ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > 'ಬಸುರಿ ಪುರುಷ'ನಿಂದ ಮತ್ತೊಂದು ಮಗುವಿಗೆ ಜನ್ಮ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಬಸುರಿ ಪುರುಷ'ನಿಂದ ಮತ್ತೊಂದು ಮಗುವಿಗೆ ಜನ್ಮ
ಲಿಂಗಪರಿವರ್ತನೆ ಮೂಲಕ ಕಳೆದ ವರ್ಷ ಮುದ್ದಾದ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿ ಇತಿಹಾಸ ಸೃಷ್ಟಿಸಿದ್ದ ಪುರುಷ ಥೋಮಸ್ ಬೀಟೈ ಇದೀಗ ಎರಡನೇ ಮಗುವಿಗೆ ಜನ್ಮ ನೀಡಿ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾ(ಳೆ)ರೆ.

ಮಂಗಳವಾರ ಮುಂಜಾನೆ ಓರೆಗಾನ್‌ನ ಬೆಂಡ್‌ನಲ್ಲಿ ಗಂಡು ಮಗುವೊಂದಕ್ಕೆ ಬಿಯಾಟಿ ಜನ್ಮ ನೀಡಿರುವುದಾಗಿ ಎಬಿಸಿ ನ್ಯೂಸ್ ವರದಿ ತಿಳಿಸಿದ್ದು, ಮಗು ಆರೋಗ್ಯವಂತವಾಗಿದೆ ಎಂದು ವರದಿ ಹೇಳಿದೆ.

ಕಳೆದ ವರ್ಷ ನಾನೀಗ ಬಸುರಿ ಎಂದು ತನ್ನ ತೆಳುವಾದ ಗಡ್ಡ ನೀವುತ್ತಾ ಥಾಮಸ್ ತನ್ನ ಪತ್ನಿ ನ್ಯಾನ್ಸಿಯೊಂದಿಗೆ ಫೋಟೋಕ್ಕೆ ಪೋಸ್ ಕೊಟ್ಟು ಎಲ್ಲರ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದ. ಹುಟ್ಟುವಾಗ ಹುಡುಗಿಯಾಗಿದ್ದ ಥಾಮಸ್ ಬಳಿಕ ಶಸ್ತ್ರ ಚಿಕಿತ್ಸೆ ಹಾಗೂ ಹಾರ್ಮೋನ್ ಚಿಕಿತ್ಸೆ ಪಡೆಯುವ ಮೂಲಕ ಪುರುಷನಾಗಿ ಬದಲಾಗಿದ್ದ. ಆದರೆ ತನ್ನ ಗರ್ಭಕೋಶವನ್ನು ಮಾತ್ರ ಹಾಗೆಯೇ ಉಳಿಸಿಕೊಂಡಿದ್ದ. ಹೀಗಾಗಿ ಕಾನೂನು ಬದ್ಧವಾಗಿ ಈತ ಪುರುಷ. ಆದರೆ ಕೃತಕ ಗರ್ಭಧಾರಣೆ ಮೂಲಕ ಮಗು ಹೆರುವ ಸಾಮರ್ಥ್ಯ ಹೊಂದಿದ್ದಾನೆ.

35ರ ಹರೆಯದ ಬಿಯಾಟಿ 5ವರ್ಷದ ಹಿಂದೆ 46ರ ಹರೆಯದ ನ್ಯಾನ್ಸಿ ಎಂಬ ಮಹಿಳೆಯನ್ನು ವಿವಾಹವಾಗಿದ್ದ. ಆದರೆ ಗರ್ಭ ಧರಿಸಲು ನ್ಯೂನತೆ ಇದೆ, ಹಾಗಾಗಿ ಕೃತಕ ಗರ್ಭಧಾರಣೆ ಮೂಲಕ ಬಿಯಾಟಿ ಎರಡನೇ ಮಗುವಿಗೆ ಜನ್ಮ ನೀಡಿದ್ದಾ(ಳೆ)ನೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶ್ರೀಲಂಕಾದಲ್ಲಿ ಕೆನಡಾ ಸಂಸದನ ಬಂಧನ
ಏರ್‌ಫ್ರಾನ್ಸ್ ದುರಂತ: ಬ್ಲ್ಯಾಕ್ ಬಾಕ್ಸ್‌ಗಾಗಿ ಶೋಧ
ಕೆನಡಾದಲ್ಲೂ ಭಾರತೀಯರ ಮೇಲೆ ಜನಾಂಗೀಯ ಹಲ್ಲೆ
ಹೌದು;ಮಸೀದಿಗಳಲ್ಲಿ ಬೇಹುಗಾರಿಕೆ ನಡೆಸ್ತೇವೆ: ಎಫ್‌ಬಿಐ
ಪಾಕ್ : ಆತ್ಮಾಹುತಿ ದಾಳಿಗೆ 16 ಬಲಿ
ಭಾರತ-ಕ್ಯೂಬಾ ತಂತ್ರಜ್ಞಾನ ಒಪ್ಪಂದಕ್ಕೆ ಸಹಿ