| ಇಂಟರ್ನೆಟ್ ಎಕ್ಸ್‌ಪ್ಲೋರರ್-8 ಡೌನ್‌ಲೋಡ್‌ಗೆ ಲಭ್ಯ | | | ರೆಡ್ಮಂಡ್, ಗುರುವಾರ, 19 ಮಾರ್ಚ್ 2009( 18:47 IST ) | | | |
| | |
| ಎರಡು ಬೀಟಾ ಆವೃತ್ತಿಗಳ ಬಳಿಕ ಮೈಕ್ರೋಸಾಫ್ಟ್ ಕಾರ್ಪೊರೇಶನ್ ತನ್ನ ಬಹುನಿರೀಕ್ಷಿತ ಇಂಟರ್ನೆಟ್ ಎಕ್ಸ್‌ಪ್ಲೋರರ್ -8 ಆವೃತ್ತಿಯನ್ನು ಗುರುವಾರ ರಾತ್ರಿ ಅಧಿಕೃತವಾಗಿ ಬಿಡುಗಡೆ ಮಾಡುತ್ತಿದೆ. ಭಾರತೀಯ ಕಾಲಮಾನ ಪ್ರಕಾರ ಗುರುವಾರ ರಾತ್ರಿ 9.30ಕ್ಕೆ ಮೈಕ್ರೋಸಾಫ್ಟ್ ಇದನ್ನು ಬಿಡುಗಡೆ ಮಾಡಲಿದೆ ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ. ಇದು ವೇಗ, ಸರಳ ಮತ್ತು ಹಿಂದೆಂದಿಗಿಂತಲೂ ಸುರಕ್ಷಿತ ಎಂದು ಮೈಕ್ರೋಸಾಫ್ಟ್ ಹೇಳಿಕೊಂಡಿದೆ.ಮೋಝಿಲ್ಲಾ ಫೈರ್‌ಫಾಕ್ಸ್ ಮತ್ತು ಗೂಗಲ್ ಕ್ರೋಮ್ ಮತ್ತು ಆಪಲ್‌ನ ಸಫಾರಿ ಬ್ರೌಸರ್‌ಗಳು ಮಾರುಕಟ್ಟೆಯಲ್ಲಿ ತಮ್ಮ ಛಾಪು ಸ್ಥಾಪಿಸಿದ ಬಳಿಕ ಮೈಕ್ರೋಸಾಫ್ಟ್‌ನ ಇಂಟರ್ನೆಟ್ ಎಕ್ಸ್‌ಪ್ಲೋರರ್ ಮಾರುಕಟ್ಟೆಯ ಮೇಲಿನ ಹಿಡಿತ ಮರಳಿ ಸ್ಥಾಪಿಸುವ ಗುರಿಯೊಂದಿಗೆ ಐಇ-8ರಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿದೆ.ಮೈಕ್ರೋಸಾಫ್ಟ್ ವೆಬ್‌ಸೈಟಿನಿಂದ ಐಇ-8ನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.ಈ ಬ್ರೌಸರಿನಲ್ಲಿ, ವೆಬ್‌ಸೈಟಿನ ಒಂದು ಪಠ್ಯ ಭಾಗವನ್ನು ಹೈಲೈಟ್ ಮಾಡಿ, ಅದನ್ನು ಶೋಧ, ಭಾಷಾಂತರ ಅಥವಾ ನಕಾಶೆ ಮುಂತಾದ ಕಾರ್ಯಗಳಿಗೆ ಪ್ರಯೋಗಿಸಬಲ್ಲ ವೇಗವರ್ಧಕಗಳು (ಎಕ್ಸಲರೇಟರ್‌ಗಳು) ಎಂಬ ವಿಶಿಷ್ಟ ಲಕ್ಷಣವಿರುತ್ತದೆ. ಅಲ್ಲದೆ, ಬ್ರೌಸರ್ ಚರಿತ್ರೆ (ಹಿಸ್ಟರಿ) ಅಥವಾ ಕುಕೀಗಳನ್ನು ಬ್ರೌಸರ್ ಮುಚ್ಚಿದ ತಕ್ಷಣವೇ ನಿರ್ನಾಮ ಮಾಡಬಲ್ಲ ಸಾಮರ್ಥ್ಯವಿರುವ 'ಇನ್‌ಪ್ರೈವೇಟ್ ವ್ಯೂ' ಆಯ್ಕೆಯೂ ಇದರಲ್ಲಿ ಲಭ್ಯವಿದೆ.ಈ ಬ್ರೌಸರ್ 25 ಭಾಷೆಗಳಲ್ಲಿ ಲಭ್ಯವಿದೆ ಎಂದು ಕಂಪನಿ ಪ್ರಕಟಣೆ ಹೇಳಿದೆ. ವಿಂಡೋಸ್ ಕಾರ್ಯಾಚರಣಾ ವ್ಯವಸ್ಥೆಗಳಲ್ಲಿ ಡೀಫಾಲ್ಟ್ ಬ್ರೌಸರ್ ಆಗಿ ಬರುತ್ತಿದ್ದ ಐಇ, ಇದರಿಂದಾಗಿ ಮಾರುಕಟ್ಟೆಯಲ್ಲಿ ಭದ್ರ ನೆಲೆ ಸ್ಥಾಪಿಸಿಕೊಂಡಿತ್ತು. |
| |
| | |
|
|
| | |
|
|
| | |
|
|
| |
|  | |