|
ಡೆಹ್ರಾಡೂನ್,ದೆಹಲಿಯಲ್ಲಿ ಭೂಕಂಪ
|
|
ಡೆಹ್ರಾಡೂನ್, ಸೋಮವಾರ, 23 ಜುಲೈ 2007( 10:12 IST )
|
|
|
|
|
|
|
|
ದೇಶದ ರಾಜಧಾನಿ ದೆಹಲಿ ಹಾಗೂಉತ್ತರಖಂಡ್‌ದ ಡೆಹ್ರಾಡೂನ್‌ನಲ್ಲಿ ಇಂದು ಬೆಳಗ್ಗೆ ಲಘು ಪ್ರಮಾಣದ ಆದರೆ ತೀವ್ರ ಸ್ವರೂಪದ ಭೂಕಂಪನವಾಗಿರುವುದಾಗಿ ತಿಳಿದುಬಂದಿದೆ.
ಡೆಹ್ರಾಡೂನ್ ಪ್ರದೇಶದಲ್ಲಿ ಸಂಭವಿಸಿದ ಭೂಕಂಪನದ ಪ್ರಮಾಣ ರೆಕ್ಟರ್ ಮಾಪಕದಲ್ಲಿ 4.9 ಪ್ರಮಾಣದಲ್ಲಿತ್ತು ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪನದ ಆಘಾತವು ಉತ್ತರಖಂಡ್‌ನ ಗೋಮುಖ್,ಉತ್ತರಕಾಶಿ ಮುಂತಾದೆಡೆ ಪರಿಣಾಮ ಬೀರಿದೆ.
ಭೂಕಂಪನದ ಪರಿಣಾಮವಾಗಿ ಈ ವರೆಗೆ ಯಾವುದೇ ಸಾವುನೋವು, ಆಸ್ತಿಪಾಸ್ತಿ ಹಾನಿಯಾಗಿರುವ ಕುರಿತು ವರದಿಯಾಗಿಲ್ಲ. ಆದರೆ ಉತ್ತರ ಕಾಶಿಯಲ್ಲಿ ಕೆಲವು ಕಡೆ ಮನೆಯ ಗೋಡೆಗಳಲ್ಲಿ ಬಿರುಕು ಕಂಡು ಬಂದಿದೆ.
ಕಂಪನಾನುಭವವು ಹರಿದ್ವಾರ, ಉತ್ತರ ಕಾಶಿ, ಡೆಹ್ರಾಡೂನ್, ಚಮೋಲಿ ಮುಂತಾದೆಡೆ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೇ ಪ್ರದೇಶಗಳಲ್ಲಿ 1991ರಲ್ಲಿ ಸಂಭವಿಸಿದ ಭೂಕಂಪದಲ್ಲಿ 700 ಮಂದಿ ಬಲಿಯಾಗಿದ್ದರು.
|
|
|
|
|
|
|
|