| ಕಾಶ್ಮೀರ ವಿವಾದವನ್ನು ಮತ್ತೆ ಕೆದಕಿದ ಗಿಲಾನಿ | | | ಇಸ್ಲಾಮಾಬಾದ್, ಮಂಗಳವಾರ, 2 ಜೂನ್ 2009( 15:22 IST ) | | | |
| | |
| ದಕ್ಷಿಣ ಏಷ್ಯಾ ವಲಯದಲ್ಲಿ ಶಾಂತಿ ಮತ್ತು ಸ್ಥಿರತೆಗೂ ಮತ್ತು ಭಾರತದ ಜತೆ ವಿವಾದಾತ್ಮಕ ಕಾಶ್ಮೀರ ವಿವಾದ ಇತ್ಯರ್ಥಕ್ಕೂ ಸಂಬಂಧ ಕಲ್ಪಿಸುವ ಮೂಲಕ ಪಾಕಿಸ್ತಾನದ ಪ್ರಧಾನಮಂತ್ರಿ ಯುಸುಫ್ ರಾಜಾ ಗಿಲಾನಿ ಮಂಗಳವಾರ ಕಾಶ್ಮೀರ ವಿವಾದವನ್ನು ಮತ್ತೆ ಕೆದಕಿದ್ದಾರೆ. ಟಿವಿಯಲ್ಲಿ ಪ್ರಸಾರವಾದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನದ ಪ್ರಧಾನಮಂತ್ರಿ, ಏಷ್ಯಾವಲಯದಲ್ಲಿ ನಿರಂತರ ಶಾಂತಿ ಸ್ಥಾಪನೆಗೆ ಕಾಶ್ಮೀರ ಕೀಲಿಕೈಯಾಗಿದೆಯೆಂದು ಹೇಳಿದ್ದಾರೆ. ಕಾಶ್ಮೀರಿ ಜನರ ಆಶೋತ್ತರಗಳು ಮತ್ತು ವಿಶ್ವಸಂಸ್ಥೆ ಭದ್ರತಾಮಂಡಳಿ ನಿರ್ಣಯಗಳಿಗೆ ಅನುಗುಣವಾಗಿ ಕಾಶ್ಮೀರ ವಿವಾದಕ್ಕೆ ಪರಿಹಾರ ಹುಡುಕಲು ಪಾಕಿಸ್ತಾನ ಬದ್ಧವಾಗಿದೆ ಎಂದೂ ಗಿಲಾನಿ ಹೇಳಿದರು.ಕಾಶ್ಮೀರ ವಿವಾದ ಪರಿಹಾರಕ್ಕೆ ಭಾರತವನ್ನು ರಚನಾತ್ಮಕ ಮತ್ತು ಉದ್ದೇಶಪೂರಿತ ಮಾತುಕತೆಯಲ್ಲಿ ತೊಡಗಿಸಿಕೊಳ್ಳಲು ಪಾಕಿಸ್ತಾನ ಬಯಸಿದೆಯೆಂದು ಗಿಲಾನಿ ನುಡಿದರು. ದಕ್ಷಿಣ ಏಷ್ಯಾ ವಲಯದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಪ್ರಾಮಾಣಿಕ ಮಾತುಕತೆ ಮೂಲಕ ಕಾಶ್ಮೀರ ವಿವಾದಕ್ಕೆ ಪರಿಹಾರ ಕಂಡುಹಿಡಿಯಬೇಕೆಂದು ಅವರು ತಿಳಿಸಿದರು.ಎರಡು ಪರಮಾಣು ಶಕ್ತಿ ರಾಷ್ಟ್ರಗಳ ನಡುವೆ ನೆನೆಗುದಿಗೆ ಬಿದ್ದ ಎಲ್ಲ ವಿವಾದಗಳ ಸೌಹಾರ್ದ ಇತ್ಯರ್ಥಕ್ಕೆ ಭಾರತ ಗಂಭೀರತೆಯ ಕೊರತೆ ಹೊಂದಿರುವುದಾಗಿ ಗಿಲಾನಿ ಆರೋಪಿಸಿದ್ದಾರೆ.ಭಾರತ ಸರ್ಕಾರದ ಮೇಲೆ ಮುಕ್ತ ದಾಳಿ ನಡೆಸಿದ ಗಿಲಾನಿ, ಕಾಶ್ಮೀರಿ ಜನತೆಯ ಧ್ವನಿಗಳನ್ನು ಭಾರತ ಬಲಾತ್ಕಾರದಿಂದ ಉಡುಗಿಸಿದ್ದಾಗಿ ಆರೋಪಿಸಿದರು. ಕಾಶ್ಮೀರಿ ಜನರ ಸ್ವಾತಂತ್ರ್ಯಕ್ಕಾಗಿ ಧರ್ಮಯುದ್ಧಕ್ಕೆ ಇಸ್ಲಾಮಾಬಾದ್ ನೈತಿಕ, ರಾಜತಾಂತ್ರಿಕ ಮತ್ತು ರಾಜಕೀಯ ಬೆಂಬಲ ನೀಡುವುದಕ್ಕೆ ದೃಢಮನಸ್ಕವಾಗಿದೆಯೆಂದು ಹೇಳುವ ಮೂಲಕ ಗಿಲಾನಿ ಭಾರತವನ್ನು ಇನ್ನಷ್ಟು ಕೆಣಕಿದ್ದಾರೆ. |
| |
| | |
| | | |
|
| | | | | |
|
|
| |
|  | |