| ಅಮೆರಿಕ, ಮುಸ್ಲಿಂರ ನೂತನ ಶಕೆಗೆ ಒಬಾಮಾ ಕರೆ | | | ಕೈರೊ, ಗುರುವಾರ, 4 ಜೂನ್ 2009( 18:48 IST ) | | | |
| | |
| ಅಮೆರಿಕ ಮತ್ತು ಮುಸ್ಲಿಮರ ನಡುವೆ ನೂತನ ಶಕೆಯ ಆರಂಭಕ್ಕೆ ಅಧ್ಯಕ್ಷ ಬರಾಕ್ ಒಬಾಮಾ ಕರೆನೀಡಿದ್ದಾರೆ. ಜಗತ್ತಿನಾದ್ಯಂತ ಹಿಂಸಾತ್ಮಕ ಉಗ್ರವಾದಕ್ಕೆ ನಾವು ಒಂದಾಗಿ ಪ್ರತಿರೋಧ ತೋರಬೇಕೆಂದು ಹೇಳಿದ ಒಬಾಮಾ ಮಧ್ಯಪೂರ್ವದಲ್ಲಿ ಶಾಂತಿ ಸ್ಥಾಪನೆಗೆ ನಿರಂತರ ಪ್ರಯತ್ನ ಮಾಡಬೇಕೆಂದು ಅವರು ನುಡಿದರು.ಅಮೆರಿಕ ಮತ್ತು ಮುಸ್ಲಿಂ ಜಗತ್ತಿನ ನಡುವೆ ಇರುವ ಅನುಮಾನ ಮತ್ತು ಅಪನಂಬಿಕೆಯ ಚಕ್ರಕ್ಕೆ ತೆರೆಎಳೆಯಬೇಕು ಎಂದು 2001ರಂದು ಅಮೆರಿಕದ ಮೇಲೆ ದಾಳಿ ಮತ್ತು ಇರಾಕ್ ಯುದ್ಧದ ಬಳಿಕ ಬಾಂಧವ್ಯದ ಕೊಂಡಿಯನ್ನು ಪುನಃ ಬೆಸೆಯುವ ತಮ್ಮ ಭಾಷಣದಲ್ಲಿ ಒಬಾಮಾ ಹೇಳಿದರು.ಕೈರೊದಲ್ಲಿ ಬಹುಕಾಲದಿಂದ ನಿರೀಕ್ಷಿಸಿದ್ದ ತಮ್ಮ ಭಾಷಣದಲ್ಲಿ ಒಬಾಮಾ ತಮ್ಮ ಮುಸ್ಲಿಂ ಬೇರನ್ನು ಕುರಿತು ಪ್ರಸ್ತಾಪಿಸಿದರು. ಅಮೆರಿಕಕ್ಕೆ ಮುಸ್ಲಿಮರು ಮಹಾನ್ ಕೊಡುಗೆ ನೀಡಿದ್ದಾರೆಂದು ಶ್ಲಾಘಿಸಿದರು. ಸಾರ್ವತ್ರಿಕ ಧಾರ್ಮಿಕ ಸ್ವಾತಂತ್ರ್ಯವಿರಬೇಕೆಂದು ಹೇಳಿದ ಅವರು, ಎರಡು ಸಂಸ್ಕೃತಿಗಳು ಪೈಪೋಟಿಯಲ್ಲಿ ಇರಬಾರದೆಂದು ಹೇಳಿದರು. ಜಾಗತೀಕರಣಕ್ಕೆ ಮುಸ್ಲಿ ಜಗತ್ತು ಬೆದರಬಾರದು. ಅಭಿವೃದ್ಧಿ ಮತ್ತು ಸಂಪ್ರದಾಯದ ನಡುವೆ ಸಂಘರ್ಷವಿರಬಾರದೆಂದು ನುಡಿದರು.ಇಸ್ಲಾಂ ಧರ್ಮದ ನಕಾರಾತ್ಮಕ ಪಡಿಯಚ್ಚುಗಳು ಎಲ್ಲೇ ಕಂಡರೂ ಅದರ ವಿರುದ್ಧ ಅಮೆರಿಕ ಅಧ್ಯಕ್ಷರಾಗಿ ಹೋರಾಟ ಮಾಡುವುದು ತಮ್ಮ ಜವಾಬ್ದಾರಿ ಎಂದು ಹೇಳಿದರು. ಆದರೆ ಹಿಂಸಾತ್ಮಕ ಮುಸ್ಲಿಂ ಉಗ್ರವಾದವನ್ನು ಮಾನವಜನಾಂಗ ಒಪ್ಪತಕ್ಕದ್ದಲ್ಲವೆಂದು ನುಡಿದರು. ಹಿಂಸಾತ್ಮಕ ಉಗ್ರವಾದದ ನಿರ್ಮೂಲನೆಗೆ ಇಸ್ಲಾಂ ಸಮಸ್ಯೆಯ ಭಾಗವಲ್ಲ. ಇಸ್ಲಾಂ ಶಾಂತಿ ಪ್ರವರ್ತನೆಗೆ ಭಾಗವೆಂದು ನುಡಿದರು. |
| |
| | |
| | | |
|
| | | | | |
|
|
| |
|  | |