|
ಮಕ್ಕಳಿಗೆ ಕುದುರೆ ಕೊಟ್ಟ ಡಾ.ಕಲಾಂ
|
|
ತಿರುವನಂತಪುರಂ, ಶುಕ್ರವಾರ, 13 ಜುಲೈ 2007( 09:25 IST )
|
|
|
|
|
|
|
|
ಮಕ್ಕಳು ಅಜ್ಜನ ಬೆನ್ನೇರಿ` ಕುದುರೆ ಸವಾರಿ ಆಟವಾಡುವುದು' ಸಾಮಾನ್ಯ. ಆದರೆ ಮಕ್ಕಳಿಗೆ ನಿಜವಾದ ಕುದುರೇ ಸಿಕ್ಕರೆ? ಮಕ್ಕಳ ಪ್ರೀತಿಯ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಇಲ್ಲಿನ ಮಕ್ಕಳಿಗೆ ಕುದುರೆಗಳನ್ನು ಉಡುಗೊರೆ ನೀಡಿದ್ದಾರೆ!
ತಿರುವನಂತಪುರದ ಮಾನಸಿಕ ಭಿನ್ನಸಾಮರ್ಥ್ಯ (ಬುದ್ಧಿಮಾಂದ್ಯ)ದ ಮಕ್ಕಳ ಅನಾಥಾಶ್ರಮಕ್ಕೆ ರಾಷ್ಟರಪತಿಯವರು ಈ ಕೊಡುಗೆ ನೀಡಿದ್ದಾರೆ. ಮಕ್ಕಳಿಗೂ ರಾಷ್ಟ್ಪಪತಿ ಕಲಾಂ ಅಂದರೆ ಅಚ್ಚುಮೆಚ್ಚು, ಅವರ ಬಳಕೆಗಾಗಿ ಈ ಕುದುರೆಗಳು.
ಕ್ರಿಶ್ಚನ್ ಸಂಸ್ಥೆಗಳು ನಡೆಸುವ ಈ ಅನಾಥಾಶ್ರಮಕ್ಕೆ ಕುದುರೆಗಳ ಕೊಡುಗೆ ವಿನೂನತನವಾದುದು. ಕುದುರೆಗಳು ಇದೀಗ ಇಲ್ಲಿನ ಮಕ್ಕಳ ಕುತೂಹಲದ ವಿಷಯವಾಗಿವೆ. ಅವರೂ ಈಗ ಕುದುರೆ ಸವಾರಿ ಮಾಡುತ್ತಿದ್ದಾರೆ, ನಿಜವಾದ ಕುದುರೆಯನ್ನೇರಿ ಎಂಬುದು ವಿಶೇಷ.
|
|
|
|
|
|
|
|