ಮಹಾ ಸಮರವೇ ಆಗಿ, 15ನೇ ಲೋಕಸಭೆಗೆ ನಡೆದ ಚುನಾವಣಾ ಫಲಿತಾಂಶ ಶನಿವಾರ ಘೋಷಣೆಯಾಗುತ್ತಿದ್ದು, ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ.ಎಲ್ಲರ ಕುತೂಹಲ ಕೆರಳಿಸಿರುವ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ತಲ್ಲಣಗಳು, ಹಿಂಬಾಗಿಲ ಮಾತುಕತೆಗಳು, ಗುಸುಗುಸು-ಪಿಸುಮಾತುಗಳನ್ನೊಳಗೊಂಡ ಸಮಗ್ರ ವಿವರಗಳ ಹೂರಣ ನಿಮ್ಮ ಅಚ್ಚುಮೆಚ್ಚಿನ ವೆಬ್‌ದುನಿಯಾ ತಾಣದಲ್ಲಿ ಮೂಡಿಬರಲಿದೆ.ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗುತ್ತಿರುವಂತೆಯೇ ತಾಣದಲ್ಲಿ ಮಾಹಿತಿಗಳು ಹರಿದುಬರಲಿದ್ದು, ಸಮಗ್ರ ಫಲಿತಾಂಶದ ವಿವರಗಳು ಲಭ್ಯವಾಗುತ್ತಿರುತ್ತವೆ.ಚುನಾವಣಾ ಫಲಿತಾಂಶ: ನಕಾಶೆಸಹಿತ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.ಫಲಿತಾಂಶದ ನಕಾಶೆ ಇಲ್ಲದ ವಿವರಗಳನ್ನು ಇಲ್ಲಿ ನೋಡಿ. ಇದಕ್ಕಾಗಿ ವೆಬ್‌ದುನಿಯಾ ಓದುಗರಿಗಾಗಿ ವಿಶೇಷವಾದ ನಕಾಶೆಯೊಂದನ್ನು ಸಿದ್ಧಪಡಿಸಲಾಗಿದ್ದು, ಅದನ್ನು ನೀವು ಇಲ್ಲಿ ನೋಡಬಹುದು.
ಇಲ್ಲಿ ಹಿಂದಿನ ಚುನಾವಣಾ ಫಲಿತಾಂಶಗಳ ವಿವರವೂ ಇದೆ. ಹೋಲಿಸಿ ನೋಡಿಕೊಳ್ಳಲು ಅನುಕೂಲವಾಗುತ್ತದೆ. ದೇಶದ ನಕಾಶೆಯಲ್ಲಿ ಯಾವುದೇ ರಾಜ್ಯದ ವಿವರ ತಿಳಿದುಕೊಳ್ಳಬೇಕಿದ್ದರೆ, ಆ ರಾಜ್ಯವನ್ನು ಕ್ಲಿಕ್ ಮಾಡಿ, ನಿರ್ದಿಷ್ಟ ಕ್ಷೇತ್ರದ ಮೇಲೆ ಮೌಸ್ ಪಾಯಿಂಟರ್ ಇರಿಸಿದರಾಯಿತು. ಆ ಕ್ಷೇತ್ರದಲ್ಲಿ ಯಾರು ಮುನ್ನಡೆಯಲ್ಲಿದ್ದಾರೆ, ಯಾರು ಹಿನ್ನಡೆ ಅನುಭವಿಸುತ್ತಿದ್ದಾರೆ, ಯಾರು ಗೆದ್ದಿದ್ದಾರೆ, ಸೋತವರು ಯಾರು ಎಂಬಿತ್ಯಾದಿಯಾಗಿ ಆ ಕ್ಷಣದ ಸ್ಥಿತಿಗತಿ ಲಭ್ಯವಾಗುತ್ತವೆ.ಈ ಚುನಾವಣಾ ನಕಾಶೆ, ಲೋಡ್ ಆಗಲು ಆರಂಭದಲ್ಲಿ ಮಾತ್ರವೇ ಸ್ವಲ್ಪ ಹೆಚ್ಚು ಸೆಕೆಂಡ್ ಸಮಯ ತೆಗೆದುಕೊಳ್ಳುತ್ತದೆ, ಬಳಿಕ ಅದು ಸ್ವಯಂಚಾಲಿತವಾಗಿ ಪರಿಷ್ಕರಣೆಗೊಳ್ಳುತ್ತಿರುತ್ತದೆ.ಮ್ಯಾಪಿನ ಸಹವಾಸ ಬೇಡ ಎಂದುಕೊಳ್ಳುವವರು, ಅಂಕಿ-ಅಂಶಗಳು, ಸೋಲು ಗೆಲುವನ್ನು ಓದಲು ಮಾತ್ರ ಬಯಸುವವರು ಇಲ್ಲಿ ಕ್ಲಿಕ್ ಮಾಡಿದರಾಯಿತು. ಆಯಾ ರಾಜ್ಯಗಳ ಕ್ಷೇತ್ರವಾರು ಪಟ್ಟಿ ಇಲ್ಲಿ ಲಭ್ಯ.ಇಡೀ ದೇಶದ ಮೂಲೆ ಮೂಲೆಯ ಚುನಾವಣಾ ಫಲಿತಾಂಶಗಳು ನಿಮ್ಮ ವೆಬ್‌ದುನಿಯಾದಲ್ಲಿ ಲಭ್ಯವಾಗಲಿದೆ. ನಿರೀಕ್ಷಿಸಿ.- ಸಂಪಾದಕರು |