|
ಯಾರೊಂದಿಗೂ ಮೈತ್ರಿ ಇಲ್ಲ: ಧರಂಸಿಂಗ್
|
|
|
ಬೆಂಗಳೂರು, ಬುಧವಾರ, 5 ಡಿಸೆಂಬರ್ 2007( 19:34 IST )
|
|
|
|
|
|
|
|
ಕೆಪಿಸಿಸಿ ಪುನಾರಚನೆ ರಾಜ್ಯ ರಾಜಕೀಯದ ಮೊಗಸಾಲೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿರುವ ವಿಷಯ. ಖರ್ಗೆ ಸ್ಥಾನಕ್ಕೆ ಸಂಚಕಾರ ಬರಲಿದೆ,
ಕೃಷ್ಣಾಗಮನ ಅಗಲಿದೆ, ಅದಕ್ಕೆಂದೇ ಡಿ.ಕೆ.ಶಿವಕುಮಾರ್‌ರನ್ನು ದೆಹಲಿಗೆ ಕರೆಸಿಕೊಳ್ಳಲಾಗಿದೆ ಎಂಬುದು ಕೆಲವರಿಗೆ ಉತ್ಸಾಹ ತಂದಿದ್ದರೆ, ಅಂಥಾದ್ದೇನೂ ಆಗದು, ಖರ್ಗೆಯವರೇ ಮುಂದುವರಿಯಲಿದ್ದಾರೆ ಎಂಬ ವಿಶ್ವಾಸ ಇನ್ನೂ ಹಲವರದು.
ಈ ಸಂದರ್ಭದಲ್ಲಿ ಮಾತಿಗೆ ಸಿಕ್ಕವರು ಮಾಜಿ ಮುಖ್ಯಮಂತ್ರಿ ಧರಂಸಿಂಗ್. ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಹಾರಾಷ್ಟ್ತ್ರ ರಾಜ್ಯಪಾಲ ಎಸ್.ಎಂ.ಕೃಷ್ಣರು ರಾಜ್ಯ ರಾಜಕೀಯಕ್ಕೆ ಬರುವ ವಿಷಯ ಕೃಷ್ಣ ಹಾಗೂ ಸೋನಿಯಾ ಗಾಂಧಿಯವರಿಗೆ ಬಿಟ್ಟ ವಿಷಯ. ಅವರು ಬಂದರೂ ಬರಬಹುದು. ಈ ಕುರಿತು ತಮ್ಮಲ್ಲಿ ಇನ್ನೂ ಖಚಿತ ಮಾಹಿತಿ ಇಲ್ಲ ಎಂದು ಧರಂಸಿಂಗ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
|
|
|
|
|
|
|
|