ಇದು ವೆಬ್‌ದುನಿಯಾ ಓದುಗರಿಗೆ ಹೊಸದೊಂದು ಹೆಮ್ಮೆಯ ಕೊಡುಗೆ.ಬಾಲ್ಯದಲ್ಲಿ ಕಾಮಿಕ್ಸ್ ಓದುತ್ತೋದುತ್ತಲೇ ಪುರಾಣ ಪುಣ್ಯ ಕಥಾನಕಗಳ ಬಗ್ಗೆ ಎಷ್ಟು ಮಂದಿ ಅರಿವು ಮೂಡಿಸಿಕೊಂಡಿಲ್ಲ? ಈ ಡಿಜಿಟಲ್ ಯುಗದಲ್ಲಿ ಮಕ್ಕಳಿಗೆ ಕಾಮಿಕ್ಸ್ ಎಂಬ ಚಿತ್ರಕಥಾಲೋಕವು ನೀಡುತ್ತಿದ್ದ ಆ ರೋಮಾಂಚಕಾರಿ ಓದಿನ ಅನುಭವ ದುರ್ಲಭವಾಗುತ್ತಿದೆ.ಕೌರವರು, ಪಾಂಡವರು, ಹನುಮಂತ, ದ್ರೋಣ, ಅಭಿಮನ್ಯು ಮುಂತಾದ ಪೌರಾಣಿಕ ಪುರುಷರು ಇಂದಿಗೂ ಜನ ಮಾನಸದಲ್ಲಿ ಅಚ್ಚಳಿಯದ ಪಾತ್ರಗಳು. ಈ ಪಾತ್ರಗಳ ಸಚಿತ್ರ ಕಥೆ ಓದುವುದೆಂದರೆ ರೋಮಾಂಚನ. ಆ ಕ್ಷಣಗಳತ್ತ ಒಂದೊಮ್ಮೆ ಹಿಂತಿರುಗಿ ನೋಡಿಯಂತೆ. ಮಹಾಭಾರತ, ರಾಮಾಯಣ, ಭಾಗವತ ಇತ್ಯಾದಿ ಪುರಾಣ ಘಟನೆಗಳು ಕಣ್ಮುಂದೆ ಸುಳಿದಂತೆ ಭಾಸವಾಗುವುದಿಲ್ಲವೇ?ಇಂದಿನವರಿಗೂ ಈ ಚಿತ್ರ ಕಥೆಗಳ ಸವಿ, ಅವುಗಳು ನೀಡುವ ರೋಮಾಂಚನ, ಅವುಗಳು ಸಾರುವ "ಕೆಡುಕಿನ ಮೇಲೆ ಒಳಿತಿನ ವಿಜಯ"ದ ಸಂದೇಶ ಇತ್ಯಾದಿಗಳು ಮನದಟ್ಟಾಗುವಂತಾಗಲು ಮತ್ತು ಮಾಹಿತಿಯೊಂದಿಗೆ ಮನರಂಜನೆಯೂ ದೊರೆಯುವಂತಾಗಲು ವೆಬ್‌ದುನಿಯಾ ಇದೋ ಹೊಸದೊಂದು ವೇದಿಕೆ ಸಿದ್ಧಪಡಿಸಿದೆ. ಅಮರ ಚಿತ್ರ ಕಥಾ ಮಾಲಿಕೆ ಎಲ್ಲರಿಗೂ ಚಿರಪರಿಚಿತ. ಅದೇ ಅಮರ ಚಿತ್ರ ಕಥಾ ಡಾಟ್ ಕಾಂ ಸಹಯೋಗದೊಂದಿಗೆ ವೆಬ್‌ದುನಿಯಾ ಈ ಅಮರ ಚಿತ್ರ ಕಥಾ ಮಾಲಿಕೆಯನ್ನು ನಿಮ್ಮ ಮುಂದಿಡಲಿದೆ. ಈ ವಾರದಿಂದಲೇ ಪ್ರಾರಂಭವಾಗಿದೆ." ವೀರ ಪಾಂಡವರು" ಎಂಬ ಕಥಾ ಮಾಲಿಕೆಯೊಂದಿಗೆ ಇದು ಪ್ರಾರಂಭವಾಗಿದೆ. ಇನ್ನೇಕೆ ತಡ, ಪ್ರತಿ ವಾರ ಹೊಚ್ಚ ಹೊಸದೇನು ಎಂದು ತಿಳಿದುಕೊಳ್ಳಲು ವೆಬ್‌ದುನಿಯಾ ನೋಡುತ್ತಿರಿ.ಇಲ್ಲಿ ಕ್ಲಿಕ್ ಮಾಡಿ ನೋಡಿದರಾಯಿತು. ಶುಭವಾಗಲಿ- ಸಂಪಾದಕರು |