ಎಂದು ಮಾನ್ ನಿಮರ್‌ದೀಪ್‌ಗೆ ತಿಳಿಸಿದ್ದರು.
ಇದಲ್ಲದೆ ಅತ್ಯಾಚಾರ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಇಂದ್ರಜಿತ್ ಸಿಂಗ್ ಗಿಲ್ ಆರೋಪಿಯೊಂದಿಗೆ ಮಾತನಾಡುವ ಸಂಭಾಷಣೆಯೂ ಟೇಪಿನಲ್ಲಿದೆ. |