ಸುದ್ದಿ ಜಗತ್ತು
ವ್ಯವಹಾರ
ರಾಜ್ಯ ಸುದ್ದಿ
ರಾಷ್ಟ್ರೀಯ
ಮನರಂಜನೆ
ಸ್ಯಾಂಡಲ್ ವುಡ್
ಬಾಲಿವುಡ್‌
ಇನ್ನಷ್ಟು ಹಾಸ್ಯ...
ಕ್ರೀಡಾ ಜಗತ್ತು
ಕ್ರಿಕೆಟ್ ಟಿಕರ್
ಕ್ರೀಡಾಸುದ್ದಿ
ಕ್ರಿಕೆಟ್‌
ಜ್ಯೋತಿಷ್ಯ
ಜ್ಯೋತಿಷ್ಯಶಾಸ್ತ್ರ
ವಾಸ್ತು
ನಿಮ್ಮ ಜಾತಕ
ಫೋಟೋ ಗ್ಯಾಲರಿ
ಹಾಟ್‌ಶಾಟ್
ಸಿನಿಮಾ
ಬಾಲಿವುಡ್
ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ವಿಶ್ವಸಂಸ್ಥೆ ಅಂಗಣದಲ್ಲಿ ಹಿಂದಿಸಮ್ಮೇಳನ ಆರಂಭ
ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ 8ನೇ ವಿಶ್ವ ಹಿಂದಿ ಸಮ್ಮೇಳನದಲ್ಲಿ ಶುಕ್ರವಾರ ಆರಂಭವಾಗಿದೆ. ವಿಶ್ವಸಂಸ್ಥೆಯ ಮುಖ್ಯಕಾರ್ಯಾಲಯದಲ್ಲಿ ಪ್ರಸ್ತುತ ಹೆಮ್ಮೆಯ ಕಾರ್ಯಕ್ರಮ ಉದ್ಘಾಟನೆಗೊಂಡಿದೆ.

ಭಾರತದಲ್ಲಿ ರಾಷ್ಟ್ರೀಯ ಭಾಷೆಯಾಗಿರುವ ಹಿಂದಿಗೆ ವಿಶ್ವಮಾನ್ಯ ಗರಿಮೆ ನೀಡುವಂತಹ ಕಾರ್ಯಕ್ರಮ ಇದಾಗಿದ್ದು , ಭಾರತೀಯರಿಗೆ ಹೆಚ್ಚಿನ ಮಹತ್ವವಿದೆ. ವಿಶ್ವಸಂಸ್ಥೆಯ ಕಾರ್ಯಾಲಯದಲ್ಲಿ ಜರುಗುತ್ತಿರುವುದು ಇನ್ನೊಂದು ಹಿರಿಮೆಯಾಗಿದೆ.

ದೇಶದ ಖ್ಯಾತ ಕವಿ ಅಶೋಕ್ ಚಕ್ರಧರ ಅಧ್ಯಕ್ಷತೆಯಲ್ಲಿ ಜರುಗುವ ಹಿಂದಿ ಸಮ್ಮೇಳನ ಎರಡನೇ ದಿನವಾದ ಇಂದು ವಿಶೇಷ ಸಮಾವೇಶದಲ್ಲಿ ಭಾಷಾ ವಿಶೇಷತೆ ಮತ್ತು ಕ್ರಾಂತಿ ಕುರಿತಾಗಿ ವಿದ್ವಾಂಸರಿಗೆ ಮಾಹಿತಿ ನೀಡಲಾಗುವುದು.

ವೆಬ್‌ದುನಿಯಾ : ವಿಶ್ವ ಹಿಂದಿ ಸಮ್ಮೇಳನದಲ್ಲಿ, ಪ್ರಪಂಚದ ಮೊತ್ತ ಮೊದಲ ಹಿಂದಿ ಪೋರ್ಟಲ್ ಎಂಬ ಹೆಗ್ಗಳಿಕೆಯ ವೆಬ್‌ದುನಿಯಾ ಕೂಡ ಭಾಗವಹಿಸುತ್ತಿರುವುದು ಸಮ್ಮೇಳನದ ವಿಶೇಷತೆಯಾಗಿದೆ.

ಜಗತ್ತಿನ ಇಷ್ಟು ದೊಡ್ಡ ವೇದಿಕೆಯಲ್ಲಿ ಯಾವುದೇ ಹಿಂದಿ ಪೋರ್ಟಲ್‌ಗೆ ಇಷ್ಟು ದೊಡ್ಡ ಜವಾಬ್ದಾರಿ ದೊರೆತಿರುವುದು ಇದೇ ಮೊದಲು. ದೇಶದ ಖ್ಯಾತ ಕವಿ ಅಶೋಕ್ ಚಕ್ರಧರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಅಧಿವೇಶನದಲ್ಲಿ, ವೆಬ್‌ದುನಿಯಾ ಉಪಾಧ್ಯಕ್ಷ ಪರ್ವಿಂದರ್ ಗುಜ್ರಾಲ್ ಅವರು ಪೋರ್ಟಲ್ ಮತ್ತು ಇದರ ಮೂಲಕ ನಡೆಯುತ್ತಿರುವ ಇತರ ಕಾರ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಿದ್ದಾರೆ.

ವಿಶ್ವದ ಮೊದಲ ಹಿಂದಿ ಪೋರ್ಟಲ್ ವೆಬ್‌ದುನಿಯಾ, ಹಿಂದಿ ಮಾತ್ರವಲ್ಲದೆ ಇತರ 8 ಭಾರತೀಯ ಭಾಷೆಗಳಾದ ಕನ್ನಡ, ಗುಜರಾತಿ, ಪಂಜಾಬಿ, ಮರಾಠಿ, ಬಂಗಾಳಿ, ತಮಿಳು, ತೆಲುಗು ಮತ್ತು ಮಲಯಾಳಂಗಳಲ್ಲಿಯೂ ಯುನಿಕೋಡ್ ಫಾಂಟ್‌ನಲ್ಲಿ ತನ್ನ ಪೋರ್ಟಲ್‌ಗಳನ್ನು ಆರಂಭಿಸಿದ್ದು, ವಿಶ್ವದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವುದು ಇಲ್ಲಿ ಉಲ್ಲೇಖಾರ್ಹ.
ಮತ್ತಷ್ಟು
ಅಸ್ಸಾಂ:120ಗ್ರಾಮಗಳು ನಾಶ
ದೇರಾ ಬಾಬಾ:ಸಿಬಿಐ ತನಿಖೆ
ಸ್ತ್ರೀಪೀಡಕನಿಗೆ 'ಬುದ್ಧಿಕಲಿಸಿದ' ನಾರಿಯರು
ಭಯೋತ್ಪಾದಕರಿಗೆ ಶಿಕ್ಷೆಯಾಗದೆ ವಿಶ್ರಾಂತಿಯಿಲ್ಲ
ಮಕ್ಕಳಿಗೆ ಕುದುರೆ ಕೊಟ್ಟ ಡಾ.ಕಲಾಂ
ಯುಪಿಎನಿಂದ ಫೋನ್ ಕರೆ ಕದ್ದಾಲಿಕೆ -ಸುಷ್ಮಾ ಸ್ವರಾಜ್
ಮುಖಪುಟ  | ನಮ್ಮ ಕುರಿತು  | ಸಲಹೆಗಳು  | ಜಾಹೀರಾತು ನೀಡಲು  | ಮಿತ್ರನಿಗೆ ಕಳಿಸು  | ಹಕ್ಕು ನಿರಾಕರಣೆ
Copyright © 2009 Webdunia.com