|
ಇಮ್ರಾನ್ ವಿರುದ್ಧ ಗಂಭೀರ ಭಯೋತ್ಪಾದನೆ ಆರೋಪ
|
|
|
ಲಾಹೋರ್, ಗುರುವಾರ, 15 ನವೆಂಬರ್ 2007( 11:01 IST )
|
|
|
|
|
|
|
|
ತುರ್ತು ಪರಿಸ್ಥಿತಿ ವಿರುದ್ಧ ಪ್ರತಿಭಟನೆ ನಡೆಸುವ ಮತ್ತು ವಿರೋಧೀ ಹೇಳಿಕೆ ನೀಡುತ್ತಿರುವ ಪ್ರತಿಪಕ್ಷಗಳ ವಿರುದ್ಧ ತನ್ನ ಕಾರ್ಯಾಚರಣೆ ಮುಂದುವರಿಸಿರುವ ಪಾಕಿಸ್ತಾನದ ಮಿಲಿಟರಿ ಆಡಳಿತಗಾರ ಜನರಲ್ ಪರ್ವೇಜ್ ಮುಷರಫ್ ಹಿಡಿತದ ಸರಕಾರವು, ಕ್ರಿಕೆಟ್ ದಂತಕಥೆ ಮತ್ತು ರಾಜಕಾರಣಿ ಇಮ್ರಾನ್ ಖಾನ್ ಅವರ ವಿರುದ್ಧ ಅತ್ಯಂತ ಗಂಭೀರವಾದ ಭಯೋತ್ಪಾದನೆ-ವಿರೋಧಿ ಕಾಯಿದೆ ಪ್ರಯೋಗಿಸಿದೆ.
ಈ ನಡುವೆ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ಅವರ ಗೃಹಬಂಧನವು ಮೂರನೇ ದಿನಕ್ಕೆ ಕಾಲಿಟ್ಟಿದೆ. ಇಮ್ರಾನ್ ವಿರುದ್ಧ ಪ್ರಯೋಗಿಸಲಾಗಿರುವ ಕಾಯಿದೆಯು ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಗುರಿಯಾಗಬಹುದಾದ ಕಠಿಣತಮ ಕಾಯಿದೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನವೆಂಬರ್ 3ರಂದು ತುರ್ತು ಪರಿಸ್ಥಿತಿ ಹೇರಿದಂದಿನಿಂದ ಬಂಧನ ಭೀತಿಯಿಂದ ಭೂಗತರಾಗಿದ್ದ ಇಮ್ರಾನ್, ಲಾಹೋರಿನ ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ನಡೆಸಲಾದ ವಿದ್ಯಾರ್ಥಿಗಳ ಪ್ರತಿಭಟನಾ ರಾಲಿಯಲ್ಲಿ ಭಾಗವಹಿಸಲು ಆಗಮಿಸಿದ್ದರು. ಅಲ್ಲಿ ಅವರನ್ನು ತೀವ್ರಗಾಮಿ ವಿದ್ಯಾರ್ಥಿ ಮುಖಂಡರು ಪತ್ತೆ ಹಚ್ಚಿ ಪೊಲೀಸರ ಕೈಗೊಪ್ಪಿಸಿದರು. ಆ ಬಳಿಕ ಅವರನ್ನು ನಿಗೂಢ ತಾಣಕ್ಕೆ ಕರೆದೊಯ್ಯಲಾಯಿತು ಎಂದು ಇಲ್ಲಿನ ಟಿವಿ ಚಾನೆಲ್‌ಗಳು ವರದಿ ಮಾಡಿವೆ.
ತೆಹ್ರೀಕ್ ಎ ಇನ್ಸಾಫ್ ಪಕ್ಷದ ಮುಖಂಡ ಇಮ್ರಾನ್ ಖಾನ್ ಅವರನ್ನು ಪೊಲೀಸರಿಗೊಪ್ಪಿಸುವ ಮುನ್ನ ತೀವ್ರಗಾಮಿ ಜಮಾತೆ ಇಸ್ಲಾಮಿಯ ವಿದ್ಯಾರ್ಥಿ ಘಟಕವಾದ ಇಸ್ಲಾಮಿ ಜಮಾತೆ ತಲಾಬಾ ಸದಸ್ಯ ವಿದ್ಯಾರ್ಥಿಗಳು ಸುಮಾರು 90 ನಿಮಿಷ ಕಾಲ ಕೊಠಡಿಯಲ್ಲಿ ಕೂಡಿ ಹಾಕಿದ್ದರು.
|
|
|
|
|
|
|
|