|
ಬಾಂಗ್ಲಾ: ಚಂಡಮಾರುತಕ್ಕೆ 900 ಬಲಿ
|
|
|
ಢಾಕಾ, ಶನಿವಾರ, 17 ನವೆಂಬರ್ 2007( 16:05 IST )
|
|
|
|
|
|
|
|
ವೇಗವಾದ ಗಾಳಿ ಮತ್ತು ಎತ್ತರದ ಅಲೆಗಳೊಂದಿಗೆ ಬಡಬಾಂಗ್ಲಾದೇಶವನ್ನು ಅಪ್ಪಳಿಸಿದ ಪ್ರಬಲ ಚಂಡಮಾರುತವು ಕನಿಷ್ಠ 900 ಜನರನ್ನು ಬಲಿತೆಗೆದುಕೊಂಡಿದ್ದು, ಮಿಲಿಟರಿ ನೌಕೆಗಳು ಮತ್ತು ಹೆಲಿಕಾಪ್ಟರ್‌ಗಳು ಶನಿವಾರ ಬದುಕುಳಿದ ಸಾವಿರಾರು ಸಂತ್ರಸ್ತರನ್ನು ರಕ್ಷಿಸಲು ಅವಿರತ ಶ್ರಮಿಸುತ್ತಿವೆ.
ಗಂಟೆಗೆ 250 ಕಿಮೀ ವೇಗದ ಗಾಳಿ ಮತ್ತು 5 ಮೀಟರ್ ಎತ್ತರದ ಬೃಹತ್ ಅಲೆಗಳೊಂದಿಗೆ ಗುರುವಾರ ರಾತ್ರಿ ಬಾಂಗ್ಲಾದೇಶದ ದಕ್ಷಿಣ ತೀರವನ್ನು ಸಿಡರ್ ಚಂಡಮಾರುತ ಅಪ್ಪಳಿಸಿತು. 1991ರಲ್ಲಿ ಸಂಭವಿಸಿದ ಚಂಡಮಾರುತಕ್ಕೆ ಸುಮಾರು 143,000 ಜನರು ಬಲಿಯಾಗಿದ್ದರು.
ಚಂಡಮಾರುತದ ಬಳಿಕ ಕಾಣೆಯಾದ ನೂರಾರು ಜನರನ್ನು ಪತ್ತೆಹಚ್ಚಲು ನೌಕಾಪಡೆಗಳು ಶೋಧ ನಡೆಸಿದವು ಮತ್ತು ಸುಗಮ ಸಂಚಾರದ ಮರುಸ್ಥಾಪನೆಗೆ ನದಿ ಕಾಲುವೆಗಳಲ್ಲಿ ಮುಳುಗಿರುವ ದೋಣಿಗಳನ್ನು ತೆರವು ಮಾಡಿದವು ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೆಲಿಕಾಪ್ಟರ್‌ಗಳಿಂದ ಬದುಕುಳಿದ ಸಂತ್ರಸ್ತರಿಗಾಗಿ ಆಹಾರ, ಕುಡಿಯುವ ನೀರು ಮತ್ತು ಔಷಧಿಗಳನ್ನು ಉದುರಿಸಲಾಯಿತು. ಅಧಿಕೃತವಾಗಿ ಸತ್ತವರ ಸಂಖ್ಯೆ 900 ದಾಟಿದ್ದು, ಕೆಲವು ಸುದ್ದಿಪತ್ರಿಕೆಗಳು 1,100ರಿಂದ 2000 ಎಂದು ವರದಿಗಾರರ ಅಂಕಿಅಂಶವನ್ನು ಉಲ್ಲೇಖಿಸಿ ಹೇಳಿವೆ.
|
|
|
|
|
|
|
|