ಈ ತಂದೆಯರ ದಿನದಂದು ನಿಮ್ಮ ತಂದೆ ನಿಮಗೆ ಆಯಾಸಗೊಂಡಂತೆ, ಬಳಲಿದಂತೆ ಕಂಡುಬಂದರೆ, ಬಹುಶಃ ಅದಕ್ಕೆ ಕಾರಣ ಉದ್ಯೋಗ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಬಹಳಷ್ಟು ಪುರುಷ ಉದ್ಯೋಗಿಗಳು ನಿಗದಿಗಿಂತ ಹೆಚ್ಚು ಕಾಲ ಅಂದರೆ ವಾರಕ್ಕೆ ಸುಮಾರು 40 ಗಂಟೆಗಳಷ್ಟು ಹೆಚ್ಚು ದುಡಿಯಬೇಕಾಗಿ ಪರಿಸ್ಥಿತಿ ಸೃಷ್ಟಿಯಾಗಿದ್ದು, ಇದು ಅವರ ಮೇಲೆ ಹೆಚ್ಚು ಒತ್ತಡ ಹೇರಿದೆ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ. | ಜೂನ್ ತಿಂಗಳ ಮೂರನೇ ಭಾನುವಾರ ತಂದೆಯರ ದಿನ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂದಿನ ತಂದೆಯರ ಮೇಲಿರುವ ಒತ್ತಡದ ಮೇಲೊಂದು ಬೆಳಕು. |
| |
ಇತ್ತೀಚೆಗಿನ ಸಂಶೋಧನೆಗಳ ಪ್ರಕಾರ, ಮಹಿಳಾ ಉದ್ಯೋಗಿಗಳಿಗೂ ಪುರುಷರಂತೆ ಇಂತಹುದೇ ಒತ್ತಡವಿದ್ದರೂ, ಮನೆಯ ಒಳಗಿನ ಕೆಲಸಗಳು ಹಾಗೂ ಕಾರ್ಯಭಾರಗಳೂ ಕೂಡಾ ಮಹಿಳೆಯ ಒತ್ತಡಕ್ಕೆ ಪೂರಕ ಉದಾಹರಣೆಗಳಾಗುತ್ತವೆ.ಜೆಂಡರ್ ಅಂಡ್ ಸೊಸೈಟಿ ಮ್ಯಾಗಜಿನ್‌ನಲ್ಲಿ ಪ್ರಕಟವಾದ ದಾಖಲೆಗಳ ಪ್ರಕಾರ, ಉದ್ಯೋಗ ವಲಯದಲ್ಲಿ ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ ಅಘೋಷಿತವಾಗಿಯೇ ಉದ್ಯೋಗಿಗಳು ನಿಗದಿತ ಕಾಲಕ್ಕಿಂತ ಹೆಚ್ಚು ದುಡಿಯಬೇಕಾಗಿದೆ. ಆದರೆ, ಹೆಚ್ಚು ಕಾಲ ದುಡಿಯುವುದರಿಂದ ಉತ್ಪಾದನೆಯ ಪ್ರಮಾಣದಲ್ಲೇನೂ ಹೆಚ್ಚಳವಾಗುವುದಿಲ್ಲ. ಇಂತಹ ಪರಿಸ್ಥಿತಿಯೇ ಮಹಿಳೆಯರು ಹಾಗೂ ಪುರುಷರಿಗೆ ತೊಂದರೆಯಾಗುತ್ತದೆ. ಕುಟುಂಬ ಹಾಗೂ ಕೆರಿಯರ್ ಎರಡನ್ನೂ ಜತೆಯಾಗಿ ತೆಗೆದುಕೊಂಡು ಹೋಗುವ ಮಹಿಳೆ ಹಾಗೂ ಪುರುಷರಿಗೆ ಇದರಿಂದ ಸಾಕಷ್ಟು ತೊಂದರೆಯಾಗುತ್ತದೆ ಎನ್ನುತ್ತಾರೆ ನೆದರ್‌ಲ್ಯಾಂಡ್ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ವರ್ಕ್ ಸಂಸ್ಥೆಯ ಪ್ಯಾಟ್ರಿಕಾ ವ್ಯಾನ್ ಎಚ್ಲೆಟ್.1,114 ಡಚ್ ಮಹಿಳೆಯರು ಹಾಗೂ ಪುರುಷ ಉದ್ಯೋಗಿಗಳನ್ನು ಆಧರಿಸಿದ ಈ ಸಂಶೋಧನೆ ಕೇವಲ ಡಚ್ಚರಿಗೆ ಮಾತ್ರ ಅನ್ವಯಿಸುವುದಿಲ್ಲ. ಪ್ರಪಂಚದ ಎಲ್ಲ ಉದ್ಯೋಗಿಗಳಿಗೂ ಅನ್ವಯಿಸುತ್ತದೆ. ಯಾಕೆಂದರೆ, ಎಲ್ಲೆಡೆ ಈಗ ಸ್ಪರ್ಧಾತ್ಮಕ ಯುಗವೇ ಇರುವುದರಿಂದ ಇಂತಹ ಪರಿಸ್ಥಿತಿ ಪ್ರಪಂಚೆಲ್ಲೆಡೆ ಇದೆ ಎಂದು ವ್ಯಾನ್ ಅಭಿಪ್ರಾಯಪಟ್ಟಿದ್ದಾರೆ.ಈ ಸಮೀಕ್ಷೆಯ ಪ್ರಕಾರ ಶೇ.69ರಷ್ಟು ಪುರುಷರು ನಿಗದಿಗಿಂತ ಹೆಚ್ಚು ಸಮಯ (ಓವರ್‌ಟೈಮ್) ಕೆಲಸ ಮಾಡಿದರೆ, ಮಹಿಳೆಯರು ಶೇ.42ರಷ್ಟು ಮಂದಿ ಇದೇ ಪರಿಸ್ಥಿತಿಯಲ್ಲಿದ್ದಾರೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಮೂರನೇ ಒಂದು ಪಾಲು ಕಡಿಮೆ ಮಂದಿ ಇಂತಹ ಒತ್ತಡದ್ಲಲಿದ್ದಾರೆ.ಸಂಶೋಧಕರ ಪ್ರಕಾರ, ಮಹಿಳೆಯರು ತಮ್ಮ ಮನೆಯಲ್ಲಿಯೂ ಮತ್ತೆ ಕೆಲಸ ಮಾಡುವ ಪರಿಸ್ಥಿತಿ ಇದೆ. ಇದ್ಕಕಾಗಿ ಹೆಚ್ಚಿನ ಮಹಿಳೆಯರು ನಿಗದಿತ ಕಾಲಕ್ಕಿಂತ ಹೆಚ್ಚು ದುಡಿಯುತ್ತಿಲ್ಲ. ಮಹಿಳೆಯರೂ ಪುರುಷರದೇ ಪರಿಸ್ಥಿತಿಯಲ್ಲಿದ್ದರೂ, ಮನೆಯಲ್ಲಿರುವ ಕುಟುಂಬ ನಿರ್ವಹಣೆ ಕೆಲಸವೂ ಅವರನ್ನು ಒತ್ತಡಕ್ಕೆ ನೂಕುತ್ತದೆ ಎಂದು ಅಭಿಪ್ರಾಯಪಡುತ್ತಾರೆ. |