|
ಹಕ್ಕನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ: ಪುತ್ತಿಗೆ ಶ್ರಿಗಳು
|
|
|
ಉಡುಪಿ, ಮಂಗಳವಾರ, 27 ನವೆಂಬರ್ 2007( 16:06 IST )
|
|
|
|
|
|
|
|
ಗುರುಗಳಿಂದ ಬಂದ ಕೃಷ್ಣನ ಪೂಜೆಯನ್ನು ತಮ್ಮಿಂದ ಕಿತ್ತುಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಎಂದು ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ ಪ್ರಕಟಿಸಿರುವುದರಿಂದ ಉಡುಪಿ ಪರ್ಯಾಯ ಪೀಠಾರೋಹಣ ವಿವಾದ ಮತ್ತೊಂದು ತಿರುವು ಪಡೆದಿದೆ.
ತಾವು ವಿದೇಶ ಪ್ರಯಾಣ ಮಾಡಿರುವ ಹಿನ್ನೆಲೆಯಲ್ಲಿ ತಮಗೆ ಪರ್ಯಾಯ ಅವಕಾಶ ನೀಡಬಾರದು ಎಂದು ಇತ್ತೀಚಿಗೆ ಎದ್ದಿರುವ ಕೂಗಿನ ಬಗ್ಗೆ ಪ್ರತಿಕ್ರಿಯಿಸಿದ ಅವರು ತಾವು ವಿದೇಶಕ್ಕೆ ಕದ್ದುಮುಚ್ಚಿ ರಾತ್ರೋರಾತ್ರಿ ಓಡಿಹೋಗಿಲ್ಲ. ತಮ್ಮ ಯಾತ್ರೆಯ ಬಗ್ಗೆ ಈಗ ಆಕ್ಷೇಪಿಸುತ್ತಿರುವ ಉಳಿದ ಮಠಾಧೀಶರಿಗೆ ಗೊತ್ತಿತ್ತು ಎಂದು ಪರ್ಯಾಯ ಪೀಠಾರೋಹಣಕ್ಕೆ ಸಂಬಂಧಪಟ್ಟ ಧಾನ್ಯ ಮುಹೂರ್ತ ಕಾರ್ಯಕ್ರಮದಲ್ಲಿ ಅವರು ತಿಳಿಸಿದ್ದಾರೆ.
ಉಡುಪಿ ಶ್ರೀಕೃಷ್ಣ ದೇವಾಲಯ ಮತ್ತು ಅದರ ಅಷ್ಟ ಮಠಗಳಲ್ಲಿ ಇನ್ನುಮುಂದೆ ಪರ್ಯಾಯೋತ್ಸವ, ಏಕಾದಶಿ ಆಚರಣೆ, ಅಥವಾ ಮಾಧ್ವ ಸಂಪ್ರದಾಯದ ಇನ್ನಾವುದೇ ಆಚರಣೆಗೆ ಸಂಬಂಧಿಸಿದಂತೆ ಗೊಂದಲವಾಗದಂತೆ ಲಿಖಿತ ಸಂವಿಧಾನ ರಚನೆ ಪ್ರಸ್ತಾಪವನ್ನು ಮಾಡಿದ ಅವರು ಈ ಕುರಿತ ಸಂವಿಧಾನ ರಚನೆಗೆ ತ್ರಿ ಸದಸ್ಯ ಮಂಡಳಿಯನ್ನು ರಚಿಸಲಾಗುವುದು ಎಂದು ಘೋಷಿಸಿದ್ದಾರೆ.
|
|
|
|
|
|
|
|