|
ಜಿ.ಟಿ.ದೇವೇಗೌಡ ಬಿಜೆಪಿ ಸೇರ್ಪಡೆ
|
|
|
ಬೆಂಗಳೂರು, ಬುಧವಾರ, 5 ಡಿಸೆಂಬರ್ 2007( 08:56 IST )
|
|
|
|
|
|
|
|
ಯಡಿಯೂರಪ್ಪನವರೇ ನಮ್ಮ ಮುಂದಿನ ನಾಯಕರು ಎಂದು ಘೋಷಿಸಿದ ಜೆಡಿ(ಎಸ್)ನ ಬಂಡಾಯ ನಾಯಕ ಜಿ.ಟಿ.ದೇವೇಗೌಡರ ಬಿಜೆಪಿ ಸೇರ್ಪಡೆಗೆ ಇದೀಗ ಕ್ಷಣಗಣನೆ ಆರಂಭವಾಗಿದೆ.
ಮಾಜಿ ಪ್ರಧಾನಿ ದೇವೇಗೌಡರ ಬಲಗೈ ಭಂಟನೆಂದೇ ಹೇಳಲಾಗುತ್ತಿದ್ದ ಜಿ.ಟಿ.ದೇವೇಗೌಡರ ಸೇರ್ಪಡೆಯಿಂದಾಗಿ ಮೈಸೂರು ಪ್ರಾಂತ್ಯದಲ್ಲಿ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ ಹೇಳಿದ್ದಾರೆ.
ನಾನು ದೇವೇಗೌಡರ ಮೇಲೆ ಅತೀವ ನಂಬಿಕೆ ಇಟ್ಟಿದ್ದೆ ಅವರನ್ನೇ ದೇವರೆಂದು ನಂಬಿದ್ದೆ ಆದರೆ ದೇವೇಗೌಡರು ನಂಬಿಕೆಗೆ ದ್ರೋಹ ಮಾಡಿದರು, ವಚನ ಭ್ರಷ್ಟರಾದರು. ಕೊಟ್ಟ ಮಾತಿಗೆ ತಪ್ಪಿ ಇಡೀ ಜೆಡಿ(ಎಸ್) ಸಮುದಾಯವನ್ನೇ ಶಾಪಗ್ರಸ್ತ ಕುಟುಂಬವನ್ನಾಗಿಸಿದರು. ಶಾಪ ವಿಮೋಚನೆಗಾಗಿ ನಾನು ಬಿಜೆಪಿ ಮಡಿಲಿಗೆ ಬಂದಿದ್ದೇನೆ. ಇದೇ 13ರಂದು ಬಿಜೆಪಿ ಪಕ್ಷವನ್ನು ವಿದ್ಯಕ್ತವಾಗಿ ಸೇರಲಿದ್ದೇನೆ. ಮೈಸೂರು ಪ್ರಾಂತ್ಯದ ಹೊಣೆಗಾರಿಕೆಯನ್ನು ಆ ಪಕ್ಷ ನನಗೆ ಕೊಡುವ ನಿರೀಕ್ಷೆ ಇದೆ. ಅದನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ನನಗೆ ಇದೆ ಎಂದು ಕೊಂಡಿದ್ದೇನೆ ಎಂದಿದ್ದಾರೆ.
ಡಾಲರ್ಸ್ ಕಾಲೋನಿಯ ಯಡಿಯೂರಪ್ಪನವರ ನಿವಾಸದಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಆರ್. ಅಶೋಕ್ ಅವರ ಸಮ್ಮುಖದಲ್ಲಿ ಜಿ.ಟಿ.ದೇವೇಗೌಡರವರು ಅಧಿಕೃತವಾಗಿ ಮಾತನಾಡುವುದರೊಂದಿಗೆ ಇಷ್ಟರವರೆಗೂ ತೆರೆಮರೆಯಲ್ಲಿದ್ದ ಜೆಡಿ(ಎಸ್) ಬಂಡಾಯ ಸಮರದಲ್ಲಿ ಮೊದಲನೇ ವಿಕೆಟ್ ಉರುಳಿದಂತಾಗಿದೆ.
|
|
|
|
|
|
|
|