ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಎಂ ಸರ್ಟಿಫಿಕೇಟ್ ನಮಗೆ ಅಗತ್ಯವಿಲ್ಲ: ಕುಮಾರಸ್ವಾಮಿ (JDS | HD Kumaraswamy | HD Devegowda | Yediyurappa)
Feedback Print Bookmark and Share
 
ಪ್ರವಾಹ ಬಾಧಿತ ಪ್ರದೇಶಗಳಲ್ಲಿ ಜೆಡಿಎಸ್ ಕೈಗೊಳ್ಳುತ್ತಿರುವ ಪರಿಹಾರ ವಿತರಣಾ ಕಾರ್ಯಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಟಿಫಿಕೇಟ್ ನೀಡುವ ಅಗತ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ರಾಜ್ಯದ ಪ್ರವಾಹ ವಿಚಾರದಲ್ಲಿ ರಾಜ್ಯದ ಪ್ರತಿಪಕ್ಷಗಳು ಸಕಾರಾತ್ಮಕ ಸ್ಪಂದನೆ ತೋರಲಿಲ್ಲ. ನಾಡಿನ ಜನತೆ ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡು ದುಃಖ ಅನುಭವಿಸುತ್ತಿರುವ ಈ ಹೊತ್ತಿನಲ್ಲಿ ಪಕ್ಷಭೇದ ಮರೆತು ಒಗ್ಗಟ್ಟು ತೋರಿಸಬೇಕಾಗಿತ್ತು ಎಂದು ಪ್ರಧಾನಿಗೆ ಹೆಚ್ಚಿನ ನೆರೆ ಪರಿಹಾರ ಕುರಿತು ಮನವಿ ಸಲ್ಲಿಸಲು ತೆರಳಿದ್ದ ಸರ್ವಪಕ್ಷ ನಿಯೋಗದಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಹೊರಗುಳಿದ್ದುದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ಕುಮಾರಸ್ವಾಮಿ ತಿರುಗೇಟು ನೀಡಿದರು.

ನಮ್ಮ ಪಕ್ಷವು ನೆರೆ ಸಂತ್ರಸ್ತರಿಗೆ ತನ್ನದೇ ಆದ ರೀತಿಯಲ್ಲಿ ಸಹಾಯ ಮಾಡುತ್ತಿದೆ. ಕಾರ್ಯಕರ್ತರು ಅವಿರತವಾಗಿ ಹೆಚ್ಚಿನ ಗ್ರಾಮಗಳಲ್ಲಿ ಶ್ರಮ ವಹಿಸುತ್ತಿದ್ದಾರೆ. ಇದೆಲ್ಲ ಮುಖ್ಯಮಂತ್ರಿಯವರ ಕಣ್ಣಿಗೆ ಬೀಳುತ್ತಿಲ್ಲ. ಈ ಕುರಿತು ನಮಗೆ ಅವರ ಪ್ರಮಾಣ ಪತ್ರದ ಅಗತ್ಯವಿಲ್ಲ ಎಂದರು.

ದೇವೇಗೌಡರಿಗೆ ವಿವರಣೆ..
ನೆರೆ ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ತೆರಳಿದ್ದ ಜೆಡಿಎಸ್ ಕಾರ್ಯಕರ್ತರಿಂದ ಪರಿಸ್ಥಿತಿ ಕುರಿತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮಾಹಿತಿ ಪಡೆದುಕೊಂಡಿದ್ದಾರೆ.

ಕುಮಾರಸ್ವಾಮಿ ಸೇರಿದಂತೆ ಪರಿಹಾರ ವಿತರಣೆಗೆ ತೆರಳಿದ್ದ ಕಾರ್ಯಕರ್ತರೊಡನೆ ತನ್ನ ಪದ್ಮನಾಭ ನಗರದ ಮನೆಯಲ್ಲಿ ಚರ್ಚೆ ನಡೆಸಿದ ಗೌಡರು, ಪರಿಸ್ಥಿತಿಯ ಅವಲೋಕನ ನಡೆಸಿದರು.

ಬಟ್ಟೆ, ಅಕ್ಕಿ, ಆಹಾರ ವಸ್ತುಗಳು ಹಾಗೂ ದಿನಬಳಕೆ ವಸ್ತುಗಳನ್ನು ಲಾರಿಗಳಲ್ಲಿ ತುಂಬಿಕೊಂಡು ಜೆಡಿಎಸ್ ಸಂತ್ರಸ್ತರಿಗೆ ವಿತರಿಸಿತ್ತು. ಜೆಡಿಎಸ್‌ನ ಈ ಪರಿಹಾರ ವಿತರಣಾ ತಂಡಕ್ಕೆ ಕುಮಾರಸ್ವಾಮಿ ಮುಂದಾಳುತ್ವ ವಹಿಸಿದ್ದರು.

ಈ ಸಂದರ್ಭದಲ್ಲಿ ವ್ಯವಸ್ಥೆಯಲ್ಲಿ ಲೋಪಗಳು ಅಥವಾ ಪರಿಹಾರ ವಿತರಣೆಯಲ್ಲಿ ಅವ್ಯವಹಾರ ಕಂಡು ಬಂದಲ್ಲಿ ಅದರ ವಿರುದ್ಧ ಪ್ರತಿಭಟನೆ ನಡೆಸುವ ಕುರಿತು ಗೌಡರಿಂದ ಕಾರ್ಯಕರ್ತರು ಮಾಹಿತಿ ಪಡೆದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