ಸುದ್ದಿ ಜಗತ್ತು
ವ್ಯವಹಾರ
ರಾಜ್ಯ ಸುದ್ದಿ
ರಾಷ್ಟ್ರೀಯ
ಮನರಂಜನೆ
ಸ್ಯಾಂಡಲ್ ವುಡ್
ಬಾಲಿವುಡ್‌
ಇನ್ನಷ್ಟು ಹಾಸ್ಯ...
ಕ್ರೀಡಾ ಜಗತ್ತು
ಕ್ರಿಕೆಟ್ ಟಿಕರ್
ಕ್ರೀಡಾಸುದ್ದಿ
ಕ್ರಿಕೆಟ್‌
ಜ್ಯೋತಿಷ್ಯ
ಜ್ಯೋತಿಷ್ಯಶಾಸ್ತ್ರ
ವಾಸ್ತು
ನಿಮ್ಮ ಜಾತಕ
ಫೋಟೋ ಗ್ಯಾಲರಿ
ಹಾಟ್‌ಶಾಟ್
ಸಿನಿಮಾ
ಬಾಲಿವುಡ್
ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಷರೀಫ್, ಬೇನಜೀರ್ ಭುಟ್ಟೊ ನಾಮಪತ್ರ ಸಲ್ಲಿಕೆ
PTI
ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು ರಾಷ್ಟ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಅಧ್ಯಕ್ಷ ಮುಷರ್ರಫ್ ರಾಷ್ಟ್ರದಲ್ಲಿ ತುರ್ತುಪರಿಸ್ಥಿತಿಯನ್ನು ರದ್ದುಮಾಡದಿದ್ದರೆ ತಾವು ಚುನಾವಣೆಗೆ ನಿಲ್ಲದೇ ಅದನ್ನು ಬಹಿಷ್ಕರಿಸುವುದಾಗಿ ಹೇಳುವ ಮೂಲಕ ತುರ್ತುಪರಿಸ್ಥಿತಿ ವಿರುದ್ಧ ತಮ್ಮ ಅಸಮಾಧಾನವನ್ನು ಪ್ರಕಟಿಸಿದ್ದಾರೆ.

ಇತ್ತೀಚೆಗೆ ತಾನೆ ಪಾಕಿಸ್ತಾನಕ್ಕೆ ಹಿಂತಿರುಗಿದ ಇನ್ನೊಬ್ಬರು ಮಾಜಿ ಪ್ರಧಾನಮಂತ್ರಿಯಾದ ಬೇನಜೀರ್ ಭುಟ್ಟೊ ಕೂಡ ಮಹಿಳೆಯರಿಗೆ ಮೀಸಲಾದ ಸ್ಥಾನಗಳಲ್ಲಿ ಒಂದಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.

PTI
ಏತನ್ಮಧ್ಯೆ, ಮುಷರ್ರಫ್ ಜನರಲ್ ಹುದ್ದೆಯನ್ನು ತ್ಯಜಿಸಿ ಈ ವಾರ ಅಧ್ಯಕ್ಷರಾಗಿ ಇನ್ನೊಂದು ಅವಧಿಗೆ ಪ್ರಮಾಣವಚನ ಸ್ವೀಕರಿಸುವ ನಿರೀಕ್ಷೆಯಿದೆ. 1999ರಲ್ಲಿ ಮುಷರ್ರಫ್ ಅವರಿಂದ ಪದಚ್ಯುತರಾದ ಷರೀಫ್, ಭಾನುವಾರ 7 ವರ್ಷಗಳ ಬಹಿಷ್ಕಾರದ ಬಳಿಕ ಪಾಕಿಸ್ತಾನಕ್ಕೆ ಹಿಂತಿರುಗಿದ್ದಾರೆ. ನವಾಜ್ ಷರೀಫ್ ಅವರನ್ನು ಲಾಹೋರ್ ವಿಮಾನನಿಲ್ದಾಣದಲ್ಲಿ ಅವರ ಬೆಂಬಲಿಗರು ಹರ್ಷೋದ್ಗಾರದಿಂದ ಸ್ವಾಗತಿಸಿದರು.

