ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹೆರಾಯಿನ್ ಸಾಗಿಸುತ್ತಿದ್ದ ವಿದ್ಯಾರ್ಥಿನಿ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೆರಾಯಿನ್ ಸಾಗಿಸುತ್ತಿದ್ದ ವಿದ್ಯಾರ್ಥಿನಿ ಬಂಧನ
ಬೆಂಗಳೂರಿನಿಂದ ವಿದೇಶಕ್ಕೆ ಕೋಟ್ಯಂತರ ರೂ.ಮೌಲ್ಯದ ಮಾದಕ ವಸ್ತು ಹೆರಾಯಿನ್ ಸಾಗಿಸಲು ಯತ್ನಸುತ್ತಿದ್ದ ವಿದ್ಯಾರ್ಥಿಯೊಬ್ಬಳನ್ನು ಗುರುವಾರ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಸುಮಾರು 14 ಕೋಟಿ ರೂ.ಮೌಲ್ಯದ 5ಕೆ.ಜಿ ಹೆರಾಯಿನ್‌‌ನೊಂದಿಗೆ ಬೆಂಗಳೂರಿನಿಂದ ಬ್ಯಾಂಕಾಕ್‌ಗೆ ತೆರಳಲು ಯತ್ನಿಸುತ್ತಿದ್ದ ಸಂದರ್ಭದಲ್ಲಿಯೇ ಕಸ್ಟಮ್ಸ್ ಅಧಿಕಾರಿಗಳು ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೇ ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಆಕೆ ಗುರುವಾರ ಬೆಳಿಗ್ಗೆಯಷ್ಟೇ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದಳು, ಇಲ್ಲಿಂದ ಬ್ಯಾಂಕಾಕ್‌ಗೆ ತೆರಳಲು ಸಜ್ಜಾಗುತ್ತಿದ್ದಂತೆಯೇ ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಕೋಟ್ಯಂತರ ರೂ.ಹೆರಾಯಿನ್ ಪತ್ತೆಯಾಗಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಬಂಧಿತ ವಿದ್ಯಾರ್ಥಿನಿಯನ್ನು ವಿಯೆಟ್ನಾಂ ಮೂಲದವಳೆಂದು ಗುರುತಿಸಲಾಗಿದೆ. ಇದೀಗ ಆಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ದಾಳಿಯಿಂದ ತಲೆ ತಗ್ಗಿಸುವಂತಾಗಿದೆ:ಯಡಿಯೂರಪ್ಪ
ಸೂಕ್ಷ್ಮ ಪ್ರದೇಶ ಭದ್ರತೆಗೆ ಇಂಡಿಯಾ ಮೀಸಲು ಪಡೆ
ಬಿಬಿಎಂಪಿ ಚುನಾವಣೆ: ಹೈಕೋರ್ಟ್‌ಗೆ ರಿಟ್
ಚರ್ಚ್ ದಾಳಿ: ಕಾಂಗ್ರೆಸ್‌ನಿಂದ ರಾಜಭವನ ಚಲೋ
ಯಡಿಯೂರಪ್ಪಗೆ ಅಹಂಕಾರ:ವಿ.ಎಸ್.ಉಗ್ರಪ್ಪ
ಕೇಂದ್ರ ತನಿಖಾ ತಂಡಕ್ಕೆ ರಾಜ್ಯದ ತಿರುಗೇಟು