ಭಾರತ-ಅಮೆರಿಕ ಅಣು ಒಪ್ಪಂದಕ್ಕೆ ಬುಷ್ ಅಂಕಿತ |
| | ಗುರುವಾರ, 9 ಅಕ್ಟೋಬರ್ 2008( 08:38 IST ) | | | |
| | |
| ಭಾರತ ಅಮೆರಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಬುಧವಾರ ಸಹಿ ಹಾಕಿದ್ದು, ಈ ಮೂಲಕ ಭಾರತ ಅಮೆರಿಕ ನಡುವಿನ 123 ಒಪ್ಪಂದಕ್ಕೆ ಉಭಯ ದೇಶಗಳ ಅಧಿಕೃತ ಸಹಿ ಬಿದ್ದಂತಾಗಿದೆ.123 ಒಪ್ಪಂದದಲ್ಲಿರುವಂತೆಯೇ, ಇಂಧನ ಪೂರೈಕೆ ಸಂಬಂಧ ಯಾವುದೇ ಬದಲಾವಣೆಯಿಲ್ಲ ಎಂಬುದಾಗಿ ಸಹಿ ಹಾಕುವ ವೇಳೆ ಬುಷ್ ಭರವಸೆ ನೀಡಿದ್ದು, ಭಾರತವು ತನ್ನ ರಿಯಾಕ್ಟರುಗಳಿಗಾಗಿ ಅಮೆರಿಕದಿಂದ ಪರಮಾಣು ಖರೀದಿ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.ಕಳೆದ ವಾರ ಅಮೆರಿಕ ಕಾಂಗ್ರೆಸ್‌ನಿಂದ ಅಂತಿಮವಾಗಿ ಅನುಮೋದಿಸ್ಪಟ್ಟ ಮಸೂದೆಗೆ ಶ್ವೇತಭವನದಲ್ಲಿ ನಡೆದ ಸಮಾರಂಭದಲ್ಲಿ ಬುಷ್ ಸಹಿ ಹಾಕಿ ಐತಿಹಾಸಿಕ ದಾಖಲೆ ಬರೆದರು.ಭಾರತ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಕಾಂಡೋಲೀಸಾ ರೈಸ್ ದ್ವಿಪಕ್ಷೀಯ ಪರಮಾಣು ಒಪ್ಪಂದಕ್ಕೆ ಅಧಿಕೃತವಾಗಿ ಶುಕ್ರವಾರ ಸಹಿ ಹಾಕಲಿದ್ದಾರೆ ಎಂಬುದಾಗಿ ಬುಷ್ ಅಣು ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಅಮೆರಿಕ ವಿದೇಶಾಂಗ ಇಲಾಖೆಯು ಘೋಷಿಸಿದ್ದು, ಇದೊಂದು ಅನಿರೀಕ್ಷಿತ ಘೋಷಣೆಯಾಗಿದೆ.ಶುಕ್ರವಾರದಂದು ಭಾರತ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರೊಂದಿಗೆ ವಿದೇಶಾಂಗ ಕಾರ್ಯದರ್ಶಿ ಕಾಂಡೋಲೀಸಾ ರೈಸ್ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಸೀನ್ ಮೆಕ್‌ಕೊಮಾರ್ಕ್ ತಿಳಿಸಿದ್ದಾರೆ. | ಸಂಬಂಧಿತ ಮಾಹಿತಿ ಹುಡುಕಿ | |
| |
|