|
ಇಲ್ಲಿರಲಾರೆ; ಅಲ್ಲಿಗೆ ಹೋಗಲಾರೆ : ಎಂ.ಪಿ.ಪ್ರಕಾಶ್
|
|
|
ಬೆಂಗಳೂರು, ಸೋಮವಾರ, 3 ಡಿಸೆಂಬರ್ 2007( 13:21 IST )
|
|
|
|
|
|
|
|
ಪುಟ್ಟ ಮಕ್ಕಳು ಠೂ ಬಿಟ್ಟು ಬೇರಾದಾಗ ಸಿಹಿತಿಂಡಿಯ ಆಮಿಷವನ್ನು ಮುಂದೊಡ್ಡಿ ಸೆಳೆದುಕೊಳ್ಳಲು ಅಥವಾ ಸೇರಿಕೊಳ್ಳಲು ಬಯಸುವುದು ಅತ್ಯಂತ ಸಹಜ ವರ್ತನೆ. ಅದರೆ ಬೆಳೆದ ಮಕ್ಕಳೂ ಅದೇ ವರ್ತನೆಯನ್ನು ಅನುಸರಿಸಿದರೆ ಅದನ್ನು ಸಹಜವೆನ್ನಬಹುದೇ?
ಜೆಡಿಎಸ್ ಬಂಡಾಯಗಾರರೊಂದಿಗೆ ವಿವಿಧ ರಾಜಕೀಯ ಪಕ್ಷಗಳು ನಡೆಸುತ್ತಿರುವ ವಿವಿಧ ಸ್ವರೂಪದ ಓಲೈಕೆಗಳು ಜನಸಾಮಾನ್ಯರಿಗೆ ಮಕ್ಕಳಾಟವನ್ನು ನೆನಪಿಸುತ್ತಿರುವುದು ಇಂದಿನ ರಾಜಕೀಯ ವೈಚಿತ್ರ್ಯಗಳಿಗೆ ಹಿಡಿದ ಕೈಗನ್ನಡಿ.
ಒಂದೆಡೆ ಬಿಎಸ್ಪಿ ಪಕ್ಷದ ಬಿ.ಗೋಪಾಲ್ ಹಾಗೂ ಪಿ.ಜಿ.ಆರ್. ಸಿಂಧ್ಯಾರವರು ತಮ್ಮ ಪಕ್ಷಕ್ಕೆ ಸೇರುವಂತೆ ಪ್ರಕಾಶ್‌ಗೆ ಅಧಿಕೃತ ಆಹ್ವಾನ ನೀಡಿದ್ದಾರೆ. ಜತೆಯಲ್ಲಿ ಇತರ ರಾಜಕೀಯ ಪಕ್ಷಗಳೂ ಈ ಕುರಿತು ಉತ್ಸುಕವಾಗಿರುವುದು ಈಗ ರಹಸ್ಯವಾಗೇನೂ ಉಳಿದಿಲ್ಲ.
ಇದರೊಂದಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೂ ಸಿಡಿದೆದ್ದ ಈ ಮಿತ್ರರನ್ನು ಮತ್ತೆ ಪಕ್ಷದ ತೆಕ್ಕೆಗೆ ಸೆಳೆದುಕೊಳ್ಳಲು ಮತ್ತೊಂದು ಸುತ್ತಿನ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಅಧಿಕಾರ ಹಸ್ತಾಂತರವಾಗದೆ ಲಿಂಗಾಯಿತ ವರ್ಗದ ಅಸಮಾಧಾನವನ್ನು ಬೆನ್ನಿಗೆ ಕಟ್ಟಿಕೊಂಡಿದ್ದಾಗಿದೆ. ಈಗ ಪ್ರಕಾಶ್‌ವರೂ ಆಚೆ ಹೋದರೆ ಅದು ಲಿಂಗಾಯಿತರ ಮತ್ತೊಂದು ಸುತ್ತಿನ ಅಸಮಾಧಾನಕ್ಕೆ ಕಾರಣವಾಗಬಹುದು; ಇದು ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಮುಳುವಾಗಬಹುದು ಎಂಬುದು ಕುಮಾರಣ್ಣನ ದೂರದರ್ಶಿತ್ವ ಎಂಬುದು ರಾಜಕೀಯ ಬಲ್ಲವರ ಅಭಿಪ್ರಾಯ.
ಒಟ್ಟಿನಲ್ಲಿ ಗೊಂದಲಕ್ಕೆ ಸಿಲುಕಿರುವ ಎಂ.ಪಿ.ಪ್ರಕಾಶ್ ಯಾವ ಕಡೆ ತೆರಳುವರೋ ಎಂಬುದೀಗ ಕುತೂಹಲ ಮೂಡಿಸಿದೆ.
|
|
|
|
|
|
|
|