|
ಹನೀಫ್ ಪ್ರಕರಣ:ಆಸ್ಟ್ರೇಲಿಯಾದಲ್ಲಿ ಇಂದು ಪ್ರತಿಭಟನೆ
|
|
|
ಸಿಡ್ನಿ, ಶನಿವಾರ, 17 ನವೆಂಬರ್ 2007( 19:11 IST )
|
|
|
|
|
|
|
|
ಬ್ರಿಟನ್ ಕಾರು ಬಾಂಬ್ ವಿಫಲ ಸಂಚು ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಭಾರತೀಯ ಮೂಲ ವೈದ್ಯ ಮೊಹಮ್ಮದ್ ಹನೀಫ್ ಅವರನ್ನು ನ್ಯಾಯಾಂಗದಿಂದ ರಕ್ಷಿಸಿದ ವಕೀಲರು ಶನಿವಾರ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಹೋವಾರ್ಡ್ ಸರಕಾರ ವಿರುದ್ಧದ ಪ್ರತಿಭಟನೆಯ ನೇತೃತ್ವ ವಹಿಸಿಕೊಳ್ಳಲಿದ್ದಾರೆ.
ಬ್ರಿಸ್ಬೇನ್‌ನಲ್ಲಿ ಹಮ್ಮಿಕೊಳ್ಳಲಾಗಿರುವ ಈ ಸಮುದಾಯದ ಸಂಘಟನೆಯಲ್ಲಿ ಗ್ರೀನ್ ಗ್ರೂಪ್ಸ್, ನಿರಾಶ್ರಿತ ವಕೀಲರು, ದೇಶೀಯ ಜನತೆ ಹಾಗೂ ಶಾಂತಿ ಸಂಘಟನೆಗಳು ಇದರಲ್ಲಿ ಪಾಲ್ಗೊಳ್ಳುತ್ತಿವೆ.ನ್ಯಾಯಾಂಗ ವ್ಯವಸ್ಥೆಯಲ್ಲಿ ಹನೀಫ್ ಪ್ರಕರಣದ ಕಾರ್ಯಾನುಷ್ಠಾನದ ಕುರಿತು ವಕೀಲರಾದ ಪೀಟರ್ ರುಸ್ಸೊ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಸಮಾಜದ ವಿವಿಧ ವರ್ಗಗಳು ತಮ್ಮ ಧ್ವನಿ ಎತ್ತಲು ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಭಟನೆಯನ್ನು ಆಯೋಜಿಸಿರುವ ಮಾರ್ಕ್ ಗಿಲೆಸ್ಪಿ ಹೇಳಿದ್ದಾರೆ.
ಹೋವಾರ್ಡ್ ಸರಕಾರದೊಂದಿಗೆ ತಾವು ಸಂತಸವಾಗಿಲ್ಲ ಎಂದ ಅವರು, ಸಮಾಜದ ಒಂದು ಅಥವಾ ಇತರ ಸಮುದಾಯಗಳಿಗೆ ಮಾತ್ರ ಉದ್ದಾರ ಮಾಡುವ ಭರವಸೆ ನೀಡುವ ಮೂಲಕ ಮತ್ತೆ ಅಧಿಕಾರಕ್ಕೆ ಬರುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
|
|
|
|
|
|
|
|