ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಾಲು ವಿರುದ್ದದ ಅರ್ಜಿಯನ್ನು ತಳ್ಳಿಹಾಕಿದ ಸು.ಕೋರ್ಟ್
ಸಂಸತ್ ಕ್ಷೇತ್ರದಿಂದ ಸದನದ ಸದಸ್ಯನಾಗಿದ್ದುಕೊಂಡೇ ಚಾಪ್ರಾ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ನೆಲೆಯಲ್ಲಿ ಲಾಲು ಪ್ರಸಾದ್ ಯಾದವ್‌ರ ಕೇಂದ್ರ ಸಚಿವ ಹುದ್ದೆಯಲ್ಲಿನ ಮುಂದುವರಿಕೆಯನ್ನು ಪ್ರಶ್ನಿಸಿ ಹಾಕಲಾಗಿದ್ದ ಅಹವಾಲನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.

ತಾವು ಈ ಅಹವಾಲನ್ನು ಪರಿಗಣಿಸುವುದಿಲ್ಲ ಮತ್ತು ಈ ಬಗ್ಗೆ ವಿಚಾರಣೆ ನಡೆಸುವುದಿಲ್ಲ. ಈ ಅಹವಾಲನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಾಧೀಶ ಬಾಲಕೃಷ್ಣನ್ ನೇತೃತ್ವದ ಪೀಠ ಹೇಳಿದ್ದು, ಪ್ರಚಾರದ ಉದ್ದೇಶದೊಂದಿಗೆ ಈ ಅಹವಾಲನ್ನು ದಾಖಲಿಸಲಾಗಿದೆ ಎಂದು ಪೀಠ ಸೂಚಿಸಿತು.

ವಕೀಲ ಪಿ ಸಿ ಶರ್ಮಾರಿಂದ ಹಾಕಲಾದ ಈ ಅಹವಾಲು, ಮತ್ತೊಂದು ಕ್ಷೇತ್ರದಲ್ಲಿನ ಸದಸ್ಯನಾಗಿದ್ದರೂ, ಅದೇ ಸದನಕ್ಕಾಗಿ ಲೋಕಸಭೆ ಅಥವಾ ವಿಧಾನಸಭೆ ಸದಸ್ಯ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವೇ ಎಂಬ ಸಂವಿಧಾನಿಕ ಪ್ರಶ್ನೆಯನ್ನು ಎತ್ತಿತ್ತು.

ನ್ಯಾಯವ್ಯಾಪ್ತಿಯ ಕೊರತೆಯ ನೆಲೆಯಲ್ಲಿ ತನ್ನ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಳ್ಳಿಹಾಕಿದ್ದ ಅಲಹಾಬಾದ್ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಶರ್ಮಾ ಈ ಅಹವಾಲನ್ನು ಸಲ್ಲಿಸಿದ್ದರು.

2004ರ ಸಾರ್ವತ್ರಿಕ ಚುನಾವಣೆಯಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮದೇಪುರ್ ಮತ್ತು ಚಾಪ್ರ ಲೋಕಸಭೆ ಕ್ಷೇತ್ರದಿಂದ ಚುನಾವಣೆಯನ್ನು ಎದುರಿಸಿದ್ದರು. ಈ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಲಾಲು ನಂತರ ಮಧೇಪುರ್ ಸ್ಥಾನದಿಂದ ರಾಜಿನಾಮೆ ನೀಡಿದ್ದರು.

ಚಾಪ್ರಾ ಸ್ಥಾನದಿಂದ ಲಾಲು ಚುನಾವಣೆ ಕಾನೂನುಬಾಹಿರವಾಗಿದ್ದು, ಅಲ್ಲಿ ಅವರು ನ್ಯಾಯಸಮ್ಮತವಾಗಿ ಲೋಕಸಭೆ ಸದಸ್ಯ ಸ್ಥಾನವನ್ನು ಗೆದ್ದಿಲ್ಲ ಮತ್ತು ಮಧೇಪುರ ಸ್ಥಾನದಿಂದ ರಾಜಿನಾಮೆ ನೀಡಿದ ದಿನಾಂಕದಿಂದ ಅವರ ಸಚಿವ ಹುದ್ದೆಯಲ್ಲಿನ ಮುಂದುವರಿಕೆ ಅಸಂವಿಧಾನಿಕವಾದದು ಎಂದು ಅರ್ಜಿದಾರರು ವಾದಿಸಿದ್ದರು.
ಮತ್ತಷ್ಟು
34 ವರ್ಷ ಸೆರೆಮನೆ ವಾಸ: ಭವಿಷ್ಯ ಅನಿಶ್ಚಿತ
ಹೊಗೆ ಎಬ್ಬಿಸುವಂಥದ್ದೇನೂ ಹೇಳಿಲ್ಲ: ಕರುಣಾನಿಧಿ
ದೆಹಲಿ : ಬಾಲೆಯ ಮೇಲೆ ಅತ್ಯಾಚಾರ, ಇಬ್ಬರ ಬಂಧನ
ಹೊಗೆ: ತಮಿಳು ಚಿತ್ರರಂಗದಿಂದಲೂ ಉಪವಾಸ
ಅಡ್ವಾಣಿ-ಜಿನ್ನಾ ವಿವಾದ ಪರಿಹಾರವಾಗಿಲ್ಲ: ವಿಎಚ್‌ಪಿ
ಚೆನ್ನೈ: ಕನ್ನಡಿಗರ ಹೋಟೆಲ್, ವಿಷ್ಣು ಫಾರ್ಮ್ ಹೌಸ್‌ಗೆ ದಾಳಿ