|
ಸಂಚಾರ ದಟ್ಟಣೆ ಕಡಿವಾಣಕ್ಕೆ ವಿನೂತನ ಕ್ರಮ
|
|
|
|
|
|
|
|
|
|
|
ಮದುವೆಗೆ ಅಂತ ಕಾರು ಹತ್ತಿ ಕೂತರೆ, ಕಲ್ಯಾಣ ಮಂಟಪ ತಲುಪುವ ಹೊತ್ತಿಗೆ ಮಗುವಿನ ನಾಮಕರಣ ಬಂದಿರುತ್ತದೆ.
ಇದು ಬೆಂಗಳೂರಿನ ಸಂಚಾರಿ ದಟ್ಟಣೆಯ ಕುರಿತಾಗಿ ಇರುವ ಒಂದು ಜೋಕು. ಕೊಂಚ ಉತ್ಪ್ತ್ರೇಕ್ಷೆ ಎನಿಸಿದರೂ ಬೆಳಗಿನ ಸಂಚಾರದಲ್ಲಿ ವಾಹನಗಳಲ್ಲಿ ಕುಳಿತವರಿಗೆ ಈ ಅನುಭವ ಆಗುವುದು ಸತ್ಯ. ಮಿತಿಮೀರಿದ ಜನದಟ್ಟಣೆ, ವಾಹನ ದಟ್ಟಣೆ ಇದಕ್ಕೆ ನೀಡಿರುವ ಕೊಡುಗೆಯೂ ಅಪಾರ ಎಂಬುದೂ ಅಷ್ಟೇ ಕಟುಸತ್ಯ.
ನಗರದಲ್ಲಿನ ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು ಆಗಿಂದಾಗ್ಗೆ ಹೊಸ ಹೊಸ ಯೋಜನೆಗಳು ಅನುಷ್ಠಾನಗೊಳ್ಳುತ್ತಲೇ ಇವೆ. ಈ ಸಾಲಿಗೆ ಮತ್ತೊಂದು ಸೇರ್ಪಡೆ ಲಿರೆಡಿಮೇಡ್ ಅಂಡರ್ಪಾಸ್ಳಿಗಳು. ಆರ್ಸಿ ಪ್ರಿಕ್ಯಾಸ್ಟಿಂಗ್ ಮಾಡ್ಯುಲಾರ್ಳಿ ತಂತ್ರಜ್ಞಾನ ಬಳಸಿ ಕೇವಲ 72 ಗಂಟೆಗಳ ಅವಧಿಯಲ್ಲಿ ಕಡಿಮೆ ಖರ್ಚಿನಲ್ಲಿ ಇವುಗಳನ್ನು ನಿರ್ಮಿಸಬಹುದು. ಒಂದುವೇಳೆ ಇವು ಅಪ್ರಸ್ತುತ ಎಂಬ ಭಾವನೆ ಬಂದರೆ ಸ್ಥಳಾಂತರಿಸಬಹುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿಳಿಸಿದೆ.
ಈಗಾಗಲೇ ನಗರದ 28 ಜಂಕ್ಷನ್‌ಗಳಲ್ಲಿ ಇಂಥ ಸುರಂಗಮಾರ್ಗಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಲಾರಿ, ಬಸ್, ಟ್ಯಾಂಕರ್‌ಗಳೂ ಸೇರಿದಂತೆ ಎಲ್ಲ ವಾಹನಗಳೂ ಇದರ ಮೂಲಕ ಸಂಚರಿಸಬಹುದು ಎಂದು ತಿಳಿದುಬಂದಿದೆ.
|
|
|
|
|
|
|
|