ಮೆದುಳು ನಿಷ್ಕ್ರಿಯಗೊಂಡ ಭಾರತೀಯ ವಲಸೆ ಮಹಿಳೆಯ ಅಂಗಾಂಗಳನ್ನು ಆಕೆಯ ಕುಟುಂಬ ದಾನ ಮಾಡುವ ಮೂಲಕ ಅಂಗಾಂಗ ಕಸಿಗೆ ತುರ್ತು ಅಗತ್ಯವಿದ್ದ 9 ಸೌದಿಗಳ ಜೀವವುಳಿಸಿದ ಅಪರೂಪದ ಘಟನೆ ನಡೆದಿದೆ.
ಮೆದುಳು ಸತ್ತಿರುವ, ಗುರುತು ಬಹಿರಂಗವಾಗದಿರುವ ಭಾರತೀಯ ಮಹಿಳೆಯ ಅಂಗಾಂಗಗಳನ್ನು ರಿಯಾದ್‌ನಲ್ಲಿರುವ ಆಸ್ಪತ್ರೆಯಲ್ಲಿ ತೆಗೆದು, ರಿಯಾದ್, ಜೆಡ್ಡಾ, ಡಮ್ಮಂನಲ್ಲಿರುವ ರೋಗಿಗಳಿಗೆ ದಾನ ಮಾಡಲಾಗಿದೆ ಎಂದು ಇಲ್ಲಿನ ಸುದ್ದಿಪತ್ರಿಕೆ ವರದಿ ಮಾಡಿದೆ.
ಅಂಗಾಂಗಗಳ ಬಗ್ಗೆ ವಿವರಗಳು ಕೂಡ ಬಹಿರಂಗಪಡಿಸಿಲ್ಲ. ಫಲಾನುಭವಿಗಳಲ್ಲಿ ಒಬ್ಬರು ಜೆಡ್ಡಾದ ಮಹಿಳೆಯಾಗಿದ್ದು, ಶ್ವಾಸಕೋಶ ಕಾಯಿಲೆಯಿಂದ ನರಳುತ್ತಿದ್ದ ಆಕೆ ಬದುಕುಳಿಯಲು ಶ್ವಾಸಕೋಶ ಕಸಿ ಮಾಡುವ ತುರ್ತು ಅಗತ್ಯವಿತ್ತು. ತಮ್ಮ ಪತ್ನಿ ಕಳೆದ 8 ವರ್ಷಗಳಿಂದ ಕಾಯಿಲೆ ಬಿದ್ದಿದ್ದು, ಒಂದು ತಿಂಗಳ ಹಿಂದೆ ಅಂಗಾಂಗ ಕಸಿಗೆ ಕೋರಿದಳೆಂದು ಮಹಿಳೆಯ ಪತಿ ಅಲಿ ಅಲ್ ಓಫಿ ತಿಳಿಸಿದ್ದಾರೆ.ಆಗಿನಿಂದ ತಾವು ದಾನಿಗಾಗಿ ಕಾಯುತ್ತಿದ್ದು, ಅಲ್ಲಾ ಅವರನ್ನು ಕಾಪಾಡಲಿ ಎಂದು ಉದ್ಗರಿಸಿದ್ದಾನೆ. |