ಸುದ್ದಿ ಜಗತ್ತು
ವ್ಯವಹಾರ
ರಾಜ್ಯ ಸುದ್ದಿ
ರಾಷ್ಟ್ರೀಯ
ಮನರಂಜನೆ
ಸ್ಯಾಂಡಲ್ ವುಡ್
ಬಾಲಿವುಡ್‌
ಇನ್ನಷ್ಟು ಹಾಸ್ಯ...
ಕ್ರೀಡಾ ಜಗತ್ತು
ಕ್ರಿಕೆಟ್ ಟಿಕರ್
ಕ್ರೀಡಾಸುದ್ದಿ
ಕ್ರಿಕೆಟ್‌
ಜ್ಯೋತಿಷ್ಯ
ಜ್ಯೋತಿಷ್ಯಶಾಸ್ತ್ರ
ವಾಸ್ತು
ನಿಮ್ಮ ಜಾತಕ
ಫೋಟೋ ಗ್ಯಾಲರಿ
ಹಾಟ್‌ಶಾಟ್
ಸಿನಿಮಾ
ಬಾಲಿವುಡ್
ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರ ಸಂಚು ವಿಫಲಗೊಳಿಸಿದ ಸೌದಿ ಪೋಲೀಸರು
ಮುಸ್ಲಿಂ ಬಾಂಧವರ ಪವಿತ್ರ ಯಾತ್ರಾ ಸ್ಥಳವಾದ ಮೆಕ್ಕಾಗೆ ಆಗಮಿಸುವ ಮಾರ್ಗ ಮಧ್ಯೆ ಪವಿತ್ರ ಯಾತ್ರಾರ್ಥಿಗಳನ್ನು ಹತ್ಯೆಗೈಯಲು ಸಂಚು ರೂಪಿಸಿದ್ದ ಅಲ್-ಖೈದಾ ಉಗ್ರರ ಸಂಚನ್ನು ವಿಫಲಗೊಳಿಸಿ, ಅವರನ್ನು ಬಂಧಿಸುವಲ್ಲಿ ಸೌದಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಸೌದಿ ಮೂಲದ ಟಿವಿ ವಾಹಿನಿಯೊಂದು ವರದಿ ಮಾಡಿದೆ.

ದುಬೈ ಮೂಲದ ಟಿವಿ ವಾಹಿನಿಯು, ಸೌದಿ ಭದ್ರತಾ ಪಡೆಯ ಹೆಸರು ಹೇಳಲು ಇಚ್ಚಿಸದ ಯೋಧರ ಹೇಳಿಕೆಯನ್ನಾಧರಿಸಿ ಈ ವರದಿ ಬಿತ್ತರಿಸಿದ್ದು, ಶಂಕಿತ ಉಗ್ರರು ಭದ್ರತಾ ಪಡೆಯ ಹಾದಿ ತಪ್ಪಿಸುವ ನಿಟ್ಟಿನಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಅವರುಗಳನ್ನು ಬಂಧಿಸಲಾಗಿದೆ ಎಂದು ವರದಿ ಮಾಡಿದೆ.

ಸೌದಿಯ ವಿವಿಧ ನಗರಗಳಲ್ಲಿ ಶಂಕಿತ ಉಗ್ರರನ್ನು ಬಂಧಿಸುವಲ್ಲಿ ಸೌದಿ ಪೊಲೀಸರು ಯಸಸ್ವಿಯಾಗಿದ್ದಾರೆಂದು ತಿಳಿಸಿದ ವಾಹಿನಿ, ಒಟ್ಟು ಎಷ್ಟು ಜನರನ್ನು ಬಂಧಿಸಿದೆ ಎಂಬ ಅಂಕಿ ಅಂಶಗಳನ್ನು ಬಹಿರಂಗಗೊಳಿಸುವಲ್ಲಿ ಹಿಂದೇಟು ಹಾಕಿದೆ.

ವಿಶ್ವದ ಅತಿ ದೊಡ್ಡ ಧಾರ್ಮಿಕ ಸಾಮಾವೇಶ ನಡೆಯುವ ಮೆಕ್ಕಾ ಹಜ್ ಯಾತ್ರೆಯಲ್ಲಿ ಕಳೆದ ವರ್ಷ ನೂಕು ನುಗ್ಗಲು, ಹೋಟೆಲ್ ಕಟ್ಟಡ ಕುಸಿತ, ಬೆಂಕಿ ಅವಘಡ, ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಕಲಹ ಸೇರಿದಂತೆ ಹತ್ತು ಹಲವು ಸಮಸ್ಯೆಗಳಿಗೆ ಸಿಲುಕಿ ಸಾವಿರಾರು ಹಜ್ ಪ್ರಯಾಣಿಕರು ಬವಣೆ ಅನುಭವಿಸಿದ್ದರ ಹಿನ್ನಲೆಯಲ್ಲಿ, ಈ ಬಾರಿ ಸೌದಿ ಪೊಲೀಸ್ ಪಡೆ ಭಾರಿ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಉಗ್ರರು ಮೆಕ್ಕಾದಲ್ಲಾಗಲಿ ಅಥಾವಾ ಇನ್ನಾವುದೇ ಹಜ್ ನಗರದಲ್ಲಾಗಲಿ ಅವರು ದಾಳಿ ನಡೆಸುವ ಸಂಚು ಹೊಂದಿದ್ದಿಲ್ಲ. ಆದರೆ, ಮಾರ್ಗ ಮಧ್ಯೆ ಹಜ್ ಯಾತ್ರಿಕರ ಮೇಲೆ ದಾಳಿ ನಡೆಸಲು ಅವರು ಸ್ಪಷ್ಟ ಸಂಚು ರೂಪಿಸಿದ್ದರೆಂದು ಸೌದಿ ಪೊಲೀಸರು ತಿಳಿಸಿದ್ದಾಗಿ ವಾಹಿನಿ ವರದಿ ಮಾಡಿದೆ.
ಮತ್ತಷ್ಟು
ಭಾರತ-ಚೀನಾ ಜಂಟಿ ಸಮರಾಭ್ಯಾಸ ಪ್ರಾರಂಭ
ಶ್ರೀಘ್ರದಲ್ಲಿ ಚೀನಾಗೆ ಜಪಾನ್ ಪ್ರಧಾನಿ ಭೇಟಿ
ಪಾಕ್‌ಗೆ ಸಹಾಯಧನ ಕಡಿತ: ಅಮೆರಿಕ
ಭ್ರಷ್ಟಾಚಾರ ಸುಳಿಯಲ್ಲಿ ಜಾಕೋಬ್ ಜುಮಾ
ನ್ಯೂಜಿಲೆಂಡ್‌ನಲ್ಲಿ ಪ್ರಬಲ ಭೂಕಂಪ- ತುರ್ತು ಪರಿಸ್ಥಿತಿ ಹೇರಿಕೆ
ಪಾಕ್: ಆತ್ಮಹತ್ಯಾ ಬಾಂಬ್ ದಾಳಿಗೆ 54 ಬಲಿ
ಮುಖಪುಟ  | ನಮ್ಮ ಕುರಿತು  | ಸಲಹೆಗಳು  | ಜಾಹೀರಾತು ನೀಡಲು  | ಮಿತ್ರನಿಗೆ ಕಳಿಸು  | ಹಕ್ಕು ನಿರಾಕರಣೆ
Copyright © 2009 Webdunia.com