ಅವರು ಎರಡು ಸ್ಥಾನಗಳಿಗೆ ಸ್ಪರ್ಧಿಸುವ ಸಲುವಾಗಿ ಕೊನೆಯ ದಿನವಾದ ಸೋಮವಾರ ನಾಮಪತ್ರ ಸಲ್ಲಿಸಿದರು.ಬೇನಜೀರ್ ಭುಟ್ಟೊ ಅವರು ಲರ್ಕಾನಾ ಕ್ಷೇತ್ರದಲ್ಲಿ ಎರಡು ಕಾಯಂ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದರು. ಚುನಾವಣೆ ಬಹಿಷ್ಕಾರದ ಸಾಧ್ಯತೆಯನ್ನು ಅವರು ಕೂಡ ಮುಕ್ತವಾಗಿರಿಸಿದ್ದಾರೆ. ನವಾಜ್ ಷರೀಫ್ ಅವರು ಬೇನಜೀರ್ ಭುಟ್ಟೊ ಚುನಾವಣೆ ಭವಿಷ್ಯವನ್ನು ಮಸಕು ಮಾಡಬಹುದೆಂದು ಮುಷರ್ರಫ್ ಆಶಿಸಿದ್ದಾರೆಂದು ನಂಬಲಾಗಿದೆ.

ಮುಂದಿನ ಕೆಲವು ದಿನಗಳಲ್ಲಿ ಮುಷರ್ರಫ್ ಸೇನಾ ಮುಖ್ಯಸ್ಥರ ಹುದ್ದೆಯನ್ನು ಅಧಿಕೃತವಾಗಿ ತ್ಯಜಿಸುತ್ತಾರೆಂದು ರಕ್ಷಣಾ ಸಚಿವಾಲಯವು ಶೀಘ್ರದಲ್ಲೇ ಪ್ರಕಟಿಸುವ ಲಕ್ಷಣಗಳು ಗೋಚರಿಸಿವೆಂದು ವರದಿಯಾಗಿದೆ. ಎರಡನೆ ಬಾರಿಗೆ ಅಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸುವ ಮುಂಚೆ ಅವರು ಜನರಲ್ ಹುದ್ದೆಯನ್ನು ತ್ಯಜಿಸಬೇಕೆಂದು ಅವರ ಮೇಲೆ ತೀವ್ರವಾದ ಅಂತಾರಾಷ್ಟ್ರೀಯ ಒತ್ತಡ ಹೇರಲಾಗಿತ್ತು.
ಮತ್ತಷ್ಟು
ಚೀನ: ಚಂದ್ರನ ಮೇಲ್ಮೈ ಚಿತ್ರ ಬಿಡುಗಡೆ
ಸಿಡರ್: ದಕ್ಷಿಣ ಸುಂದರಬನ್‌ನಲ್ಲಿ 3000 ಬಲಿ
ಶಾಂತಿ ಸಮಾವೇಶಕ್ಕೆ ಕಪಿಲ್ ಸಿಬಾಲ್
ಷರೀಫ್ ಗಡಿ ಪಾರು ಅಂತ್ಯ, ನಾಮಪತ್ರ ಸಲ್ಲಿಕೆ
ರಷ್ಯಾ: ಕ್ಯಾಸ್ಪ್‌ರೊವ್ ಬಂಧನ
ಮಲೇಷಿಯಾ ಸಚಿವ ಭಾರತಕ್ಕೆ ಭೇಟಿ
ಮುಖಪುಟ  | ನಮ್ಮ ಕುರಿತು  | ಸಲಹೆಗಳು  | ಜಾಹೀರಾತು ನೀಡಲು  | ಮಿತ್ರನಿಗೆ ಕಳಿಸು  | ಹಕ್ಕು ನಿರಾಕರಣೆ
Copyright © 2009 Webdunia.com