ಸೆರೆಹಿಡಿದ ಆನೆಗಳ ನೋಂದಣಿ ಮತ್ತು ನಿಯಂತ್ರಣಕ್ಕೆ ಅವುಗಳ ಚರ್ಮದಲ್ಲಿ ಮೈಕ್ರೋಚಿಪ್ ಅಳವಡಿಸುವ ಕಾರ್ಯಾಚರಣೆಯನ್ನು ತಮಿಳುನಾಡಿನ ಅರಣ್ಯಾಧಿಕಾರಿಗಳು ಆರಂಭಿಸಿದ್ದಾರೆ. ಈ ಪರಿಕಲ್ಪನೆಯು ಅರಣ್ಯಾಧಿಕಾರಿಗಳಿಗೆ ಕಾಲಕಾಲಕ್ಕೆ ಆನೆಗಳ ಸ್ಥಿತಿಗತಿ ಅಂದಾಜುಗಳನ್ನು ಮಾಡಲು ಮತ್ತು ಅವುಗಳ ರಕ್ಷಣೆಗೆ ನೀತಿಗಳನ್ನು ರೂಪಿಸಲು ನೆರವಾಗುತ್ತದೆ.
ಕೇಂದ್ರ ಸಚಿವಾಲಯ ಮತ್ತು ವಾರ್ಡನ್ ಆದೇಶದ ಅನುಸಾರ ತಮಿಳುನಾಡಿನಲ್ಲಿ ಆನೆಗಳ ಮೈಕ್ರೋಚಿಪ್ಪಿಂಗ್ ಕಾರ್ಯ ಎತ್ತಿಕೊಳ್ಳಲಾಗಿದೆ ಎಂದು ಅರಣ್ಯ ಪಶುವೈದ್ಯಾಧಿಕಾರಿ ಮನೋಹರನ್ ತಿಳಿಸಿದರು.
ಈ ಕಾರ್ಯಕ್ರಮದಡಿ ಸುಮಾರು ಶೇ.50ರಷ್ಟು ಆನೆಗಳಿಗೆ ಚಿಪ್ ಅಳವಡಿಸಲಾಗಿದೆ. ಅಕ್ಕಿಯ ಕಾಳಿನ ಗಾತ್ರದಲ್ಲಿರುವ ಮೈಕ್ರೊಚಿಪ್ ಮೇಲೆ 10 ಅಂಕಿಗಳ ಸಂಖ್ಯೆಗಳನ್ನು ಕೆತ್ತಲಾಗಿದ್ದು, ಆನೆಯ ಎಡಕಿವಿಯಲ್ಲಿ ಅಳವಡಿಸಲಾಗುವುದು.
ಆನೆಯ ದೇಹದಲ್ಲಿ ಅಳವಡಿಸುವ ಮೈಕ್ರೊಚಿಪ್ ಆನೆಯು ಬದುಕಿರುವವರೆಗೆ ಬಾಳಿಕೆ ಬರಲಿದ್ದು, ಯಾವುದೇ ಆರೋಗ್ಯದ ಸಮಸ್ಯೆ ಉಂಟುಮಾಡುವುದಿಲ್ಲ.
|