ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಒರಿಸ್ಸಾ: ಮಾನವ ಜೀವಕ್ಕೆ ವೈವಿಧ್ಯಮಯ 'ದರಪಟ್ಟಿ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒರಿಸ್ಸಾ: ಮಾನವ ಜೀವಕ್ಕೆ ವೈವಿಧ್ಯಮಯ 'ದರಪಟ್ಟಿ'
PTI
ಇತ್ತೀಚಿನ ಕೋಮುಹಿಂಸಾಚಾರ ಮತ್ತು ಮಾವೋವಾದಿ ದಾಳಿಗಳಲ್ಲಿ ಜೀವ ಕಳೆದುಕೊಂಡ ವ್ಯಕ್ತಿಗಳ ಹತ್ತಿರದ ಸಂಬಂಧಿಗಳಿಗೆ ನೀಡಲಾಗಿರುವ ಪರಿಹಾರದ ಮೊತ್ತಗಳನ್ನು ಗಮನಿಸಿದರೆ, ಒರಿಸ್ಸಾದಲ್ಲಿ ಸ್ಥಳದಿಂದ ಸ್ಥಳಕ್ಕೆ ಮತ್ತು ಪರಿಸ್ಥಿತಿಯಿಂದ ಪರಿಸ್ಥಿತಿಗೆ ಮಾನವ ಜೀವದ ಮೌಲ್ಯವು ವಿಭಿನ್ನವಾಗಿರುವುದು ಕಂಡು ಬರುತ್ತದೆ.

ವಿವಿಧ ಘಟನೆಗಳಲ್ಲಿ ಜೀವ ಕಳೆದುಕೊಂಡವರ ಹತ್ತಿರದ ಸಂಬಂಧಿಗಳಿಗೆ, ಎರಡು ಲಕ್ಷರೂಪಾಯಿಯಿಂದ 12 ಲಕ್ಷರೂಪಾಯಿಗಳ ತನಕ ಬೆಲೆ ಕಟ್ಟಲಾಗಿದೆ. ಇತ್ತೀಚಿನ ಕೋಮು ಹಿಂಸಾಚಾರದಲ್ಲಿ ಅಸುನೀಗಿದವರಿಗೆ ಐದು ಲಕ್ಷ ಪರಿಹಾರ ಘೋಷಿಸಲಾಗಿದ್ದರೆ, ಜೈಪುರ ಜಿಲ್ಲೆಯ ಕಳಿಂಗ ನಗರದಲ್ಲಿ ಪೊಲೀಸರ ಗೋಲಿಬಾರ್‌ನಲ್ಲಿ ಹತರಾದವರಿಗೆ 12 ಲಕ್ಷರೂಪಾಯಿ ಪರಿಹಾರ ಘೋಷಿಸಲಾಗಿದೆ.

ಇತ್ತೀಚಿನ ಕೋಮು ಹಿಂಸಾಚಾರದಲ್ಲಿ ಮಡಿದವರಿಗೆ ಆರಂಭದಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಎರಡು ಲಕ್ಷ ಘೋಷಿಸಿದ್ದರು. ಕೇಂದ್ರ ಗೃಹಸಚಿವ ಶಿವರಾಜ್ ಪಾಟೀಲ್ ಬುಧವಾರ ಹಿಂಸಾಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಕೇಂದ್ರದಿಂದಲೂ ಮೂರು ಲಕ್ಷ ಪರಿಹಾರ ಘೋಷಿಸಿದ ಬಳಿಕ ಒಟ್ಟು ಮೊತ್ತ ಐದುಲಕ್ಷಕ್ಕೇರಿದೆ.

ಕಳಿಂಗ ನಗರದಲ್ಲಿ 2006ರ ಜನವರಿ 2ರಂದು ಸಂಭವಿಸಿದ ಪೊಲೀಸ್ ಗೋಲಿಬಾರ್‌ನಲ್ಲಿ ಮಡಿದವರಿಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ತಲಾ ಐದೈದು ಲಕ್ಷ ಘೋಷಿಸಿದ್ದವು. ಇದಲ್ಲದೆ, ಎಐಸಿಸಿ ಎರಡು ಲಕ್ಷ ಘೋಷಿಸಿದ್ದು ಒಟ್ಟು ಮೊತ್ತ 12 ಲಕ್ಷವಾಗಿತ್ತು.

ಅದೆನೇ ಇದ್ದರೂ, ಮಾವೋವಾದಿಗಳ ಆಕ್ರಮಣಕ್ಕೆ ತುತ್ತಾಗಿ ಸಾವಿಗೀಡಾದವರ ಜೀವದ ಮೌಲ್ಯ ಎರಡು ಲಕ್ಷ ರೂಪಾಯಿ ಮಾತ್ರ. 2008ರಲ್ಲಿ ಇದುವರೆಗೆ ನಕ್ಸಲರ ದಾಳಿಯಲ್ಲಿ ಸುಮಾರು 34 ಮಂದಿ ನಾಗರೀಕರು ತಮ್ಮ ಪ್ರಾಣತೊರೆದಿದ್ದಾರೆ. ಇವರಿಗೆ ಸರಕಾರ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಇತ್ತೀಚಿನ ಕೋಮುಹಿಂಸಾಚಾರದಲ್ಲಿ ಮಡಿದವರಿಗೆ ಪರಿಹಾರ ಘೋಷಿಸಿದ್ದರೂ, ದುಷ್ಕರ್ಮಿಗಳಿಂದ ಹತ್ಯೆಗೀಡಾಗಿರುವ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಮತ್ತು ಇತರರ ಜೀವಕ್ಕೆ ಇದುವರೆಗಿನ ಮಾಹಿತಿ ಪ್ರಕಾರ ಯಾವುದೇ ಬೆಲೆ ಕಟ್ಟಲಾಗಿಲ್ಲ ಮತ್ತು ಪರಿಹಾರವನ್ನೂ ಘೋಷಿಸಲಾಗಿಲ್ಲ!
ಮತ್ತಷ್ಟು
ಪಕ್ಷೇತರರ ಕುರಿತು ಕೋಡಾ ಪುಸ್ತಕ ಬರೆಯುತ್ತಾರಂತೆ!
ಎನ್‌ಎಸ್‌ಜಿಯಿಂದ ಭಾರತಕ್ಕೆ ವಿನಾಯಿತಿ?
ದಾಖಲೆಯ ಅಂಶಗಳನ್ನು ಬಚ್ಚಿಟ್ಟಿಲ್ಲ: ಅಮೆರಿಕ
ಆರ್‌ಎಸ್‌ಎಸ್-ಭಜರಂಗದಳ ನಿಷೇಧಿಸಿ: ಪಾಸ್ವಾನ್
ವಿಮಾನ ತುರ್ತು ಭೂಸ್ಪರ್ಶ-ಸೋನಿಯಾ ಪಾರು
ಅಣು ಪರೀಕ್ಷೆ ನಡೆಸಬಹುದು: ಸರಕಾರದ ಭರವಸೆ