|
ಸಂಪ್ರದಾಯಕ್ಕೆ ಬದ್ಧ - ಪೇಜಾವರ ಶ್ರೀ
|
|
|
ಉಡುಪಿ, ಸೋಮವಾರ, 3 ಡಿಸೆಂಬರ್ 2007( 10:28 IST )
|
|
|
|
|
|
|
|
ಪರ್ಯಾಯ ಪೀಠಾರೋಹಣದ ವಾಕ್ಸಮರ ಉತ್ತುಂಗಕ್ಕೇರಿದೆ. ಪುತ್ತಿಗೆ ಶ್ರೀಗಳ ವಿರುದ್ಧ ಪೇಜಾವರ ಮಠಾಧೀಶರು ವಾಕ್ಸಮರವನ್ನೇ ಸಾರಿದ್ದಾರೆ. ಸಮರ್ಥನಾ ಸಿದ್ದಾಂತವನ್ನು ಧರ್ಮದ ಕನ್ನಡಿಯಲ್ಲಿ ತೋರುತ್ತಾ ಈರ್ವರೂ ಪ್ರತಿನಿತ್ಯ ಟಿವಿ ದರ್ಬಾರಿನಲ್ಲಿ ಸಮಾವೇಶ ಮಾಡುತ್ತಿದ್ದಾರೆ. ಸುದ್ದಿಗಳ ಕೇಂದ್ರವಾಗಿರುವ ಉಡುಪಿ ಶ್ರೀಕೃಷ್ಣ ಈ ಬಾರಿ ಯಾರಿಂದ ಪೂಜೆ ಕೈಗೊಂಡಾನು ಎಂಬುದೇ ಪ್ರಶ್ನೆಯಾಗಿದೆ.
ಧರ್ಮದ ಲಕ್ಷ್ಮಣರೇಖೆಯನ್ನು ಎಂದೂ ದಾಟಲಾರೆ. ಯಾವ ಒತ್ತಡಕ್ಕೂ ಮಣಿಯಲಾರೆ. ಇಷ್ಟು ವರ್ಷಗಳ ಕಾಲ ಸಂಪ್ರದಾಯ ಬದ್ಧ ನಿಯಮಗಳನ್ನು ಯಾರಿಗೂ ಮೀರಲು ಅವಕಾಶ ನೀಡಿಲ್ಲ ಮುಂದೆ ಕೂಡ ನೀಡಲಾರೆ ಎಂದು ಗುಡುಗಿರುವ ಪೇಜಾವರ ಮಠಾಧೀಶರು ಪುತ್ತಿಗೆ ಶ್ರೀಗಳ ವಿರುದ್ದ ಧರ್ಮಯುದ್ಧವನ್ನೇ ಸಾರಿದ್ದಾರೆ.
ಪೂಜೆ ಮಾಡುವುದು ಅವರವರ ವೈಯುಕ್ತಿಕ ವಿಚಾರ ಅದನ್ನು ಅಡ್ಡಿ ಪಡಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಆದರೆ ಶತ ಶತಮಾನಗಳಿಂದ ಕೆಲವೊಂದು ರೂಪ ರೇಷೆಗೊಳಪಟ್ಟು ಆಚಾರ ನಿಯಮಗಳಿಗೆ ಪ್ರತೀಕವಾದ ಶ್ರೀಕೃಷ್ಣ ಮಠದ ಗರ್ಭಗುಡಿಯ ಪ್ರವೇಶ ಸೇರಿದಂತೆ ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸುವ ವಿಚಾರದಲ್ಲಿ ತಮ್ಮ ಆಕ್ಷೇಪವಿದೆ ಎಂದು ಹೇಳಿದ್ದಾರೆ.
ಅಷ್ಟಮಠಗಳು ಇದುವರೆವಿಗೂ ಪಾಲಿಸಿಕೊಂಡು ಬಂದ ಸಂಪ್ರದಾಯದಂತೆ ಪರ್ಯಾಯ ಪೀಠವನ್ನು ಈ ಬಾರಿ ಪುತ್ತಿಗೆ ಮಠದ ಶ್ರೀಗಳಿಗೆ ನೀಡಲು ಬದ್ಧ ಆದರೆ ಯಾವುದೇ ಕಾರಣಕ್ಕೂ ಗರ್ಭಗುಡಿಯಲ್ಲಿನ ಶ್ರೀಕೃಷ್ಣ ಪೂಜೆಯ ಕುರಿತಾಗಿ ಹೇರಿರುವ ನಿಷಿದ್ಧವನ್ನೂ ಹಿಂತೆಗೆಯಲೂ ಸಾಧ್ಯವಿಲ್ಲ. ಧರ್ಮದಾಚರಣೆಯ ವಿಷಯದಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳುವ ಮೂಲಕ ಧರ್ಮದ ರಣ ಕಹಳೆಯನ್ನು ಮತ್ತೊಮ್ಮೆ ಪೇಜಾವರ ಶ್ರೀಗಳು ಊದಿದ್ದಾರೆ.
|
|
|
|
|
|
|
|