ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪರ್ಯಾಯೋತ್ಸವಕ್ಕೆ ಅಲಂಕಾರಗೊಂಡಿದೆ ಉಡುಪಿ
ವಾದ ವಿವಾದಗಳ ನಡುವೆ ಶ್ರೀಕೃಷ್ಣ ಪೂಜಾ ಪರ್ಯಾಯೋತ್ಸವಕ್ಕೆ ಉಡುಪಿ ಸಜ್ಜಾಗಿದ್ದು, ಗೊಂದಲಮಯ ವಾತಾವರಣ ತಿಳಿಯಾಗಲಿದೆ ಎಂಬುದು ಭಜಕ ಜನತೆಯ ವಿಶ್ವಾಸ.

ಪರ್ಯಾಯ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಉಡುಪಿಗೆ ಆಗಮಿಸಿದ್ದ ಉಡುಪಿ ರಾಘವೇಂದ್ರ ಮಠದ ಪ್ರತಿನಿಧಿ ಶ್ರೀ ಸುಯಿಮಿತೀಂದ್ರ ಆಚಾರ್ಯ ಅವರ ಮಧ್ಯಸ್ಥಿಕೆಯಲ್ಲಿ ಜರುಗಿದ ಸಭೆಯಲ್ಲಿ ಏಳು ಮಠದ ಪರವಾಗಿ ಪೇಜಾವರ ಶ್ರೀಗಳು ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಇದುವರೆಗೆ ಉಡುಪಿ ಮಠದಲ್ಲಿ ಹೊಂದಿದ್ದ ಗೊಂದಲಮಯ ವಾತಾವರಣ ಕೊನೆಗೊಂಡಿದ್ದು, ಪರ್ಯಾಯಕ್ಕೆ ಸಕಲ ರೀತಿಯಿಂದಲೂ ಸಿದ್ದತೆ ಪ್ರಾರಂಭಗೊಂಡಿದೆ ಎಂದು ತಿಳಿದು ಬಂದಿದೆ.

ನಿನ್ನೆ ತಡರಾತ್ರಿಯವರೆಗೆ ಪೇಜಾವರ ಶ್ರೀಗಳು ಮತ್ತು ಪುತ್ತಿಗೆ ಶ್ರೀಗಳ ನಡುವೆ ನಡೆದ ಗುಪ್ತ ಮಾತುಕತೆಯಲ್ಲಿ ಪೇಜಾವರ ಶ್ರೀಗಳು ಕೃಷ್ಣಪೂಜೆ ಹಾಗೂ ಸರ್ವಜ್ಞ ಪೀಠಾರೋಹಣಕ್ಕೆ ಒಪ್ಪಿಗೆಯನ್ನು ಸೂಚಿಸಿದ್ದಾರೆ ಎಂಬ ವದಂತಿಗಳು ಬಂದಿವೆ. ಆದರೆ ಈ ಬಗ್ಗೆ ಪೇಜಾವರ ಮಠದ ಪರವಾಗಿ ಮಾತನಾಡಿದ ವಿದ್ವಾನ್ ಹರಿದಾಸ ಭಟ್ಟರು, ಮಾತುಕತೆ ವಿಫಲವಾಗಿದ್ದು, ಇನ್ನು ಅಂತಿಮ ಪರಿಹಾರ ದೊರೆತಿಲ್ಲ ಎಂದು ಹೇಳಿದ್ದಾರೆ.

ಪರ್ಯಾಯ ಉತ್ಸವದಲ್ಲಿ ಅಷ್ಟಮಠಾಧೀಶರು ಭಾಗವಹಿಸುವ ನಿರೀಕ್ಷೆ ಕಂಡು ಬಂದಿದೆ. ಈ ಮಧ್ಯೆ ಪೇಜಾವರ ಶ್ರೀಗಳ ಉಪವಾಸ ಕೈ ಬಿಡುವಂತೆ ಶ್ರೀ ಶ್ರೀ ರವಿಶಂಕರ್ ಗುರೂಜಿ ಸೇರಿದಂತೆ ಅನೇಕ ನಾಯಕರು ಮನವಿ ಮಾಡಿಕೊಂಡಿದ್ದರು. ನಿನ್ನೆ ನಡೆದಿರುವ ಮಾತುಕತೆಯ ಬಳಿಕ ಇಂದು ಪೇಜಾವರ ಶ್ರೀಗಳ ಉಪವಾಸ ಕೈಬಿಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಮತ್ತಷ್ಟು
ರಾಜ್ಯಕ್ಕೆ ಅವಮಾನ ಖಂಡಿಸಿ 27ರಂದು ರೈಲು ತಡೆ
ಸಿದ್ದು: ಅಂತೂ ಕೊನೆಗೂ ಸ್ಥಾನ ಬಂತೂ..!!
ಪೊಲೀಸರಿಂದ ಕುಖ್ಯಾತ ಹಂತಕನ ಬಂಧನ
ಬಿಎಸ್‌ಪಿ ಕಾರ್ಯಕ್ರಮದಲ್ಲಿ ನೂಕುನುಗ್ಗಲು
ಕಮಲದ ತೆಕ್ಕೆಗೆ ಸರಿದ ಬಚ್ಚೇಗೌಡ
ಪೇಜಾವರ ಶ್ರೀ ಉಪವಾಸ, ಪುತ್ತಿಗೆ ಶ್ರೀ ಅನ್ನತ್ಯಾಗ