ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ದಾಳಿಯಿಂದ ತಲೆ ತಗ್ಗಿಸುವಂತಾಗಿದೆ:ಯಡಿಯೂರಪ್ಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಾಳಿಯಿಂದ ತಲೆ ತಗ್ಗಿಸುವಂತಾಗಿದೆ:ಯಡಿಯೂರಪ್ಪ
ರಾಜ್ಯದ ವಿವಿಧೆಡೆ ಪ್ರಾರ್ಥನಾ ಮಂದಿರ,ಚರ್ಚ್ ದಾಳಿಯ ಘಟನೆಯಿಂದ ಮನಸ್ಸಿಗೆ ಬಹಳ ನೋವಾಗಿದೆ, ತಲೆತಗ್ಗಿಸುವ ಪರಿಸ್ಥಿತಿ ಬಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಬುಧವಾರ ಚಿತ್ರದುರ್ಗದ ಸಿರಿಗೆರೆಯಲ್ಲಿ ನಡೆದ ತರಳಬಾಳು ಬೃಹನ್ಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 16ನೇ ಶ್ರದ್ದಾಂಜಲಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಚರ್ಚ್‌ಗಳ ಮೇಲಿನ ದಾಳಿಯನ್ನು ನೇರವಾಗಿ ಪ್ರಸ್ತಾಪಿಸದೆ ಮಾತನಾಡಿದ ಅವರು, ಅಹಿತಕರ ಘಟನೆಗಳು ನಡೆದರೆ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಸಿದ್ದ. ಆದರೆ ಕಾನೂನು ಕೈಗೆತ್ತಿಕೊಂಡರೆ ಗೂಂಡಾ ಕಾಯ್ದೆ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಯಾವುದೇ ರೀತಿಯ ರಾಜಕೀಯ ಲಾಭಕ್ಕೆ ಮತ್ತು ಅಭಿವೃದ್ಧಿ ಚಟುವಟಿಕೆಗೆ ಅಡ್ಡಿಪಡಿಸಲು ಕಾನೂನು ಕೈಗೆತ್ತಿಕೊಂಡರೆ ಸರ್ಕಾರ ಸಹಿಸುವುದಿಲ್ಲ,ಅದಕ್ಕೆ ಜಿಲ್ಲಾಡಳಿತವನ್ನೇ ಹೊಣೆ ಮಾಡುತ್ತೇವೆ. ಇತ್ತೀಚಿನ ಘಟನೆ ನಮಗೆ ನೋವುಂಟು ಮಾಡಿದ್ದು,ತಲೆತಗ್ಗಿಸುವ ಪರಿಸ್ಥಿತಿ ಬಂದಿದೆ ಎಂದು ನೊಂದು ನುಡಿದರು.
ಮತ್ತಷ್ಟು
ಸೂಕ್ಷ್ಮ ಪ್ರದೇಶ ಭದ್ರತೆಗೆ ಇಂಡಿಯಾ ಮೀಸಲು ಪಡೆ
ಬಿಬಿಎಂಪಿ ಚುನಾವಣೆ: ಹೈಕೋರ್ಟ್‌ಗೆ ರಿಟ್
ಚರ್ಚ್ ದಾಳಿ: ಕಾಂಗ್ರೆಸ್‌ನಿಂದ ರಾಜಭವನ ಚಲೋ
ಯಡಿಯೂರಪ್ಪಗೆ ಅಹಂಕಾರ:ವಿ.ಎಸ್.ಉಗ್ರಪ್ಪ
ಕೇಂದ್ರ ತನಿಖಾ ತಂಡಕ್ಕೆ ರಾಜ್ಯದ ತಿರುಗೇಟು
ಮದಿರೆ ನೀಡಲು ಮಾನಿನಿಯರಿಗೆ ಅವಕಾಶ:ಹೈಕೋರ್ಟ್