ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹೈಕೋರ್ಟ್ ಪೌರೋಹಿತ್ಯದಲ್ಲಿ ಒಂದಾದ ವಧು-ವರ...
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೈಕೋರ್ಟ್ ಪೌರೋಹಿತ್ಯದಲ್ಲಿ ಒಂದಾದ ವಧು-ವರ...
ಪ್ರೀತಿಸಿ ಮದುವೆಯಾಗಿದ್ದ ನವಜೋಡಿಗಳಿಗೆ ಹೆತ್ತವರು ವಿರೋಧ ವ್ಯಕ್ತಪಡಿಸಿದ ಪ್ರಕರಣವೊಂದು ಹೈಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣದ ಮಧ್ಯಸ್ಥಿಕೆ ವಹಿಸಿದ ಹೈಕೋರ್ಟ್ ವಧು ವರರನ್ನು ಒಂದುಗೂಡಿಸಿದ ಘಟನೆ ನಡೆದಿದೆ.

'ನನ್ನ ಪತ್ನಿಯನ್ನು ಗೃಹಬಂಧನದಲ್ಲಿ ಇಡಲಾಗಿದೆ. ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನನಗೆ ಒಪ್ಪಿಸಬೇಕು'ಎಂದು ಕೋರಿ ಬೆಂಗಳೂರಿನ ನಗರದ ರಿಲಯನ್ಸ್ ಸಂಸ್ಥೆಯ ಉದ್ಯೋಗಿ ಎಂ.ಶಿವಕುಮಾರ್ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಗೆ ಜಯ ದೊರಕಿದೆ.

ನ್ಯಾಯಮೂರ್ತಿ ಮಂಜೂಳಾ ಚೆಲ್ಲೂರ್ ನೇತೃತ್ವದ ಪೀಠದ ಮುಂದೆ ಸೋಮವಾರ ಅಲಕಾಳನ್ನು ಪೊಲೀಸರು ಹಾಜರುಪಡಿಸಿದಾಗ, ನಾನು ಕಾನೂನು ಬದ್ದವಾಗಿ ಶಿವಕುಮಾರ್ ಅವರನ್ನು ಮದುವೆಯಾಗಿರುವುದಾಗಿ ತಿಳಿಸಿದರು. ಇದಾದ ನಂತರ ಆಕೆಗೆ ಹೆಚ್ಚಿನ ರಕ್ಷಣೆ ನೀಡುವಂತೆ ಪೊಲೀಸರಿಗೆ ಆದೇಶಿಸಿದ್ದರು.

ಪ್ರಕರಣದ ವಿವರ: ರಿಲಯನ್ಸ್ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿರುವ ಶಿವಕುಮಾರ್, ಅದೇ ಸಂಸ್ಥೆಯ ಉದ್ಯೋಗಿ ಅಲಕಾ ತಿವಾರಿಯನ್ನು ಪ್ರೀತಿಸಿ ವಿವಾಹವಾಗಿದ್ದರು. ಅನ್ಯ ಜಾತಿಗೆ ಸೇರಿದ ಅಲಕಾ ಅವರನ್ನು ಮೇ 8ರಂದು ಪೀಣ್ಯ ಉಪ ನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಕಾನೂನು ಬದ್ದವಾಗಿ ವಿವಾಹವಾಗಿದ್ದರು.

ಇದಾದ ನಂತರ ಹುಡುಗಿಯ ತಂದೆ ಮಹೇಶ್ ಪ್ರಸಾದ್ ತಿವಾರಿ ಮೇ 11ರಂದು ಪೀಣ್ಯ ಠಾಣೆಯಲ್ಲಿ ನನ್ನ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದರು.

ನಂತರ ಠಾಣೆಯಲ್ಲಿ ಹಾಜರಾದ ನವದಂಪತಿ, ನಾವಿಬ್ಬರೂ ಕಾನೂನು ಬದ್ಧವಾಗಿ ವಿವಾಹ ಆಗಿದ್ದೇವೆ. ನಮ್ಮನ್ನು ಯಾರೂ ಅಪಹರಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಆಗ ತಂದೆ ಪ್ರಸಾದ್ ಅವರು ಸಂಪ್ರದಾಯದ ಪ್ರಕಾರ ಮದುವೆ ಮಾಡುವುದಾಗಿ ಹೇಳಿ ಪುತ್ರಿ ಅಲಕಾ ಅವರನ್ನು ತಾಯಿಯ ಜೊತೆ ಅಲಹಾಬಾದ್‌ಗೆ ಕಳುಹಿಸಿಕೊಟ್ಟಿದ್ದರು.

ಇದಾದ ಒಂದು ತಿಂಗಳ ನಂತರವೂ ಅಲಕಾಳನ್ನು ಬೆಂಗಳೂರಿಗೆ ಕರೆತರಲಿಲ್ಲ. ಅಷ್ಟೆ ಅಲ್ಲದೆ ಶಿವಕುಮಾರ್ ಜೊತೆ ಮಾತನಾಡಲು ಅವಕಾಶ ನೀಡದೆ ಗೃಹಬಂಧನದಲ್ಲಿ ಇರಿಸಲಾಗಿತ್ತು. ಈ ವಿಷಯ ಗೊತ್ತಾಗುತ್ತಿದ್ದಂತೆ ಜೂನ್ 8ರಂದು ಪೀಣ್ಯ ಠಾಣೆಯಲ್ಲಿ ದೂರು ದಾಖಲಿಸಲು ಶಿವಕುಮಾರ್ ಮುಂದಾದರು ಕೂಡ, ಅಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಿಲ್ಲ.

ನಂತರ ಹೈಕೋರ್ಟ್ ಮೊರೆ ಹೋದ ಶಿವಕುಮಾರ್, ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ಪತ್ನಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನನಗೆ ಒಪ್ಪಿಸಬೇಕು ಎಂದು ಮನವಿ ಮಾಡಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚೆಲ್ಲೂರ್, ನ್ಯಾಯಮೂರ್ತಿ ವೇಣುಗೋಪಾಲ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಜೂನ್ 22ರೊಳಗೆ ಅಲಕಾ ಅವರನ್ನು ಹಾಜರುಪಡಿಸುವಂತೆ ಪೀಣ್ಯ ಪೊಲೀಸರಿಗೆ ಆದೇಶ ನೀಡಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಳೆ ಕೈಕೊಟ್ರೂ ಬೆಂಗ್ಳೂರಿಗೆ ನೀರಿನ ಬರವಿಲ್ವಂತೆ: ಮಂಡಳಿ
ಅಚ್ಚರಿ ಮೂಡಿಸಿದ ರಾಜ್ಯಪಾಲ ಠಾಕೂರ್ ವರ್ಗಾವಣೆ
ಮಳೆಗಾಗಿ 'ಅನಂತೇಶ್ವರ'ನ ಮೊರೆಹೊಕ್ಕ ಡಿಕೆಶಿ
ಗಣಿ ಸಮೀಕ್ಷೆ ಯಾವ ತನಿಖೆಗೂ ಸಿದ್ಧ: ಜನಾರ್ದನ ರೆಡ್ಡಿ
ಮಳೆ ಕೈ ಕೊಟ್ರೆ ವಿದ್ಯುತ್ ದರ ಏರಿಕೆ: ಈಶ್ವರಪ್ಪ
ಮೈಸೂರು: ಪೊಲೀಸ್ ಇನ್ಸ್‌ಪೆಕ್ಟರ್ ಮನೆಗೆ ಕನ್ನ!