|
ಜೈಲಲ್ಲಿರುವ ಪಪ್ಪು ಯಾದವ್ ಮತದಾನ
|
|
ನವದೆಹಲಿ, ಬುಧವಾರ, 18 ಜುಲೈ 2007( 09:09 IST )
|
|
|
|
|
|
|
|
ರಾಷ್ಟ್ರೀಯ ಜನತಾದಳದ ವಿವಾದಾಗ್ರಸ್ತ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರಿಗೆ ಜುಲೈ 19 ರಂದು ಜರುಗುವ ರಾಷ್ಟ್ರಪತಿ ಆಯ್ಕೆ ಚುನಾವಣೆಯಲ್ಲಿ ಮತಚಲಾಯಿಸಲು ನವದೆಹಲಿ ಹೈಕೋರ್ಟ್ ಮಂಗಳವಾರ ಅವಕಾಶ ನೀಡಿದೆ.
ಯಾದವ್ ಚುನಾವಣಾ ದಿನದಂದು ಬೆಳಗಿನ 10 ಗಂಟೆಯಿಂದ ಸಂಜೆ 5 ರವರೆಗಿನ ಯಾವುದಾದರೂ ಸಮಯದಲ್ಲಿ ಸಂಸತ್ತಿನ ಮತಕೇಂದ್ರಕ್ಕೆ ಹೋಗಿ ಮತದಾನ ಮಾಡಲು ಎರಡು ಗಂಟೆಗಳ ಅವಧಿಯ ಅವಕಾಶ ಕಲ್ಪಿಸಲಾಗಿದೆ ಎಂದು ಆದೇಶದಲ್ಲಿ ನ್ಯಾಯಾಲಯವು ತಿಳಿಸಿದೆ.
ಮೂರನೇ ಬಟಾಲಿಯನ್‌ದ ಡಿಸಿಪಿ ಹಾಗೂ ರಿಟರ್ನಿಂಗ್ ಅಧಿಕಾರಿಯೊಂದಿಗೆ ತಿಹಾರ್ ಜೈಲು ಸಂಖ್ಯೆ- 3 ರ ವರಿಷ್ಠಾಧಿಕಾರಿ ಮಾಡಿರುವ ಭದ್ರತಾ ವ್ಯವಸ್ಥೆಯ ನಿಯಂತ್ರಣದಲ್ಲಿ ರಾಜೇಶ್ ರಂಜನ್ ಅವರು ಜುಲೈ 19 ರ ಚುನಾವಣೆ ಮಾಡಬೇಕು ಎಂದು ಆದೇಶ ನಿರ್ದೇಶಿಸಲಾಗಿದೆ.
|
|
|
|
|
|
|
|