ಸುದ್ದಿ ಜಗತ್ತು
ವ್ಯವಹಾರ
ರಾಜ್ಯ ಸುದ್ದಿ
ರಾಷ್ಟ್ರೀಯ
ಮನರಂಜನೆ
ಸ್ಯಾಂಡಲ್ ವುಡ್
ಬಾಲಿವುಡ್‌
ಇನ್ನಷ್ಟು ಹಾಸ್ಯ...
ಕ್ರೀಡಾ ಜಗತ್ತು
ಕ್ರಿಕೆಟ್ ಟಿಕರ್
ಕ್ರೀಡಾಸುದ್ದಿ
ಕ್ರಿಕೆಟ್‌
ಜ್ಯೋತಿಷ್ಯ
ಜ್ಯೋತಿಷ್ಯಶಾಸ್ತ್ರ
ವಾಸ್ತು
ನಿಮ್ಮ ಜಾತಕ
ಫೋಟೋ ಗ್ಯಾಲರಿ
ಹಾಟ್‌ಶಾಟ್
ಸಿನಿಮಾ
ಬಾಲಿವುಡ್
ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್ನು ಟಾಪ್ಅಪ್ ಮೇಲೆ ಫುಲ್ ಟಾಕ್‌ಟೈಂ
ಟಾಪ್ಅಪ್ ಕಾರ್ಡ್‌ಗಳ ಮೇಲೆ ವಿಧಿಸುವ ಪ್ರೊಸೆಸಿಂಗ್ ವೆಚ್ಚವನ್ನು ಮನ್ನಾ ಮಾಡುವಂತೆ ಟೆಲಿಕಾಂ ನಿಯಂತ್ರಣ ಸಂಸ್ಥೆ ಟ್ರಾಯ್ ಟೆಲಿಕಾಂ ನಿರ್ವಾಹಕರಿಗೆ ಸೂಚನೆ ನೀಡಿದ್ದು, ಇದರಿಂದಾಗಿ, ಸೆಪ್ಟೆಂಬರ್ 15ರ ನಂತರ ಟಾಪ್ಅಪ್ ವೇಳೆ ಪ್ರೀಪೈಡ್ ಗ್ರಾಹಕರು ಪೂರ್ತಿ ಟಾಕ್‌ಟೈಂ ಪಡೆಯಲಿದ್ದಾರೆ.

ಪ್ರೀಪೈಡ್ ಗ್ರಾಹಕರು ಕೇವಲ ಆಡಳಿತ ವೆಚ್ಚವನ್ನಷ್ಟೇ ನೀಡಬೇಕಾಗಿದ್ದು, ಇದು ಎರಡು ರೂಪಾಯಿಗಿಂತ ಹೆಚ್ಚಾಗಿರುವುದಿಲ್ಲ ಎಂದು ಟ್ರಾಯ್ ಹೇಳಿದೆ.

ಪ್ರತ್ಯೇಕ ಟಾಕ್‌ಟೈಮ್ ಕೊಡಬೇಕಾಗಿರುವ ಈಗಾಗಲೇ ವ್ಯಾಲಿಡಿಟಿಯನ್ನು ಹೊಂದಿರುವ ಗ್ರಾಹಕರಿಗೂ ಟಾಪ್ಅಪ್ ವೇಳೆ ಟೆಲಿಕಾಂ ಸಂಸ್ಥೆಗಳು ನಿರ್ದಿಷ್ಟ ಮೊತ್ತವನ್ನು ಕಡಿತಗೊಳಿಸುತ್ತಿರುವುದು ಟ್ರಾಯ್ ಗಮನಕ್ಕೆ ಬಂದಿತ್ತು.

ಸ್ಥಿರ ಶುಲ್ಕವನ್ನು ಪಾವತಿ ಮಾಡುವ ಮೂಲಕ ಗ್ರಾಹಕರಿಗೆ ಈಗಾಗಲೇ ವ್ಯಾಲಿಡಿಟಿ ನೀಡಲಾಗಿದ್ದು, ಪ್ರತ್ಯೇಕ ಟಾಪ್ಅಪ್ ಮೂಲಕ ರೀಚಾರ್ಜ್ ಮಾಡುವ ಗ್ರಾಹಕರ ಮೇಲೆ ಪ್ರೊಸೆಸಿಂಗ್ ವೆಚ್ಚ ಹೇರುವುದು ನ್ಯಾಯಸಮ್ಮತವಲ್ಲ ಎಂದು ಟ್ರಾಯ್ ತಿಳಿಸಿದೆ.

ಟೆಲಿಕಾಂ ಸೇವೆಯನ್ನು ಗ್ರಾಹಕ ಸ್ನೇಹಿ ಮತ್ತು ಪಾರದರ್ಶಕವಾಗಿಡಲು, ತನ್ನ ಇತ್ತೀಚಿನ ನೀತಿಯಲ್ಲಿ ಇದು ಟ್ರಾಯ್ ತೆಗೆದುಕೊಂಡ ಮೊದಲ ಕ್ರಮವಾಗಿದೆ.

ಇದರೊಂದಿಗೆ, ಸ್ಥಳೀಯ ಭಾಷೆಗಳು ಪ್ರಧಾನವಾಗಿರುವ ಉಪನಗರಗ ಮತ್ತು ಗ್ರಾಮಾಂತರ ಪ್ರದೇಶಗಳತ್ತ ಟೆಲಿಕಾಂ ಸಂಸ್ಥೆಗಳು ದೃಷ್ಟಿ ಹಾಯಿಸಿರುವುದರಿಂದ ಟಾರಿಫ್ ಸಂಬಂಧಿ ಮಾಹಿತಿಗಳು ಪ್ರಾದೇಶಿಕ ಭಾಷೆಯಲ್ಲಿ ದೊರಕುವಂತೆ ಮಾಡಲು ಟೆಲಿಕಾಂ ಸಂಸ್ಥೆಗಳಿಗೆ ಟ್ರಾಯ್ ಕರೆ ನೀಡಿದೆ.
ಮತ್ತಷ್ಟು
ಆರ್‌ಬಿಐ ನೂತನ ರಾಜ್ಯಪಾಲರಾಗಿ ಡಿ.ಸುಬ್ಬರಾವ್
ತೈಲ ಬೆಲೆ ಇಳಿಕೆಯಿಲ್ಲ: ದೇವುರಾ
ಸಿಂಗೂರ್ ಬಿಕ್ಕಟ್ಟಿನಿಂದ ಅಸ್ಥಿರತೆ: ನಾರಾಯಣ ಮೂರ್ತಿ
ಮುಂದುವರಿದ ಧರಣಿ: ನ್ಯಾನೋ ಕಾರ್ಯ ಸ್ಥಗಿತ
ಕೆನರಾ ಬ್ಯಾಂಕ್‌ನಿಂದ 100 ಹೊಸ ಶಾಖೆಗಳು
ತೈಲ ಸಂಸ್ಥೆಗಳಿಂದ ಜೆಟ್ ಇಂಧನ ಬೆಲೆ ಕಡಿತ
ಮುಖಪುಟ  | ನಮ್ಮ ಕುರಿತು  | ಸಲಹೆಗಳು  | ಜಾಹೀರಾತು ನೀಡಲು  | ಮಿತ್ರನಿಗೆ ಕಳಿಸು  | ಹಕ್ಕು ನಿರಾಕರಣೆ
Copyright © 2009 Webdunia.com