ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ವಿಶ್ವವಿಖ್ಯಾತ ದಸರೆಗೆ ಮೈಸೂರು ಸಜ್ಜು
NRB
ಅಕ್ಟೋಬರ್ 12 ರಿಂದ 21ರವರೆಗೆ ನಡೆಯಲಿರುವ ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಮೈಸೂರು ಸಜ್ಜುಗೊಳ್ಳುತ್ತಿದೆ. ದಸರವನ್ನು ಅದ್ದೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಭಾರೀ ತಯಾರಿ ನಡೆಸುತ್ತಿದೆ. ಆದರೆ ಅಧಿಕಾರ ಹಸ್ತಾಂತರದ ಕಾರ್ಮೋಡ ಈ ಬಾರಿಯ ದಸರೆಗೆ ದಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ.

ಈ ಬಾರಿ ದಸರಾ ಆರಂಭಕ್ಕೆ, ಅಕ್ಟೋಬರ್ 12ರಂದು ಬೆಳಗ್ಗೆ 8.30ಕ್ಕೆ ಚಾಮುಂಡಿ ಬೆಟ್ಟದಲ್ಲಿ ನಡೆದಾಡುವ ದೇವರು ಎಂದೇ ಬಿಂಬಿತವಾಗಿರುವ ಸಿದ್ಧಗಂಗಾ ಶ್ರೀಗಳು ಚಾಲನೆ ನೀಡಲಿದ್ದಾರೆ.

ಯುವದಸರಾ ಸಮಾರಂಭಕ್ಕೆ ಈ ಬಾರಿ ಚಾಲನೆ ನೀಡಲಿರುವವರು ಕನ್ನಡದ ಹೆಸರಾಂತ ಚಿತ್ರ ನಟ ವಿಷ್ಣು ವರ್ಧನ್. ಸುದೀಪ್, ಗಣೇಶ್, ರಕ್ಷಿತಾ, ಪ್ರೇಮ್ ಸೇರಿದಂತೆ ಈ ಬಾರಿ ದಸರಾದಲ್ಲಿ ತಾರೆಯರು ರಂಜಿಸಲಿದ್ದಾರೆ.

ದಸರಾ ಅಂಗವಾಗಿ ಆಯೋಜಿಸಲಾಗುವ ಚಲನಚಿತ್ರೋತ್ಸವವನ್ನು ಹಿರಿಯ ನಟ ಎಂಪಿ ಶಂಕರ್ ಉದ್ಘಾಟಿಸಲಿದ್ದಾರೆ. ನಟಿ ಜಯಮಾಲಾ, ಅನುಪ್ರಭಾಕರ್, ನಿರ್ದೇಶಕ ಸೀತಾರಾಂ ಹೀಗೆ ಚಿತ್ರರಂಗದ ದಿಗ್ಗಜರನ್ನು ತೊಡಗಿಸಿಕೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ.

ಅರಮನೆ ಆವರಣ ಅಕ್ಟೋಬರ್ 12ರಿಮದ 20ರವರೆಗೆ ಸಂಗೀತ, ನೃತ್ಯ ಸೇರಿದಂತೆ ವಿವಿಧ ಸಾಂಸ್ಕ್ಕತಿಕ ಕಾರ್ಯಕ್ರಮಗಳಿಂದ ದಸರೆಗೆ ಆಗಮಿಸುವ ಮಂದಿಗೆ ಹೊಸ ರಂಜನೆ ನೀಡಲಿದೆ.
ಮತ್ತಷ್ಟು
ಕೆಲಸಕ್ಕೆ ಬಿಜೆಪಿ ಸಚಿವರ ಗೈರು ಹಾಜರಿ
ಬಿಜೆಪಿ ಅಡಳಿತ ತೃಪ್ತಿಕರ : ವೆಂಕಯ್ಯ
ಅಧಿಕಾರ ಹಸ್ತಾಂತರ ಉಲ್ಲಂಘನೆ: ಸಭೆ
ಹೈಕಮಾಂಡ್ ತೀರ್ಮಾನ ಅಂತಿಮ : ದೇವೇಗೌಡ
ಕಾಂಗ್ರೆಸ್‌ನ ಕಾದು ನೋಡುವ ತಂತ್ರ
ಅನುದಾನ ರಹಿತ ಶಾಲೆಗೆ ಮಂಜೂರಾತಿ ಇಲ್ಲ