ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಎನ್‌ಎಸ್‌ಜಿಯಿಂದ ಭಾರತಕ್ಕೆ ವಿನಾಯಿತಿ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎನ್‌ಎಸ್‌ಜಿಯಿಂದ ಭಾರತಕ್ಕೆ ವಿನಾಯಿತಿ?
ಗುರುವಾರ ನಡೆದಿರುವ ಅಣು ಸರಬರಾಜು ಸಮೂಹದ (ಎನ್ಎಸ್‌ಜಿ)ದ ಪ್ರಥಮ ದಿನದ ಸಭೆಯಲ್ಲಿ ಯಾವುದೇ ನಿರ್ಣಾಯಕ ಅಂಶಗಳು ಹೊರಬೀಳದಿದ್ದರೂ, ಪರಮಾಣು ವ್ಯಾಪಾರಕ್ಕಾಗಿ ಭಾರತಕ್ಕೆ ವಿನಾಯಿತಿಗಾಗಿ ನೀಡುವ ಪರವಾಗಿ ನಿರ್ಧಾರ ಹೊರಹೊಮ್ಮುವ ಸಾಧ್ಯತೆ ಇದೆ ಸೋರಿಕೆಗೊಂಡಿರುವ ಸುದ್ದಿಗಳು ಹೇಳಿವೆ.

ದಿನ ಪೂರ್ತಿ ನಡೆದ ಸಭೆಯಲ್ಲಿ 45 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದು, ಭಾರತದ ಮೂರು ದಶಕಗಳ ಪರಮಾಣು ಪ್ರತ್ಯೇಕತೆಯನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಒಮ್ಮತಕ್ಕೆ ಬರುವ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಆದರೆ ಕೆಲ ರಾಷ್ಟ್ರಗಳು ಇನ್ನೂ ತಮ್ಮ ಅಭಿಪ್ರಾಯವನ್ನು ಕಾಯ್ದಿರಿಸಿವೆ ಎಂದು ಹೇಳಲಾಗಿದೆ.

ಸಮೂಹವು ಒಮ್ಮತಕ್ಕೆ ಬರುವ ಸನಿಹದಲ್ಲಿದ್ದು, ಶುಕ್ರವಾರ ಪತ್ರಿಕಾ ಹೇಳಿಕೆ ನೀಡುವ ಸಂಭಾವ್ಯತೆ ಎಂದು ಪಾಶ್ಚಿಮಾತ್ಯ ರಾಜತಾಂತ್ರಿಕರೊಬ್ಬರು ತಿಳಿಸಿದ್ದಾರೆ. ಎನ್ಎಸ್‌ಜಿಯ ಎರಡನೇ ಅಧಿವೇಶನದ ಎರಡು ದಿನಗಳ ಸಭೆಯ ಆರಂಭಿಕ ದಿನದ ಸಭೆಯಲ್ಲಿ ಪ್ರತಿನಿಧಿಗಳು ಅಮೆರಿಕ ಮಂಡಿಸಿದ ಪರಿಷ್ಕೃತ ಕರಡನ್ನು ಕೂಲಂಕಷವಾಗಿ ಪರಿಗಣಿಸಿದವು.

ಭಾರತಕ್ಕೆ ಪೂರ್ಣ ವಿನಾಯಿತಿ ನೀಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ರಾಷ್ಟ್ರಗಳ ಬಗ್ಗೆ ಕೇಳಿದ ಪ್ರಶ್ನೆಗೆ ರಾಜತಾಂತ್ರಿಕ ಅವರು ಸಕಾರಾತ್ಮಕವಾಗಿದ್ದಾರೆ ಮತ್ತು ತಮ್ಮ ನಿಲುವನ್ನು ಮೆದುಗೊಳಿಸಿದ್ದಾರೆ ಎಂದು ಉತ್ತರಿಸಿದರು.

ನ್ಯೂಜಿಲ್ಯಾಂಡ್, ಆಸ್ಟ್ರಿಯಾ, ನಾರ್ವೆ, ಐರ್ಲ್ಯಾಂಡ್, ನೆದರ್ಲ್ಯಾಂಡ್ ಸೇರಿದಂತೆ ಹಲವು ದೇಶಗಳು ಈ ಪರಿಷ್ಕೃತ ಕರಡು ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದವು. ಆದರೆ, ಅಮೆರಿಕ ಭಾರತ ಪರ ಬಲವಾಗಿ ವಾದಿಸಿದ್ದು, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ಮತ್ತು ಬೃಹತ್ ಆರ್ಥಿಕತೆಯನ್ನು ಜಾಗತಿಕ ಪರಮಾಣು ಮುಖ್ಯವಾಹಿನಿಗೆ ತರುವಲ್ಲಿ ಈ ವಿನಾಯಿತಿ ಒಂದು ಐತಿಹಾಸಿಕ ಅವಕಾಶವಾಗಲಿದೆ ಎಂದು ಪ್ರತಿಪಾದಿಸಿತು.

ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ಮತ್ತು ಪ್ರಧಾನ ಮಂತ್ರಿಯ ವಿಶೇಷ ಪ್ರತಿನಿಧಿ ಶ್ಯಾಮ್ ಸರಣ್ ದಿನಪೂರ್ತಿ ಅಮೆರಿಕ ಅಧಿಕಾರಿಗಳ ಸಂಪರ್ಕದಲ್ಲಿದ್ದರು. ಮೊದಲ ದಿನದ ಸಭೆಯಲ್ಲಿ ಪ್ರಗತಿಯನ್ನು ಕಾಣಲಾಗಿದ್ದರೂ, ಶುಕ್ರವಾರ ಭಾರತದ ಪರವಾಗಿ ಫಲಿತಾಂಶ ಹೊರಬೀಳಲಿದೆ ಎಂದು ಬಲವಾಗಿ ನಂಬಲಾಗಿದೆ.
ಮತ್ತಷ್ಟು
ದಾಖಲೆಯ ಅಂಶಗಳನ್ನು ಬಚ್ಚಿಟ್ಟಿಲ್ಲ: ಅಮೆರಿಕ
ಆರ್‌ಎಸ್‌ಎಸ್-ಭಜರಂಗದಳ ನಿಷೇಧಿಸಿ: ಪಾಸ್ವಾನ್
ವಿಮಾನ ತುರ್ತು ಭೂಸ್ಪರ್ಶ-ಸೋನಿಯಾ ಪಾರು
ಅಣು ಪರೀಕ್ಷೆ ನಡೆಸಬಹುದು: ಸರಕಾರದ ಭರವಸೆ
ವಂಚಕ ಸರಕಾರ ಎಂದ ಕಾರಟ್, ಸಂದಿಗ್ಧತೆಯಲ್ಲಿ ಮುಲಾಯಂ
ಪತ್ರವು ರಹಸ್ಯವಲ್ಲ, ಒಪ್ಪಂದವನ್ನು ಬೆಂಬಲಿಸುತ್ತದೆ: ಕಾಕೋಡ್ಕರ್