| ಬಜೆಟ್ ಬಡವರ ಮುಂಗಡ ಪತ್ರ: ದೇಶಪಾಂಡೆ | | | ಬೆಂಗಳೂರು, ಮಂಗಳವಾರ, 7 ಜುಲೈ 2009( 15:42 IST ) | | | |
| | |
| ಯುಪಿಎ ಸರ್ಕಾರ ಇಂದು ಮಂಡಿಸಿದ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಕೇಂದ್ರದ ಬಜೆಟ್ ಪತ್ರ ಬಡವರ ಮುಂಗಡ ಪತ್ರವಾಗಿದೆ ಎಂದು ತಿಳಿಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ವರ್ಗಗಳಿಗೂ ಅನುಕೂಲವಾಗುವಂತಹ ಪ್ರಗತಿಪರ ಬಜೆಟ್‌ನ್ನು ಕೇಂದ್ರ ಸರ್ಕಾರ ಮಂಡಿಸಿರುವುದು ಅಭಿನಂದನಾರ್ಹ ಎಂದು ತಿಳಿಸಿದ್ದಾರೆ.ಬಂಡವಾಳ ಹೂಡಿಕೆದಾರರಿಗೆ ಸೇರಿದಂತೆ ಯಾರಿಗೂ ಹೊರೆಯಾಗದಂತೆ ಶೇ.9ರ ಜಿಡಿಪಿ ಗುರಿಯನ್ನು ತಲುಪಲು ಮಂಡಿಸಿರುವ ಬಜೆಟ್ ಅನ್ನು ಪ್ರತಿಪಕ್ಷಗಳು ಸ್ವಾಗತಿಸಬೇಕೆಂದು ಅವರು ಹೇಳಿದ್ದಾರೆ.ದೇಶದ ಬಡವರಿಗೆ ಆಹಾರ ಭದ್ರತೆ ಒದಗಿಸಲು ಕೇವಲ 3 ರೂ.ಗೆ ಒಂದು ಕೆಜಿ ಅಕ್ಕಿ ಅಥವಾ ಗೋಧಿಯಂತೆ ಬಿಪಿಎಲ್ ಕುಟುಂಬಗಳಿಗೆ 25 ಕೆಜಿ ಅಕ್ಕಿ ಅಥವಾ ಗೋಧಿ ನೀಡಲು ನಿರ್ಧರಿಸಿ ಯುಪಿಎ ಸರ್ಕಾರ ಈ ಹಿಂದೆ ನೀಡಿದ ಭರವಸೆಯನ್ನು ಈಡೇರಿಸಿದೆ ಎಂದು ಅವರು ತಿಳಿಸಿದ್ದಾರೆ. |
| |
| | |
| | | |
|
| | |
|
|
| | |
|
|
| |
|  | |